ಇಬ್ಬರು ಶ್ರೇಷ್ಠ ನಿರ್ದೇಶಕರಾದ ಪ್ರಶಾಂತ್ ನೀಲ್ ಹಾಗು ರಾಜಮೌಳಿ ಬಗ್ಗೆ ಹಿಂದಿ ನಿರ್ದೇಶಕ ಹಾಗು ನಿರ್ಮಾಪಕ ಕರಣ್ ಜೋಹರ್ ಹೇಳಿದ್ದೇನು?
ಕರಣ್ ಜೋಹರ್ ಬಾಲಿವುಡ್ ನ ದೊಡ್ಡ ನಿರ್ದೇಶಕ ಹಾಗು ನಿರ್ಮಾಪಕರಲ್ಲಿ ಒಬ್ಬರು, ಸದಾ ನೆಪೋಟಿಸ್ಮ್ ಬಗ್ಗೆ ಮಾತೆತ್ತಿದ್ದರೆ ಮೊದಲಿಗೆ ಬರುವ ಹೆಸರು ಈ ಕರಣ್ ಜೋಹರ್. ಅನೇಕ ಸಿನೆಮಾ ನಂತರ ಮಕ್ಕಳ್ಳನ್ನು ಸ್ಟಾರ್ ಮಾಡಿದ ನಿರ್ದೇಶಕ ಕರಣ್ ಜೋಹರ್ ಎಂದರೆ ತಪ್ಪಾಗಲಾರದು. ಅದೇ ರೀತಿ ಇವರ ಚಿತ್ರಗಳು ಕೂಡ ಹಾಗೇನೇ ಉತ್ತಮ ಗುಣಮಟ್ಟ ಹಾಗೇನೇ ದೊಡ್ಡ ಬಂಡವಾಳದಿಂದ ಕೂಡಿರುತ್ತದೆ. ಆದರೆ ಇವರಿಗೆ ಠಕ್ಕರ್ ಕೊಟ್ಟಿದ್ದು ಮಾತ್ರ ಹಿಂದಿಯೇತರ ನಿರ್ದೇಶಕರಾದ ರಾಜಮೌಳಿ ಹಾಗು ಪ್ರಶಾಂತ್ ನೀಲ್.
ಕರಣ್ ಜೋಹರ್ ಅವರ ಸಿನೆಮಾ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಜುಗ್ ಜುಗ್ ಜಿಯೋ ಎನ್ನುವ ಸಿನೆಮಾ ಬಿಡುಗಡೆ ಆಗಲಿದೆ, ಇದರ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದಿ ಹಾಗು ಇತರ ಭಾಷೆಗಳ ನಡುವೆ ನಡೆಯುತ್ತಿರುವ ಜಟಾಪಟಿ ಬಗ್ಗೆ ಮಾತಾಡಿದ್ದಾರೆ. ಜೋಹರ್ ಈ ಭಾಷಾ ತಾರತಮ್ಯದ ಬಗ್ಗೆ ನಂಬಿಕೆ ಇಟ್ಟಿಲ್ಲ ಅಂತೆ, ಅದಲ್ಲದೆ ರಾಜಮೌಳಿ ಹಾಗು ಪ್ರಶಾಂತ್ ನೀಲ್ ರಂತಹ ನಿರ್ದೇಶಕರು ಭಾರತೀಯ ಸಿನೆಮಾ ರಂಗವನ್ನು ಬೇರೆ ಎತ್ತರಕ್ಕೆ ಕೊಂಡುಹೋಗುತ್ತಿದ್ದರೆ ಎಂದು ಪ್ರಶಂಸೆ ಕೂಡ ಮಾಡಿದ್ದಾರೆ.
