ಈ ಇಬ್ಬರು ದಂಪತಿಗಳಿಗೆ 27 ಮಕ್ಕಳಂತೆ. ಹೌದು ಅಚ್ಚರಿ ಎನಿಸಿದರೂ ಸತ್ಯ ಇವರನ್ನೆಲ್ಲ ಹೇಗೆ ನೋಡಿಕೊಳ್ಳುತ್ತಾರೆ?

394

ಜೀವನ ಎಂದ ಮೇಲೆ ಕಷ್ಟ ನಷ್ಟಗಳು ಇದ್ದದ್ದೇ, ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಒಳ್ಳೆಯ ಕೆಲಸ ಮಾಡದಿದ್ದರೆ ಅದಕ್ಕೆ ಬೆಲೆ ಇಲ್ಲ. ಹಾಗೆಯೇ ಮತ್ತೊಬ್ಬರ ನೋವಿಗಾಗಿ ಮಿಡಿಯಬೇಕು ಆಗಲೇ ಜೀವನ ಸಾರ್ಥಕತೆಯ ಕಾಣುತ್ತದೆ.ಇಂತಹದೇ ಒಂದು ಪರಿವಾರದ ಬಗ್ಗೆ ನಾವಿಂದು ತಿಳಿಯೋಣ. ಈ ದಂಪತಿಗಳಿಗೆ 27 ಮಕ್ಕಳು ಅಂದರೆ ಎಲ್ಲವೂ ಇವರ ಮಕ್ಕಳಲ್ಲ ಆದರೆ ಇವರು ಈ ಮಕ್ಕಳಿಗೆ ತಂದೆ ತಾಯಿ ರೂಪದಲ್ಲಿ ತಮ್ಮ ಎಲ್ಲಾ ಸರ್ವಸ್ವ ದಾರೆ ಎರೆದು ನೋಡಿ ಕೊಳ್ಳುತ್ತಿದ್ದಾರೆ. ಬನ್ನಿ ತಿಳಿಯೋಣ ಇವರ ಬಗ್ಗೆ.

ಇವರ ಹೆಸರು ಕಿರಣ್ ಪಿಟಿಯ ಮತ್ತು ಇವರ ಗಂಡ ರಮೇಶ್ ಪಿಟಿಯಾ . ಗುಜರಾತ್ ನಲ್ಲಿ ವಾಸವಾಗಿದ್ದಾರೆ ಈ ದಂಪತಿಗಳು. ಇವರ ಕುಟುಂಬದಲ್ಲಿ ಇನ್ನೂ 27 ಮಕ್ಕಳು ಇದ್ದಾರೆ. ಹೌದು ಇಂದು 27 ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ ಇವರು. 25 ವರ್ಷ ವಯಸ್ಸಿನಲ್ಲಿ ಅವರು ಈ ಕೆಲಸವನ್ನು ಮನೆಯೊಂದನ್ನು ಬಾಡಿಗೆ ಪಡೆಯುವ ಮೂಲಕ ಆರಂಭಿಸಿದ್ದರು. ಇವರ ಪತಿ ಕೂಡ ಇದಕ್ಕೆ ಬೆಂಬಲ ಸೂಚಿಸಿದರು. ಇವರು ನಿರಾಶ್ರಿತ ಡಿವ್ಯಾಂಗ ಮಕ್ಕಳು ಮತ್ತು ಹೆತ್ತವರು ಇದ್ದು ಸಾಕಲು ಕಷ್ಟ ಆಗುವ ಮಕ್ಕಳನ್ನು ಇವರು ನೋಡಿಕೊಳ್ಳುತ್ತಿದ್ದಾರೆ. ಇವರ ಎಲ್ಲಾ ಖರ್ಚು ವೆಚ್ಚಗಳನ್ನು ಇವರೇ ನೋಡಿಕೊಳ್ಳುತ್ತಾರೆ.

ಕಿರಣ್ ಅವರ ಸೋದರ ಕೂಡ ಒಬ್ಬ ದಿವ್ಯಾಂಗ ನಾಗಿದ್ದ. ಇದರಿಂದಾಗಿ ಅವರ ಕಷ್ಟ ನೋವನ್ನು ಹತ್ತಿರದಿಂದ ಕಂಡಿದ್ದರು ಅದಕ್ಕಾಗಿ ಈ ಕಾರ್ಯಕ್ಕೆ ಅವರು ಕೈ ಹಾಕಿದ್ದರು. ಇವರ ಪತಿ ಕೂಡ ಉತ್ತಮ ಬೆಂಬಲ ನೀಡಿದ್ದರು. ಹಾಗೆಯೇ ಇವರ ಮನೆಗಳಿಂದ ಯಾವುದೇ ನೆರವು ಬಂದಿರಲಿಲ್ಲ ಯಾಕೆಂದರೆ ಹೆಚ್ಚಿನ ಎಲ್ಲಾ ಮಕ್ಕಳ ಮನೆಯವರು ಕಡು ಬಡತನದವರು. ಸಾರ್ವಜನಿಕರು ನಮ್ಮ ಈ ಕೆಲಸದಲ್ಲಿ ತಮ್ಮ ಕೈ ಜೋಡಿಸಿದ್ದಾರೆ. ಪ್ರತಿ ತಿಂಗಳು 50,000 ವರೆಗೆ ಖರ್ಚು ಬರುತ್ತದೆ ಎಂದು ಹೇಳುತ್ತಾರೆ. ಹೆತ್ತ ಮಕ್ಕಳನ್ನು ತೊಟ್ಟಿಯಲ್ಲಿ ಬಿಸಾಡುವ, ಮಕ್ಕಳನ್ನು ಬೀದಿ ಬದಿಯಲ್ಲಿ ಬಿಟ್ಟು ಹೋಗುವ ತಂದೆ ತಾಯಿಗಿಂತ ಇವರೇ ಶ್ರೇಷ್ಠ ಇವರ ಈ ಕಾರ್ಯ ಹೀಗೆ ಮುಂದುವರೆಯಲಿ.

Leave A Reply

Your email address will not be published.