ಆತ ಟಾಪ್ ಇರಬಹುದು, ಆದರೆ ಏಷ್ಯಾಕಪ್ ನಲ್ಲಿ ಚೆನ್ನಾಗಿ ಆಡಿದ್ರೆ ಮಾತ್ರ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಚಾನ್ಸ್ ಎಂದ ಪಠಾಣ್: ಹೇಳಿದ್ದು ಯಾರ ಬಗ್ಗೆ ಗೊತ್ತೇ??

128

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ವಲಯದ ಸುದ್ದಿಗಳ ಪ್ರಕಾರ ಏಷ್ಯಾಕಪ್ ನಲ್ಲಿ ಅತ್ಯಂತ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತದೆ ಎಂಬುದಾಗಿ ಸುದ್ದಿಗಳು ಕೇಳಿ ಬರುತ್ತಿವೆ. ಹೀಗಾಗಿ ಈ ಬಾರಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾರೆಲ್ಲ ವಿಶ್ವಕಪ್ ಆಡಲಿದ್ದಾರೆ ಎಂಬುದು ಕೌತುಕವಾಗಿ ಉಳಿದಿದೆ.

ಅದರಲ್ಲೂ ವಿಶೇಷವಾಗಿ ಮಾಜಿ ಆಟಗಾರ ಆಗಿರುವ ಇರ್ಫಾನ್ ಪಠಣ್ ರವರು ಈ ಒಬ್ಬ ಆಟಗಾರ ಏಷ್ಯಾ ಕಪ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಮಾತ್ರ ಅವರನ್ನು ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಿ ಎಂಬುದಾಗಿ ಸಲಹೆ ನೀಡಿದ್ದಾರೆ. ಅದು ಕೂಡ ಒಬ್ಬ ಸ್ಟಾರ್ ಆಟಗಾರನ ಬಗ್ಗೆ ಈ ರೀತಿ ಇರ್ಫಾನ್ ಪಠಾಣ್ ಮಾತನಾಡಿರುವುದು. ಹೌದು ಇಷ್ಟೆಲ್ಲಾ ಮಾತನಾಡಿರುವುದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ. ಏಷ್ಯಾ ಕಪ್ ನಲ್ಲಿ ಆಯ್ಕೆಯಾಗಿರುವ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ರವರು ಇಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ ಮಾತ್ರ ಅವರನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿ ಎಂಬುದಾಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ಆಸ್ಟ್ರೇಲಿಯ ನೆಲದಲ್ಲಿ ಪಿಚ್ ಅತ್ಯುತ್ತಮವಾಗಿದ್ದು ವಿರಾಟ್ ಕೊಹ್ಲಿ ಅವರಿಗೆ ಎಲ್ಲಿ ಹಾಡಿರುವ ಅನುಭವ ಸಾಕಷ್ಟಿದೆ ಹೀಗಾಗಿ ಅವರು ತಂಡದಲ್ಲಿ ಇರಬೇಕಾಗಿರುವುದು ಅಗತ್ಯವಾಗಿದೆ. ಆದರೆ ಲಯವನ್ನು ತಪ್ಪಿರುವ ವಿರಾಟ್ ಕೊಹ್ಲಿ ರವರು ಏಷ್ಯಾ ಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಸ್ಥಾನವನ್ನು ಸಾವಿತುಪಡಿಸಿಕೊಳ್ಳುವಂತಹ ಪ್ರದರ್ಶನವನ್ನು ನೀಡಲೇಬೇಕು ಎಂಬುದಾಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ. ಆಸ್ಟ್ರೇಲಿಯ ನೆಲದಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿರುವ ಆಟಗಾರ ವಿರಾಟ್ ಕೊಹ್ಲಿ. ಒಂದು ವೇಳೆ ಅವರು ಏಷ್ಯಾ ಕಪ್ ನಲ್ಲಿ ಮತ್ತೆ ವಿಫಲವಾದರೆ ಅವರ ಬದಲಿಗೆ ಬೇರೆ ಅವಕಾಶಗಳ ಆಯ್ಕೆಯನ್ನು ಬಿಸಿಸಿಐ ಪರಿಗಣಿಸಬೇಕು ಎಂಬುದಾಗಿ ಕೂಡ ಮಾತನಾಡಿದ್ದಾರೆ.

Leave A Reply

Your email address will not be published.