ಆಫೀಸ್ ಬಾಡಿಗೆ ಕಟ್ಟಬೇಕಂತ ಇಲ್ಲ, ಕರೆಂಟ್ ಬಿಲ್ ಕೂಡ ಕಟ್ಟಬೇಕಂತಿಲ್ಲ. ಹೊಸ ಐಡಿಯಾ ಇಂದ ಉದ್ಯಮ ಕೂಡ ಸಲೀಸಾಗಿದೆ, ಖರ್ಚು ಕೂಡ ಕಡಿಮೆ.
ಜೀವನದಲ್ಲಿ ಆಗುವುದು ಎಲ್ಲಾ ಒಳ್ಳೆಯದಕ್ಕೆ ಎಂದು ಹೇಳುತ್ತಾರೆ, ದೇವರು ಏನೇ ಮಾಡಿದರೂ ಅದರಲ್ಲಿ ನಮಗೆ ಒಳಿತನ್ನು ಇಟ್ಟಿರುತ್ತಾರೆ ಎನ್ನುತ್ತಾರೆ. ಪ್ರತಿ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವರೊಬ್ಬನನ್ನು ನೆನೆಸಿ ಮುಂದುವರಿದರೆ ಯಶಸ್ಸು ಸಿಗುತ್ತದೆ ಎಂಬುವುದು ನಮ್ಮ ನಂಬಿಕೆ. ಹಾಗೆಯೇ ಇಲ್ಲೊಬ್ಬರ ಕಥೆ. ಕಷ್ಟಗಳು ಬಂದಾಗ ಮಾತ್ರ ನಮಗೂ ಒಳ್ಳೆಯ ಉಪಾಯಗಳು ಹೊಳೆಯುವುದು. ಇಲ್ಲವಾದರೆ ನಮ್ಮ ಮನಸ್ಸು ಕೂಡ ಸೀಮಿತವಾಗಿ ಇರುತ್ತದೆ. ಇವರ ಹೆಸರು ಆನಂದ್ ಮತ್ತು ಅವನಿ, ಆನಂದ್ ಅವರು ವೃತ್ತಿಯಲ್ಲಿ ವಕೀಲರು.
ಇವರು ಕೋರ್ಟ್ ಹೊರಗೆ ತಮ್ಮದೇ ಕಚೇರಿ ಹೊಂದಿದ್ದರು. ಬಾಡಿಗೆ ಲೆಕ್ಕಾಚಾರದಲ್ಲಿ ಆಫಿಸ್ ನಡೆಸುತ್ತಿದ್ದರು. ಇವರ ಧರ್ಮ ಪತ್ನಿ ಆವನಿ ಅವರು ಪ್ರೈವೇಟ್ ಶಾಲೆಯಲ್ಲಿ ಟೀಚರ ಆಗಿ ಕೆಲಸ ಮಾಡುತ್ತಿದ್ದರು. ಹೀಗೆ ಸಾಗುತ್ತಿದ್ದ ಸಂಸಾರದಲ್ಲಿ ಕೋರೋಣ ಎಂಬ ಮಾರಿ ಅಡ್ಡವಾಯಿತು. ಕೋರ್ಟ್ ಎಲ್ಲವೂ ಬಂದಾಯಿತು, ಕೆಲಸ ಇದ್ದರೂ ಕೋರ್ಟ್ ಹೊರಾಂಗಣದಲ್ಲಿ ಆಫಿಸ್ ತೆರೆಯುವಂತೆ ಇಲ್ಲ. ಹೀಗೆ ಕುಳಿತು ಚಿಂತೆಯಲ್ಲಿ ಯೋಚಿಸುತ್ತಾ ಇದ್ದಾಗ ಹೊಳೆದಿದ್ದು ಈ ಐಡಿಯಾ. ಆನಂದ್ ಬಳಿಯಲ್ಲಿ ಕಾರೊಂದು ಇತ್ತು, ಅವರು ಅದನ್ನೇ ಆಫಿಸ್ ಆಗಿ ಪರಿವರ್ತನೆ ಮಾಡೋಣ ಎಂದು ಯೋಚಿಸಿದರು.
ಅದಕ್ಕಾಗಿಯೇ ಅವರು 1.5ಲಕ್ಷ ಖರ್ಚು ಮಾಡಿ ಕಾರಿನ ಮೇಲಕ್ಕೆ ಸೋಲಾರ್ ಪ್ಯಾನಲ್ ಅಳವಡಿಸಿದರು. ಅದರಿಂದ ಝೆರಾಕ್ಸ್ ಮತ್ತು ಕಂಪ್ಯೂಟರ್ ರನ್ ಆಗುತ್ತಿತ್ತು. ಇದನ್ನೇ ಆಫೀಸ್ ಆಗಿ ಮಾಡಿಕೊಂಡು ಕಾರ್ಯ ಮುಂದುವರೆಸಿದರು. ಈ ಒಂದು ಐಡಿಯಾ ಎಲ್ಲರಿಗೂ ಇಷ್ಟ ಆಯಿತು . ಬೇರೆ ಬೇರೆ ಜಾಗದಿಂದ ಜನರು ಬಂದು ಇದನ್ನು ನೋಡಿಕೊಂಡು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಇವರು ಬಹಳ ಫೇಮಸ್ ಆದರು. ಇತ್ತ ಕಡೆ ಹೆಂಡತಿ ಕೋರೋಣ ಸಮಯದಲ್ಲಿ ತನ್ನ ಕೆಲಸ ಕೂಡ ಕಳೆದುಕೊಂಡಿದ್ದರು. ಇದೀಗ ಕೋರ್ಟ್ ಎಲ್ಲಾ ಓಪನ್ ಆಗಿದ್ದು ಆನಂದ್ ಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸಿದರೆ , ಆವನಿ ಅವರು ಆಫಿಸ್ ನೋಡಿಕೊಳ್ಳುತ್ತಾರೆ.