ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ವೇಗಿ ಮೊಹಮ್ಮದ್ ಶಮಿ ಗೆ ಟಿ 20 ಕ್ರಿಕೆಟ್ ಗೆ ಗೇಟ್ ಪಾಸ್ : ಖುದ್ದು ಬಿಸಿಸಿಐ ಸೆಲೆಕ್ಟರ್ಸ್ ಹೇಳಿದ್ದೇನು ಗೊತ್ತೇ
ನಮಸ್ಕಾರ ಸ್ನೇಹಿತರೇ ಹಲವಾರು ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಟೀಂ ಇಂಡಿಯಾ ಈ ಭಾರಿ ಶತಾಯಗತಾಯ ಅಕ್ಟೋಬರ್ ನಲ್ಲಿ ನಡೆಯುವ ಐಸಿಸಿ ಟಿ 20 ವಿಶ್ವಕಪ್ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದೆ. ಈ ಭಾರಿ ಫಾರ್ಮ್ ನಲ್ಲಿ ಇರುವ ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಂಡು ಕಪ್ ಗೆಲ್ಲಬೇಕೆಂದು ನಿರ್ಧರಿಸಿರುವ ಹಾಗಿದೆ.
ಈ ಭಾರಿ ತಂಡದ ಆಯ್ಕೆಯ ಸಂದರ್ಭದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಸ್ಥಾನ ಸಿಗುವುದು ಕಷ್ಟ ಎಂದು ಹೇಳಿದ್ದಾರೆ. ಕಳೆದ ವರ್ಷ ನಡೆದ ಟಿ 20 ವಿಶ್ವಕಪ್ ನಲ್ಲಿ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ ಬಹಳಷ್ಟು ದುಬಾರಿಯಾಗಿದ್ದರು. ಅದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಹ ಅತಿ ಹೆಚ್ಚು ಟೀಕೆಗೆ ಗುರಿಯಾಗಿದ್ದರು. ಈ ಭಾರಿ ಟಿ 20 ವಿಶ್ವಕಪ್ ನಲ್ಲಿ ಶಮಿಗೆ ಅವಕಾಶ ಸಿಗುವುದು ಕಷ್ಟಸಾಧ್ಯ.
ಅವರ ಲಭ್ಯತೆ ಟಿ 20 ಕ್ರಿಕೆಟ್ ಗಿಂತ ಭಾರತ ತಂಡಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಅವಶ್ಯಕವಾಗಿದೆ. ಹಾಗಾಗಿ ಅವರಿಗೆ ಟಿ 20 ಕ್ರಿಕೆಟ್ ನಿಂದ ವಿಶ್ರಾಂತಿ ನೀಡಿ, ಅವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐ ನ ಸೆಲೆಕ್ಟರ್ ಒಬ್ಬರು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಅದಲ್ಲದೇ ಟಿ 20 ಕ್ರಿಕೆಟ್ ನಲ್ಲಿ ಯುವ ಬೌಲರ್ ಗಳು ಹೆಚ್ಚು ಯಶಸ್ವಿಯಾಗಿದ್ದಾರೆ. ಬುಮ್ರಾ, ಭುವನೇಶ್ವರ್ ಜೊತೆ ಯುವ ಬೌಲರ್ ಗಳಿಗೆ ಅವಕಾಶ ಕೊಡುವುದು ಉತ್ತಮ ಎಂದು ನಿರ್ಧರಿಸಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.