ಇನ್ನು 15 ದಿನದಲ್ಲಿ ಕಾಲೇಜು ಮುಗಿಸಿ ಮನೆಗೆ ಹೋಗಬೇಕಿದ್ದ ಹುಡುಗಿ, ಬಾಯ್ ಫ್ರೆಂಡ್ ಜೊತೆ ಹೋಟೆಲ್ ನಲ್ಲಿ ಠಿಕಾಣಿ. ಎರಡೇ ದಿನಗಳಲ್ಲಿ ಏನಾಗಿದೆ ಗೊತ್ತೇ??
ಪ್ರೀತಿ ಪ್ರೇಮದ ಹಿಂದೆ ಬಿದ್ದು ಯುವಕ ಯುವತಿಯರ ಪ್ರಾಣಿ ಹಾನಿ ಆಗಿರುವ ಘಟನೆಗಳು ಸಾಕಷ್ಟು ನಡೆದಿದೆ. ಇಂಥದ್ದೇ ಒಂದು ಘಟನೆ ಈಗ ಮೈಸೂರಿನಲ್ಲಿ ನಡೆದಿದೆ. ಇನ್ನು 15 ದಿನಗಳಲ್ಲಿ ಪದವಿ ಮುಗಿಸಿ, ಊರಿಗೆ ಹೋಗಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂದುಕೊಂಡಿದ್ದ ಅಪೂರ್ವ ಶೆಟ್ಟಿ, ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್ ಒಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ. ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.
ಪಿರಿಯಾಪಟ್ಟಣದ ಹರಳಹಳ್ಳಿ ಎನ್ನುವ ಊರಿನಲ್ಲಿ ವಾಸವಾಗಿರುವ ರವಿ ಎನ್ನುವವರ ಮಗಳು ಅಪೂರ್ವ, ಈಕೆಗೆ ಈಗ 21 ವರ್ಷ ವಯಸ್ಸು. ಅಪೂರ್ವ ಗೆ ಒಬ್ಬ ಸ್ನೇಹಿತ ಇದ್ದನು, ಆತನ ಹೆಸರು ಆಶಿಕ್, ಕೆಲ ವರ್ಷಗಳಿಂದ ಆಶಿಕ್ ಜೊತೆ ಪ್ರೀತಿ ಮಾಡುತ್ತಿದ್ದ ಅಪೂರ್ವ, ಕೆಲ ದಿನಗಳಿಂದ ಹುಣಸೂರು ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ಆಶಿಕ್ ಜೊತೆಗೆ ಉಳಿದುಕೊಂಡಿದ್ದಳು, ಆಶಿಕ್ ಸಹ ಆಕೆಯ ಜೊತೆಗಿದ್ದು, ಆಗಾಗ ಹೊರಗೆ ಹೋಗುವುದು, ಮತ್ತೆ ವಾಪಸ್ ಹೋಟೆಲ್ ರೂಮ್ ಗೆ ಬರುವುದು ಮಾಡುತ್ತಿದ್ದ. ಆದರೆ ಆ ದಿನ ಹೋಟೆಲ್ ಇಂದ ಹೊರಹೋದ ಆಶಿಕ್ ಮತ್ತೆ ಹೋಟೆಲ್ ಗೆ ಬರಲಿಲ್ಲ . ಇತ್ತ ಅಪೂರ್ವ ಸಹ ಹೋಟೆಲ್ ರೂಮ್ ಇಂದ ಹೊರಗೆ ಬರಲೆ ಇಲ್ಲ.
ಇದರಿಂದ ಹೋಟೆಲ್ ನವರಿಗೆ ಅನುಮಾನ ಬಂದು, ರೂಮ್ ಒಳಗೆ ಬಂದಿರುವ ಇಂಟರ್ಕಾಮ್ ಗೆ ಕರೆ ಮಾಡಿದ್ದು, ರಿಸೀವ್ ಮಾಡದೆ ಇದ್ದಾಗ, ಅನುಮಾನ ಬಂದು ದೇವರಾಜ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ. ಪೊಲೀಸರು ಬಂದು ನೋಡಿದಾಗ, ಅಪೂರ್ವ ಶೆಟ್ಟಿ ಮೃತ ದೇಹ ಸಿಕ್ಕಿದೆ. ಅಪೂರ್ವ ಸ್ನೇಹಿತರು ಹೇಳಿರುವ ಪ್ರಕಾರ, ಆಶಿಕ್ ಜೊತೆಗೆ ಕೆಲ ವರ್ಷಗಳಿಂದ ಪ್ರೇಮದಲ್ಲಿದ್ದಳು, ಈ ವಿಚಾರ ಮನೆಯವರಿಗೂ ಗೊತ್ತಾಗಿ ಜಗಳ ಸಹ ಆಗಿದ್ದರೂ ಸಹ, ಆತನ ಜೊತೆ ರಿಲೇಶನ್ಷಿಪ್ ಮುಂದುವರೆಸಿದ್ದಳು. ಇದೀಗ ಅಪೂರ್ವ ತಂದೆ ತಾಯಿ ಹೇಳಿರುವ ಪ್ರಕಾರ, ಹೋಟೆಲ್ ನಲ್ಲಿದ್ದಾಗ, ಇಬ್ಬರ ನಡುವೆ ಜಗಳ ನಡೆದು, ಆತನೇ ಮಗಳನ್ನು ಕೊಲೆ ಮಾಡಿರಬಹುದು ಎಂದು ದೂರು ನೀಡಿದ್ದಾರೆ. ಪೊಲೀಸರು ಆಶಿಕ್ ನನ್ನು ಬಂಧಿಸಿದಾಗ, ಆತ ಕೂಡ ಈ ಘಟನೆ ಬಳಿಕ, ಆತ್ಮಹತ್ಯೆ ಮಾಡುವ ಪ್ರಯತ್ನ ಮಾಡಿದ್ದ ಎಂದು ತಿಳಿದುಬಂದಿದೆ.