ಅಂದು ೫೦೦೦ ರೂಪಾಯಿ ಗಾಗಿ ಪರದಾಡುತ್ತಿದ್ದ ವ್ಯಕ್ತಿ, ಇಂದು ಇವರ ವಸ್ತು ನೀವು ಕೂಡ ಬಳಸುತ್ತಿದ್ದೀರಾ. ಭಾರತದ ಅತಿ ದೊಡ್ಡ ಬಿಸಿನೆಸ್ ಮ್ಯಾನ್.
ಜೀವನದಲ್ಲಿ ಯಶಸ್ಸು ಎಂಬುವುದು ಒಮ್ಮೆಲೆ ಸಿಗುವುದಿಲ್ಲ, ನಿರಾಶೆ ಸೋಲು ಎಂಬ ಮೆಟ್ಟಿಲುಗಳ ಹತ್ತಿ ಬಂದಾಗ ಮಾತ್ರ ಅದು ನಮ್ಮ ಕೈ ಸೇರುತ್ತದೆ. ಅಪ್ಪ ಅಮ್ಮನ ಬಳಿ ಎಷ್ಟು ಹಣ ಆಸ್ತಿ ಇದ್ದರೂ ಯಶಸ್ಸನ್ನು ಖರೀದಿ ಮಾಡಲು ಸಾಧ್ಯ ಇಲ್ಲ ಅದಕ್ಕೆ ಇರುವ ಒಂದೇ ಮಾರ್ಗ ಎಂದರೆ ಅದು ಪ್ರಯತ್ನ ಮಾತ್ರ. ಹೀಗೆ ಒಬ್ಬ ವ್ಯಕ್ತಿಯ ಕಥೆ, ಕೌಟುಂಬಿಕ ಹಿನ್ನಲೆ ಗಟ್ಟಿ ಇದ್ದರೂ, ತಂದೆಯ ವರ್ಚಸ್ಸು ಬಳಸದೆ ಸಾಧನೆ ಮಾಡಿದ ಮಗನ ಕಥೆ. ತಂದೆ ರಾಜಕೀಯದಲ್ಲಿ ಇದ್ದರೂ ಅದನ್ನು ಮುಂದುವರೆಸದೆ ಭಾರತದ ಇತಿಹಾಸ ಬದಲಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದ ವ್ಯಕ್ತಿಯ ಕಥೆ. ಬನ್ನಿ ತಿಳಿಯೋಣ.
ಇವರ ಹೆಸರು ಸುನಿಲ್ ಭಾರತಿ ಮಿತ್ತಲ್ ಮೂಲತಃ ಪಂಜಾಬ್ ರಾಜ್ಯದವರು. ತಂದೆ ರಾಜಕೀಯವಾಗಿ ಸಕ್ರಿಯವಾಗಿ ಇದ್ದ ವ್ಯಕ್ತಿ, ಆದರೆ ಅವರ ನೆರಳಲ್ಲಿ ಬದುಕಲು ಇಷ್ಟ ಪಡದೆ ತನ್ನದೇ ಸ್ವ ಉದ್ಯಮ ಶುರು ಮಾಡಬೇಕು ಎಂದು ಯೋಚಿಸಿ ತಂದೆಯ ಬಳಿ 20,000 ಸಾಲ ಪಡೆದು ಆರಂಭಿಸಿದ್ದು ಸೈಕಲ್ ಬ್ಯುಸಿನೆಸ್. ಹೇಳುವಷ್ಟರ ಮಟ್ಟಿಗೆ ಕೈ ಹಿದಿಯದಿದ್ದರು ಅಂದು ಹೀರೋ ಸೈಕಲ್ ಮಾಲೀಕರ ಪರಿಚಯ ಮಾತ್ರ ಆಗಿತ್ತು. ಸಾಧಾರಣ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದರು. ಆದರೂ ಸಮಾಧಾನ ಇಲ್ಲ ದಿನ ಕಳೆದಂತೆ ವಹಿವಾಟು ಕುಂಟುತ್ತಾ ಹೋಯಿತು. ಹಣ ಹೊಂದಿಸಲು ಕೂಡ ಸಾಧ್ಯ ಆಗುತ್ತಿರಲಿಲ್ಲ.
