ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲಿ ೭೦ ಶತಕ ಗಳಿಸಿ ಅಲ್ಲಿಗೆ ನಿಲ್ಲಿಸಿದ್ದಾರೆ. ಅವರಿಂದ ಮೂರೂ ವರ್ಷದಿಂದ ಯಾವುದೇ ಶತಕ ಯಾವುದೇ ಮಾದರಿ ಕ್ರಿಕೆಟ್ ಅಲ್ಲಿ ಬರಲಿಲ್ಲ. ಇದೀಗ ೨೦ ರನ್ ಗಳಿಸಲು ಕೂಡ ಹೆಣಗಾಡುತ್ತಿದ್ದಾರೆ. ಐಪಿಎಲ್ ಅಲ್ಲಿ ವಿರಾಟ್ ಕೊಹ್ಲಿ ಅವರ ಸಪ್ಪೆ ಪ್ರದರ್ಶನ ನೋಡಿ ಅನೇಕ ಅಭಿಮಾನಿಗಳು ಬೇಸರ ಗೊಂಡಿದ್ದರೆ, ಉಳಿದವರು ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಆಡುವುದನ್ನೇ ಬಿಡಬೇಕು ಎನ್ನುತ್ತಿದ್ದಾರೆ. ಇನ್ನು ಹಿರಿಯ ಆಟಗಾರರು ವಿರಾಟ್ ಕೊಹ್ಲಿ ಗೆ ವಿಶ್ರಾಂತಿ ಅಗತ್ಯ ಇದೆ ಎಂದು ಸಲಹೆ ನೀಡಿದ್ದಾರೆ.
ಇನ್ನು ಕಳೆದ ಪಂದ್ಯ ಪಂಜಾಬ್ ನಡುವೆ ನಡೆದಿತ್ತು. ನಮ್ಮ ತಂಡ ಬೌಲಿಂಗ್ ಅಲ್ಲಿ ಈ ಬಾರಿ ಉತ್ತಮವಾಗಿದೆ ಎಂದು ಹೆಮ್ಮೆ ಇತ್ತು ಆದರೆ ಪಂಜಾಬ್ ಬ್ಯಾಟ್ಸಮನ್ ಗಳು ಆ ಒಂದು ಕಲ್ಪನೆಯನ್ನು ತಪ್ಪು ಎಂದು ಮನವರಿಕೆ ಮಾಡಿಸಿಕೊಟ್ಟಿದ್ದಾರೆ RCB ಅಭಿಮಾನಿಗಳಿಗೆ. RCB ಬ್ಯಾಟ್ಸಮನ್ ಗಳು ಕೂಡ ಉತ್ತಮ ಫಾರ್ಮ್ ಅಲ್ಲಿ ಇದ್ದರು ಆದರೆ ಮೊನ್ನೆ ಪಂದ್ಯದಲ್ಲಿ ಅದು ಸುಳ್ಳಾಯಿತು. ಆದರೆ ಇಲ್ಲಿ ಮುಖ್ಯವಾಗಿ ನಮಗೆ ಕಾಣಸಿಗುವುದು ವಿರಾಟ್ ಕೊಹ್ಲಿ. ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡದೆ ಪೆವಿಲಿಯನ್ ಸೇರಿದ್ದಾರೆ. ಇದು ಎಲ್ಲ ಕಡೆ ಚರ್ಚೆ ಗೆ ಕಾರಣವಾಗುತ್ತಿದೆ. ಇದರ ಬಗ್ಗೆ ನಾಯಕ ಡುಪ್ಲೆಸಿಸ್ ಪಂದ್ಯ ಮುಗಿದ ಬಳಿಕೆ ಏನು ಹೇಳಿದ್ದಾರೆ?
ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ವಿರಾಟ್ ಕೊಹ್ಲಿ ಗೆ ಡುಪ್ಲೆಸಿಸ್ ಬೆಂಬಲ ನೀಡಿದ್ದಾರೆ. ಪ್ರತಿಯೊಬ್ಬ ಆಟಗಾರನಿಗೂ ಒಳ್ಳೆ ದಿನದ ಹಾಗೆ ಕೆಟ್ಟ ದಿನಗಳು ಇರುತ್ತದೆ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಮಾತಾಡಿದ ಡುಪ್ಲೆಸಿಸ್, ಜಾನಿ ಬೈರ್ ಸ್ಟೋವ್ ಅವರ ಆಟ ಉತ್ತಮವಾಗಿತ್ತು ಇದರಿಂದ ನಮ್ಮ ಬೌಲರ್ ಗಳಿಗೆ ಹಿನ್ನಡೆ ಆಗಿತ್ತು. ಇದು ವಿಕೆಟ್ ಗೆ ಉತ್ತಮ ಪಿಚ್ ಆಗಿತ್ತು. ಆದರೆ ೨೦೦ ಕ್ಕೂ ಅಧಿಕ ರನ್ ಈ ಪಿಚ್ ಗೆ ಸ್ವಲ್ಪ ಜಾಸ್ತಿ ಆಯಿತು. ಇಂತಹ ದೊಡ್ಡ ಮೊತ್ತ ಹಿಂಬಾಲಿಸುವಾಗ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳಬಾರದು. ಆದರೆ ಇದು ನಮಗೆ ಅನಿರೀಕ್ಷಿತವಾಗಿತ್ತು ಎಂದು ಡುಪ್ಲೆಸಿಸ್ ಹೇಳಿದ್ದಾರೆ.
RCB ಆಡಿರುವ ೧೩ ಪಂದ್ಯಗಳಲ್ಲಿ ೧೪ ಅಂಕಗಳನ್ನು ಕಲೆ ಹಾಕಿದೆ. ಪಾಯಿಂಟ್ಸ್ ಟೇಬಲ್ ಅಲ್ಲಿ ಈಗಾಗಲೇ ನಾಲ್ಕನೇ ಸ್ಥಾನದಲ್ಲಿದೆ. ಮೇ ೧೯ ರಂದು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ RCB ಗೆ ಇದೆ. ಒಂದು ವೇಳೆ ಸೋತರೆ ಪ್ಲೇಆಫ್ ಇಂದ ಹೊರಗಡೆ ಹೋಗುವುದು ಖಚಿತವಾಗಿದೆ. ಈಗಾಗಲೇ ಡುಪ್ಲೆಸಿಸ್ ಅವರು ಪಂಜಾಬ್ ಎದುರಿನ ಸೋಲನ್ನು ಮರೆತು ಮುಂದಿನ ಪಂದ್ಯಕ್ಕೆ ಸಜ್ಜಾಗುವಂತೆ ತಮ್ಮ ತಂಡದ ಆಟಗಾರರಿಗೆ ತಿಳಿಸಿದ್ದಾರೆ. ಮುಂದಿನ ಪಂದ್ಯ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಿಗು ಮೂಡಿದೆ.