ಅಪ್ಪುಗೆ ಎಂದು ಕಥೆ ಮಾಡಿದ್ದ ದ್ವಿತ್ವ ಸಿನಿಮಾದಲ್ಲಿ ಈಗ ಸ್ಟಾರ್ ನಟನಿಗೆ ಅವಕಾಶ: ಆತ ಕನ್ನಡಿಗ ಕೂಡ ಅಲ್ಲ. ಬೇಸರದಲ್ಲಿ ಅಭಿಮಾನಿಗಳು. ಯಾರಂತೆ ಗೊತ್ತೆ??

150

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು ಅವರನ್ನು ಮರೆಯುವುದಾದರು ಹೇಗೆ.. ಅವರು ಇಲ್ಲವಾಗಿ 10 ತಿಂಗಳು ಕಳೆದು ಹೋಗಿದ್ದರು ಸಹ, ಅಭಿಮಾನಿಗಳು ಇನ್ನು ಅಪ್ಪು ಅವರ ನಗುವನ್ನು, ಅವರ ಮಾತುಗಳನ್ನು ಮರೆತಿಲ್ಲ. ಮುಂದಿನ ತಿಂಗಳಿಗೆ ಅಪ್ಪು ಅವರು ಇಲ್ಲವಾಗಿ, 1 ವರ್ಷ ಕಳೆಯುತ್ತದೆ, ಆ ಸಮಯಕ್ಕೆ ಅಪ್ಪು ಅವರ ಕನಸಿನ ಕೂಸು ಗಂಧದ ಗುಡಿ ಬಿಡುಗಡೆ ಆಗಲಿದೆ. ಅಪ್ಪು ಅವರು ಬಹಳ ಇಷ್ಟಪಟ್ಟು ಒಪ್ಪಿಕೊಂಡಿದ್ದ ಮತ್ತೊಂದು ಸಿನಿಮಾ ದ್ವಿತ್ವ, ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಅವರು ಈ ಸಿನಿಮಾ ನಿರ್ದೇಶನ ಮಾಡಬೇಕಿತ್ತು.

ಅಪ್ಪು ಅವರಿಗಾಗಿ ಅದ್ಭುತವಾದ ಕಥೆಯನ್ನೇ ರೆಡಿ ಮಾಡಿಟ್ಟುಕೊಂಡಿದ್ದರು ಪವನ್, ಆದರೆ ಇಲ್ಲಿಯವರೆಗೂ ಅಪ್ಪು ಅವರು ಇಲ್ಲದೆ ದ್ವಿತ್ವ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಇದೀಗ ದ್ವಿತ್ವ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ದ್ವಿತ್ವ ಶುರುವಾಗುವ ಸೂಚನೆ ಸಿಕ್ಕಿದ್ದು, ಈ ಸಿನಿಮಾದಲ್ಲಿ ತಮಿಳು ನಟ ವಿಕ್ರಂ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ವಿಚಾರದ ಸ್ವತಃ ವಿಕ್ರಂ ಅವರೇ ಸೂಚನೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೋಬ್ರಾ ಸಿನಿಮಾದ ಪ್ರೆಸ್ ಮೀಟ್ ನಲ್ಲಿ, ಕನ್ನಡ ಸಿನಿಮಾದಲ್ಲಿ ಯಾವಾಗ ನಟಿಸುತ್ತೀರಿ ಎಂದು ವಿಕ್ರಂ ಅವರಿಗೆ ಪ್ರಶ್ನೆ ಕೇಳಲಾಯಿತು.

ಅದಕ್ಕೆ ಉತ್ತರಿಸಿದ ನಟ, ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ, ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ, ಅವರು ಹೇಳಿದ ಕಥೆ ನನಗೆ ಇಷ್ಟವಾಗಿದೆ, ಸಿನಿಮಾ ಓಕೆ ಮಾಡಿದ್ದೇನೆ, ಅನೌನ್ಸ್ಮೆಂಟ್ ಆಗಬೇಕಿದೆ..ಎಂದು ಹೇಳಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲೂ ತಯಾರಾಗುವ ಹಾಗೆ ತೋರುತ್ತಿದೆ, ಆದರೆ ಪವನ್ ಅವರು ವಿಕ್ರಂ ಅವರಿಗೆ ಹೇಳಿರುವುದು ದ್ವಿತ್ವ ಸಿನಿಮಾ ಕಥೆಯೇ ಅಥವಾ ಬೇರೆ ಕಥೆಯೇ ಎನ್ನುವ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಇದು ದ್ವಿತ್ವ ಸಿನಿಮಾ ಇರಬಹುದು ಎಂದುಕೊಂಡ ಅಭಿಮಾನಿಗಳು ಬೇಸರಗೊಂಡಿದ್ದಾರೆ, ಆದರೆ ಪವನ್ ಕುಮಾರ್ ಅವರು, ದ್ವಿತ್ವ ಸಿನಿಮಾ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.