ಈ ಆಸ್ಟ್ರೇಲಿಯಾ ಸುಂದರಿ RCB ಅಭಿಮಾನಿ ಕೂಡ. ಇದೀಗ ಕನ್ನಡದ ಹೆಮ್ಮೆಯ ಚಿತ್ರ KGF chapter 2 ನೋಡಿದ ಮೇಲೆ ಯಶ್ ಅಭಿಮಾನಿ. ಇವರೇನು ಹೇಳಿದ್ದಾರೆ ಗೊತ್ತೇ?

287

ಯಶ್ ಯಶ್ ಯಶ್. ಯಶ್ ನಟನೆಯ KGF ವಿಶ್ವದೆಲ್ಲೆಡೆ ಸುದ್ದಿಯಾಗುತ್ತಿದೆ. ಯಾವ ಹೊಸ ಸಿನೆಮಾಗೂ ಬಗ್ಗದೆ ಬಿಡುಗಡೆಯಾಗಿ ೩ ವಾರ ಆದರೂ ಕೂಡ ಎಗ್ಗಿಲ್ಲದೆ ಮುಂದೆ ಸಾಗುತ್ತಿದೆ ಕನ್ನಡದ ಚಿತ್ರ KGF. ಇಡೀ ಜಗತ್ತೇ ಮೆಚ್ಚಿರುವ KGF ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇಂತಹ ಸಿನೆಮಾಗೆ ವಿದೇಶಿಗರು ಕೂಡ ಫಿದಾ ಆಗಿದ್ದರೆ. ಇದಕ್ಕೆ ಆಸ್ಟ್ರೇಲಿಯಾ ಸುಂದರಿ ಕೂಡ ಹೊಸ ಸೇರ್ಪಡೆ ಆಗಿದ್ದಾರೆ. ಇವರು KGF ಬಗ್ಗೆ ಹೇಳಿದ ಮಾತು ಕೇಳಿದ್ರೆ ನೀವು ಆಶ್ಚರ್ಯ ಪಡುತ್ತೀರ.

Chloe Amanda Bailey ಎನ್ನುವ ಆಸ್ಟ್ರೇಲಿಯಾ ಮೂಲದ ಯುವತಿ ಪಕ್ಕ RCB ಹಾಗು ವಿರಾಟ್ ಕೊಹ್ಲಿ ಅಭಿಮಾನಿ. ಈಕೆಯ RCB ಹಾಗು ಕೊಹ್ಲಿ ಮೇಲಿನ ಅಭಿಮಾನಕ್ಕೆ ಭಾರತೀಯರಿಂದ ಕೂಡ ದೊಡ್ಡ ಮಟ್ಟಿಗೆ ಗೌರವ ಪಡೆದಿದ್ದಾರೆ. ಈಕೆಯ ಅಭ್ಯಾಸ ಬಾಲಿವುಡ್ ಸಿನೆಮಾ ನೋಡುವುದು ಹಾಗೇನೇ ವಿರಾಟ್ ಕೊಹ್ಲಿ ಕ್ರಿಕೆಟ್ ನೋಡುವುದು. ಈ ಹಿಂದೆ ಕನ್ನಡ ಇನ್ನೊಂದು ಮಾಸ್ಟರ್ಪೀಸ್ ಸಿನೆಮಾ ಲವ್ ಮೋಕ್ಟ್ರೈಲ್ ಕೂಡ ನೋಡಿ ತಮ್ಮ ಟ್ವಿಟ್ಟರ್ ಅಲ್ಲಿ ಹೋಗಲಿ ಎರಡು ಲೈನ್ ಕೂಡ ಬರೆದಿದ್ದಾರೆ ಈ ಆಸ್ಟ್ರೇಲಿಯನ್ ಬೆಡಗಿ.

ಇದೀಗ KGF Chapter 2 ನೋಡಿದ್ದರೆ ಎಂದು ತಮ್ಮ ಟ್ವಿಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ. ” KGF ಚಾಪ್ಟರ್ ೨ ನಾನು ಸ್ವಲ್ಪ ತಡವಾಗಿ ನೋಡಿದ್ದೇನೆ. ಈ ಸಿನೆಮಾ ಅದ್ಭುತವಾಗಿ ಮಾಡಿದ್ದಾರೆ, ವಿಶುಯಲ್ ಅದ್ಭುತವಾಗಿದೆ, ಸೌಂಡ್ ಎಫೆಕ್ಟ್ ಹಾಗು BGM ಅದ್ಭುತವಾಗಿದೆ. ಯಶ್ ಖಂಡಿತವಾಗಿಯೂ ಅದ್ಭುತವಾಗಿ ಕಾಣುತ್ತಾರೆ. ಅವರ ಬಟ್ಟೆ ಡಿಸೈನ್ ಸ್ಟೈಲ್ ಎಲ್ಲ ರಾಕಿ ಭಾಯ್ ಗೆ ಸರಿಹೊಂದುತ್ತದೆ. ಇದೊಂದು ನಿಜವಾಗಿಯೂ ಉತ್ತಮ ಸಿನೆಮಾ” ಎಂದು ತಮ್ಮ ಟ್ವಿಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ.

ರಾಕಿ ಭಾಯ್ ಯಾ ಈ KGF ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಅದಲ್ಲದೆ ಅಮೇರಿಕಾದಲ್ಲಿ ಭಾರತೀಯ ಸಿನೆಮಾ ಈ ವರೆಗೂ ಮಾಡಲಾಗದ ದಾಖಲೆಯನ್ನು ಈ ಸಿನೆಮಾ ಮಾಡಿದೆ. ರಾಕಿ ನಟನೆ, ಖದರ್, ಕಣ್ತುಂಬಿಕೊಂಡು ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾರೆ. ಈ KGF ಸಿನೆಮಾ ಹಾಲಿವುಡ್ ರೇಂಜ್ ಅಲ್ಲಿ ನಿಂತಿದೆ. ಫುಟ್ಬಾಲ್ ತಂಡಗಳು ಕೂಡ ಈ KGF ಟೈಟಲ್ ಬಳಸಿಕೊಳ್ಳುತ್ತಿವೆ. ಅಷ್ಟೊಂದು ಮಟ್ಟಿಗೆ ಮೆಚ್ಚುಗೆ ವಿಶ್ವದಾದ್ಯಂತ ಸಿಕ್ಕಿದೆ ಪ್ರಶಾಂತ್ ನೀಲ್ ನಿರ್ದೇಶನದ KGF Chapter 2 ಸಿನೆಮಾಗೆ.

Leave A Reply

Your email address will not be published.