KGF ಚಾಪ್ಟರ್ ೨ ಹಾಗು RRR ಸಿನೆಮಾಗಳು ಗಲ್ಲ ಪೆಟ್ಟಿಗೆ ಅಲ್ಲಿ ದೊಡ್ಡ ಸುದ್ದಿ ಮಾಡಿತ್ತು, ಆ ಸುದ್ದಿ ಜೊತೆಗೆ ಭಾಷಾವಾರು ವಿಷಯಗಳು ಕೂಡ ಚರ್ಚೆಗೆ ಬಂದಿದ್ದವು, ಈ ಚರ್ಚೆಗೆ ತುಂಬಾ ದೊಡ್ಡ ದೊಡ್ಡ ನಟರು ಕೂಡ ಮಾತಾಡಿದ್ದಾರೆ, ಸಲ್ಮಾನ್ ಖಾನ್, ಅಜಯ್ ದೇವ್ಗನ್, ಕಿಚ್ಚ ಸುದೀಪ್ ರಂತಹ ಘಟಾನುಘಟಿಗಳು ಈ ಚರ್ಚೆಯಲ್ಲಿ ಭಾಗವಹಿಸಿ ದೇಶಾದ್ಯಂತ ಸುದ್ದಿ ಆಗಿತ್ತು. ಇದೀಗ ಕರಣ್ ಜೋಹರ್ ತಮ್ಮ ಅಭಿಪ್ರಾಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಭಾಷಾ ಚರ್ಚೆ ಬಗ್ಗೆ ಮಾತಾಡುತ್ತ, ನಾನು ಹೆಮ್ಮೆಯಿಂದ ಹೇಳಬಲ್ಲೆ KGF ಹಾಗು RRR ಇದೆಲ್ಲವೂ ಭಾರತೀಯ ಸಿನೆಮಾದ ಭಾಗಗಳೇ ಆಗಿವೆ, ಈ ಸಿನೆಮಾಗಳು ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮವಾಗಿ ಮಾಡಿದೆ, ಇದನ್ನ ಭಾರತೀಯ ಸಿನೆಮಾಗಳೆಂದೇ ಕರೆಯಬೇಕು, ನಮಗೆ ಈ ಚಿತ್ರಗಳ ಬಗ್ಗೆ ಹೆಮ್ಮೆ ಇದೆ, ನಮಗೆ ಭಾರತೀಯ ಚಿತ್ರಗಳ ಮೇಲೆ ಹೆಮ್ಮೆಯಿದೆ. ಈ ಸಿನೆಮಾಗಳೆಲ್ಲ ಭಾರತೀಯ ಚಿತ್ರರಂಗವನ್ನು ಇನ್ನೊಂದು ಎತ್ತರಕ್ಕೆ ಕರೆದುಕೊಂಡು ಹೋಗಿದೆ, ಪ್ರಶಾಂತ್ ನೀಲ್, ರಾಜಮೌಳಿ, ಸುಕುಮಾರ್ ಹಾಗು KGF ಸಿನೆಮಾಗಳು ಭಾರತೀಯ ಸಿನೆಮಾ ಎಷ್ಟು ಎತ್ತರಕ್ಕೆ ತಲುಪಬಹುದು ಎಂದು ತೋರಿಸಿಕೊಟ್ಟಿದೆ, ಅಲ್ಲದೆ ಎಷ್ಟು ಜನರನ್ನು ತಲುಪಬಹುದು ಎಂದು ಮನವರಿಕೆ ಮಾಡಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಇನ್ನು ಮುಂದುವರೆಸುತ್ತ, ಭಾರತದ ಪ್ರತಿಯೊಂದು ಭಾಗದ ಸಿನೆಮಾ ನಿರ್ಮಾಪಕರು ಸಂಘಟಿತರಾಗಬೇಕು, ರಾಜಮೌಳಿ ಅವರು ಭಾರತ ಸಿನೆಮಾ ಎಂದು ಮಾತ್ರ ಇರಬೇಕು ಎಂದು ಅನೇಕ ಬಾರಿ ಹೇಳಿದ್ದಾರೆ. ಇತ್ತೀಚಿಗೆ ನಡೆದ ಕ್ರಾಸ್ ಓವರ್ ಉತ್ತಮವಾಗಿತ್ತು, ದಕ್ಷಿಣದ ಸಿನೆಮಾಗಳು ಹಿಂದಿ ಅಲ್ಲಿ ಉತ್ತಮ ವ್ಯವಹಾರ ನಡೆಸಿದೆ. ನಮಗೆ ಆಸ್ಕರ್ ಗೆಲ್ಲುವುದು ಮುಖ್ಯವಲ್ಲ, ನಾವು ಭಾರತೀಯ ಚಿತ್ರರಂಗವನ್ನು ಬೆಳೆಸಲು ಬಯಸುತ್ತೇವೆ, ಅದು ಮತ್ತೆ ಈ ಚಿತ್ರಗಳು ಗೆಲ್ಲುವ ಮೂಲಕ ಸಾಬೀತಾಗಿದೆ ಎಂದು ಜೋಹರ್ ಹೇಳಿದ್ದಾರೆ. ಪ್ರತಿಯೊಂದು ಭಾಷೆಯಲ್ಲಿ ಬಿಡುಗಡೆ ಆಗುವ ಸಿನೆಮಾಗಳು ಬಾಕ್ಸ್ ಆಫೀಸ್ ಅಲ್ಲಿ ಉತ್ತಮ ಕಲೆಕ್ಷನ್ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.