ಇದ್ದಕ್ಕಿದ್ದ ಹಾಗೆ ರೋಹಿತ್ ನಾಯಕತ್ವದ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ವೀರೇಂದ್ರ ಸೆಹ್ವಾಗ್. ಹೇಳಿದ್ದೇನು ಗೊತ್ತೇ??

142

ನಮಸ್ಕಾರ ಸ್ನೇಹಿತರೇ ವಿರೇಂದ್ರ ಸೆಹ್ವಾಗ್ ಭಾರತ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್. ಭಾರತ ತಂಡದ ಆರಂಭಿಕರಾಗಿ ತಮ್ಮ ಅದ್ಭುತ ಆಟದ ಮೂಲಕ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಕ್ರಿಕೆಟ್ ನಂತರ ನಿವೃತ್ತಿಯಾಗಿರುವ ವಿರೇಂದ್ರ ಸೆಹ್ವಾಗ್ ವೀಕ್ಷಕ ವಿವರಣೆಗಾರರಾಗಿ, ಕ್ರಿಕೆಟ್ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಅದಲ್ಲದೇ ತಮ್ಮ ಅನುಭವಗಳನ್ನು ಬಳಸಿಕೊಂಡು ಆಗಾಗ ಸಲಹೆಗಳನ್ನು ಸಹ ನೀಡುತ್ತಾ ಇರುತ್ತಾರೆ.

ಸದ್ಯ ಭಾರತ ಕ್ರಿಕೆಟ್ ತಂಡದ ಬಗ್ಗೆ ಮಾತನಾಡಿರುವ ವಿರೇಂದ್ರ ಸೆಹ್ವಾಗ್ , ಭಾರತ ಟಿ 20 ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ರೋಹಿತ್ ಶರ್ಮಾರವರನ್ನು ಕೆಳಗಿಳಿಸುವುದು ಸೂಕ್ತ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಗೆ ಫಿಟ್ ನೆಸ್ ಸಮಸ್ಯೆ ಇದೆ. ಆರು ತಿಂಗಳು ಅವರು ಆಡಿದರೇ, ಇನ್ನಾರು ತಿಂಗಳು ಗಾಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರ ಜೊತೆ ಅವರಿಗೆ ನಾಯಕತ್ವದ ಹೊರೆ ಹೊರಿಸಿರುವುದು ಸೂಕ್ತವಲ್ಲ. ಅದರ ಬದಲು ಅವರನ್ನು ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನನ್ನಾಗಿ ನೇಮಿಸಿ.

ಟಿ 20 ನಾಯಕತ್ವವನ್ನು ಯುವಕರಿಗೆ ನೀಡಿ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಬಿಸಿಸಿಐ ಮೂರು ಮಾದರಿಯ ಕ್ರಿಕೆಟ್ ಗೆ ಒಬ್ಬರೇ ನಾಯಕರನ್ನು ನೇಮಿಸುತ್ತಿರೆಂದರೇ ಆಗ ರೋಹಿತ್ ಶರ್ಮಾರವರೇ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ. ಸದ್ಯ ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಗೆ ಆಯ್ಕೆಯಾಗುವುದು ಅನುಮಾನ. ಆ ನಂತರ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ 20 ಸರಣಿ ಆಡುವರು. ಆದರೇ ಅಷ್ಟರೊಳಗೆ ಫಿಟ್ ಆಗುತ್ತಾರಾ ಎಂಬ ಅನುಮಾನ. ಸದ್ಯ 35ರ ಹರೆಯದ ರೋಹಿತ್ ಶರ್ಮಾ ಗೆ ಈಗಲೇ ಉತ್ತರಾಧಿಕಾರಿಯನ್ನು ಹುಡುಕುವುದು ಉತ್ತಮ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.