ಅಂದಿನ ಕಾಲದಿಂದಲೂ ಆಷಾಡ ಮಾಸದಲ್ಲಿ ಗಂಡ ಹೆಂಡತಿಯರು ಒಟ್ಟಿಗೆ ಸೇರುವುದಿಲ್ಲ ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಮೂರನೇ ತಿಂಗಳನ್ನು ಆಷಾಡ ತಿಂಗಳು ಎಂದು ಕರೆಯಲಾಗುತ್ತದೆ. ಆಷಾಡ ತಿಂಗಳಿನಲ್ಲಿ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಇದೊಂದು ಅಶುಭ ತಿಂಗಳು ಎನ್ನುವುದಾಗಿ ಕರೆಯಲಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಒಳ್ಳೆಯ ಕೆಲಸಕ್ಕೆ ಯಾರೂ ಕೂಡ ಕೈಹಾಕಲು ಹೋಗುವುದಿಲ್ಲ. ಈ ಬಾರಿ ಆಶಾಡ ಮಾಸ ಜೂನ್ 30 ರಿಂದ ಪ್ರಾರಂಭವಾಗಿ ಜುಲೈ 28ರ ವರೆಗೆ ಇರಲಿದೆ. ಇನ್ನು ಹಿಂದೂ ಧರ್ಮದ ಪ್ರಕಾರ ಈ ಸಂದರ್ಭದಲ್ಲಿ ಮದುವೆಯಾದ ಹೊಸ ದಂಪತಿಗಳ ಜೊತೆಯಾಗಿ ಇರಬಾರದು ಹೆಂಡತಿಯನ್ನು ತವರುಮನೆಗೆ ಕಳುಹಿಸಿಕೊಡುತ್ತಾರೆ.
ಒಂದು ವೇಳೆ ಹೆಂಡತಿಯ ಹೊಸದರಲ್ಲಿ ಆಷಾಢಮಾಸದಲ್ಲಿ ಗಂಡನ ಮನೆಯಲ್ಲಿಯೇ ಇದ್ದರೆ ಅತ್ತೆ ಸೊಸೆ ನಡುವೆ ಜಗಳ ಆಗುತ್ತದೆ ಎಂಬುದಾಗಿ ಪ್ರತೀತಿ ಇದೆ. ಹೌದು ಗೆಳೆಯರೇ ಮದುವೆಯಾದ ಆರಂಭಿಕ ವರ್ಷಗಳಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು. ಅದರಲ್ಲಿಯೂ ಆಷಾಢಮಾಸದಲ್ಲಿ ಅವರಿಬ್ಬರು ಒಂದಾದರೆ ಮಗು ಚೈತ್ರಮಾಸದಲ್ಲಿ ಜನಿಸಬಹುದು ಎಂಬುವ ಲೆಕ್ಕಾಚಾರವಿದೆ. ಚೈತ್ರಮಾಸದಲ್ಲಿ ಬೇಸಿಗೆಕಾಲ ಇರುವ ಕಾರಣದಿಂದಾಗಿ ಒಂದು ವೇಳೆ ಮಗು ಬೇಸಿಗೆಗಾಲದಲ್ಲಿ ಜನಿಸಿದರೆ ಬೇಸಿಗೆಗಾಲದ ಬಿಸಿಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದಾಗಿದೆ.ಈ ಸಂದರ್ಭದಲ್ಲಿ ನವಜಾತ ಶಿಶು ಹಾಗೂ ತಾಯಿ ಕೂಡ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದಾಗಿದೆ.
ಇನ್ನೂ ಒಂದು ನಂಬಿಕೆಯ ಪ್ರಕಾರ ಆಶಾಡ ಮಾಸವೆಂದರೆ ರೈತಾಪಿ ವರ್ಗದ ತಿಂಗಳು. ಈ ಸಂದರ್ಭದಲ್ಲಿ ನವವಿವಾಹಿತರು ಹೆಂಡತಿಯ ಗುಂಗಿನಲ್ಲಿ ಕೃಷಿ ಕೆಲಸವನ್ನು ಬಿಡುತ್ತಾರೆ ಎನ್ನುವ ಕಾರಣಕ್ಕಾಗಿ ಹೆಂಡತಿಯನ್ನು ತವರು ಮನೆಗೆ ಕಳಿಸುತ್ತಾರೆ. ಇನ್ನು ಈ ಆಷಾಢಮಾಸ ಮಳೆಗಾಲದ ಆರಂಭವಾಗಿರುವ ಕಾರಣದಿಂದಾಗಿ ಶುಭ ಕಾರ್ಯಕ್ರಮಗಳಿಗೆ ಪ್ರಶಸ್ತವಾದ ಸಮಯವಲ್ಲ ಎಂಬ ಕಾರಣಕ್ಕೆ ಇದನ್ನು ಅಶುಭ ಮಾಸ ಎಂದು ಕರೆಯುತ್ತಾರೆ. ಇನ್ನು ಈ ಆಶಾಢ ಮಾಸವು ದೇವತೆಗಳಿಗೆ ಸಂಧ್ಯಾಕಾಲದ ಸಮಯವಾಗಿದೆ. ಧರ್ಮಶಾಸ್ತ್ರಗಳ ಪ್ರಕಾರ ಆಷಾಢ ಮಾಸಕ್ಕೆ ಇಷ್ಟೊಂದು ಅರ್ಥ ಇವೆ.