ಹೀಗೆ ಒಂದೊಮ್ಮೆ ಹೀರೋ ಸೈಕಲ್ ಕಂಪನಿ ಮಾಲೀಕ ಮೋಹನ್ ಲಾಲ್ ಮುಂಜಾಲ್ ಬಳಿ 5000 ಸಾಲ ಕೇಳಿದರು. ಹಿಂದೆ ಮುಂದೆ ನೋಡದೆ ಅವರು ಚೆಕ್ ಬರೆದು ಕೊಟ್ಟರು. ಆದರೆ ಹೋಗುವಾಗ ಒಂದು ಮಾತು ಹೇಳಿದ್ದರು “ಇದನ್ನು ಜೀವನದಲ್ಲಿ ರೂಢಿ ಮಾಡಿಕೊಳ್ಳ ಬೇಡ ” ಎಂದು. ಅದು ನಾಟಿತ್ತು. ಹೀಗೆ ಪಂಜಾಬ್ ಬಿಟ್ಟು ಮುಂಬೈ ನಗರಕ್ಕೆ ಬಂದು ಜನರೇಟರ್ ಇಂಪೋರ್ಟ್ ಮಾಡುವ ಕೆಲಸ ಮಾಡುತ್ತಿದ್ದರೂ ಆದರೆ ಭಾರತ ಸರ್ಕಾರ ಇದಕ್ಕೂ ನಿಬಂಧನೆ ಹಾಕಿದಾಗ ಅದು ಕೂಡ ಮುಚ್ಚಿ ಹೋಯಿತು.
ಕೊನೆಗೆ ಪುಷ್ ಬಟನ್ ಫೋನ್ ಇಂಪೋರ್ಟ್ ಮಾಡಿ ಮಾರಾಟ ಮಾಡುವ ಕಾರ್ಯಕ್ಕೆ ಕೈ ಹಾಕಿದರು ಇಲ್ಲಿಂದ ಜನ್ಮ ತಾಳಿದ್ದು ಬೀಟಲ್ ಫೋನ್. ಇದು ಮುಂದಕ್ಕೆ cellular ಫೋನ್ ಗಳ ಮಾರುಕಟ್ಟೆ ತೆರೆದಾಗ . ಸರ್ಕಾರದಿಂದ ಇದಕ್ಕೂ license ಪಡೆದರು. ಹೀಗೆ ಆರಂಭ ಗೊಂಡ ಸಂಸ್ಥೆ ಭಾರತೀಯ ಏರ್ಟೆಲ್. ಹೌದು ಆರಂಭಿಕ ಹಂತದಲ್ಲಿ ತೊಂದರೆ ಎದುರಿಸಿದರು ಕೂಡ ಕೊನೆ ಕೊನೆಗೆ ತನ್ನ ಕಬಂಧ ಭಾಹುವನ್ನು ಇಡೀ ದೇಶಕ್ಕೆ ವಿಸ್ತರಿಸಿತ್ತು. ಈಗ ಅದು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಸಂಸ್ಥೆ. ಸದಾ ಜಿಯೋ ಮತ್ತು ಏರ್ಟೆಲ್ ನಡುವೆ ಪೈಪೋಟಿ ನಡೆಯುತ್ತಲೇ ಇರುತ್ತದೆ. ಭಾರತದ ಅತ್ಯಂತ ದೊಡ್ಡ ನೆಟ್ವರ್ಕ್ ಸೇವೆಗಳಲ್ಲಿ ಒಂದಾಗಿದೆ ಏರ್ಟೆಲ್.