ಎಷ್ಟೆಲ್ಲ ಕಷ್ಟ ಕೊಟ್ಟ ಮೇಲು ಕೂಡ ನಟಿ ದಿವ್ಯ ಕ್ಯಾಮೆರಾ ಮುಂದೆ ಬಂದು ಆತನ ಕುರಿತು ಹೇಳಿದ್ದೇನು ಗೊತ್ತೇ?? ಇನ್ನು ಬುದ್ದಿ ಬಂದಿಲ್ವ??
ಒಬ್ಬ ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮದುವೆಯಾದರೆ ಏನೆಲ್ಲಾ ಕಷ್ಟ ನೋವುಗಳನ್ನು ಅನುಭವಸಬೇಕಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ಸಾಮಾನ್ಯ ಜನರ ಜೀವನದಲ್ಲಿ ಮಾತ್ರ ಘಟನೆಗಳು ನಡೆಯುವುದಿಲ್ಲ. ಸೆಲೆಬ್ರಿಟಿಗಳ ಜೀವನದಲ್ಲಿ ಸಹ ಇಂತಹ ಘಟನೆಗಳು ನಡೆಯುತ್ತದೆ. ಇದೀಗ ಕನ್ನಡ ಕಿರುತೆರೆಯಲ್ಲಿ ಆಕಾಶ ದೀಪ ಧಾರವಾಹಿ ಮೂಲಕ ಗುರುತಿಸಿಕೊಂಡಿದ್ದ ನಟಿ ದಿವ್ಯ ಶ್ರೀಧರ್ ಅವರ ಪರಿಸ್ಥಿತಿ ಹೀಗೆ ಆಗಿದೆ. ದಿವ್ಯ ಅವರು ಗಂಡನಿಂದ ಆದ ಹಿಂಸೆ ತಾಳಲಾಗದೆ ಆಸ್ಪತ್ರೆ ಸೇರಿದ್ದಾರೆ. ನಡೆದ ಘಟನೆಗಳನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ.
ದಿವ್ಯ ಅವರು ಹೇಳಿರುವ ಹಾಗೆ, ತಮಿಳು ಸೀರಿಯಲ್ ನಲ್ಲಿ ನಟಿಸಲು ಶುರು ಮಾಡಿದ ಬಳಿಕ, ಐದು ವರ್ಷಗಳ ಹಿಂದೆ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಎನ್ನುವ ವ್ಯಕ್ತಿಯ ಜೊತೆಗೆ ಪರಿಚಯವಾಗಿದ್ದು, ಇಬ್ಬರು ಒಂದೇ ಸೀರಿಯಲ್ ನಲ್ಲಿ ನಟಿಸುತ್ತಿದ್ದರು, ಬಳಿಕ ಇಬ್ಬರು ಸಹ ಪ್ರೀತಿಸಿ ಲಿವ್ ಇನ್ ರಿಲೇಶನ್ಷಿಪ್ ನಲ್ಲಿದ್ದರು, ಮದುವೆಯೂ ಆದರು, ಇಬ್ಬರು ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು, ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಗಂಡನಿಗೆ ಕೆಲಸ ಇಲ್ಲದೆ ಇದ್ದಾಗ, ದಿವ್ಯ ಅವರೇ ದುಡಿದು ಗಂಡನನ್ನು ನೋಡಿಕೊಂಡಿದ್ದಾರೆ, ಮಗುವಿನ ಹಾಗೆ ಅವನನ್ನು ನೋಡಿಕೊಂಡಿದ್ದೆ ಎಂದಿದ್ದಾರೆ ದಿವ್ಯ. ಅಷ್ಟೇ ಅಲ್ಲದೆ, 30 ಲಕ್ಷ ರೂಪಾಯಿ ಲೋನ್ ಕೊಡಿಸಿ ಹೊಸ ಮನೆ ಖರೀದಿ ಮಾಡಿ, ಪ್ರತಿ ತಿಂಗಳು 30 ಸಾವಿರ ರೂಪಾಯಿ ಲೋನ್ ಅನ್ನು ದಿವ್ಯ ಅವರೇ ಕಟ್ಟುತ್ತಿದ್ದರಂತೆ.
ಇಷ್ಟೆಲ್ಲವನ್ನು ದಿವ್ಯ ಅವರೇ ಮಾಡಿದ್ದರು ಸಹ, ಆಕೆಯ ಗಂಡ ಜಗಳದ ಕಾರಣದಿಂದ ದಿವ್ಯ ಅವರು ಗರ್ಭಿಣಿ ಹೊಟ್ಟೆಯಲ್ಲಿ ಮಗು ಇದೆ ಎನ್ನುವುದನ್ನು ಸಹ ಲೆಕ್ಕಿಸದೆ ಹೊಟ್ಟೆಗೆ ಒದ್ದು, ಕೈಕಾಲೆಲ್ಲಾ ತುಲಿದಿದ್ದು, ಇದರಿಂದ ದಿವ್ಯ ಅವರು ಅಸ್ವಸ್ಥರಾಗಿ, ಲೋ ಬಿಪಿ ಆಗಿ ಜ್ಞಾನ ತಪ್ಪಿದ್ದು, ಆಕೆ ಎದ್ದ ಬಳಿಕ ಗಂಡ ಮನೆಯಿಂದ ಹೊರಹೋಗಿದ್ದಾರೆ, ಮರುದಿನ ಹೊಟ್ಟೆ ನೋವು ಹೆಚ್ಚಾಗಿ ಕರೆಮಾಡಿದರೆ, ಆತ ಮತ್ತೊಂದು ಆಪಾರ್ಟ್ಮೆಂಟ್ ನಲ್ಲಿ ಇರುವುದಾಗಿ ಹೇಳಿದ್ದು, ದಿವ್ಯ ಒಬ್ಬಂಟಿಯಾಗಿ ಬಂದು, ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದು, ಹೊಟ್ಟೆಯೊಳಗೆ ಇರುವ ಮಗುವಿಗೂ ತೊಂದರೆ ಆಗಿದ್ದು, ಮಗು ಯಾವಾಗಲಾದರೂ ಹೊರಗೆ ಬರಬಹುದು ಎಂದು ವೈದ್ಯರು ಹೇಳಿದ್ದಾರಂತೆ, ಗಂಡನಿಂದ ಅಷ್ಟೇಲ್ಲಾ ಆಗಿದ್ದರು ಸಹ ತನಗೆ ಗಂಡ ಬೇಕು ಎನ್ನುತ್ತಿದ್ದಾರೆ ದಿವ್ಯ.
ತನ್ನ ಗಂಡ ತನಗೆ ವಾಪಸ್ ಬೇಕು, ತನಗಾಗಿ ಮತ್ತು ತನ್ನ ಮಗುವಿಗಾಗಿ ಎಲ್ಲರೂ ಪ್ರಾರ್ಥಿಸಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಈ ವಿಡಿಯೋ ಜನರು ಸೋಷಿಯಲ್ ಮೀಡಿಯಾದಲ್ಲಿ ದಿವ್ಯ ಅವರ ಪರವಾಗಿ ನಿಂತಿದ್ದು, ದಿವ್ಯ ಅವರಿಗೆ ನೆಟ್ಟಿಗರು ಕೆಲವು ಮಾತುಗಳನ್ನು ಹೇಳಿದ್ದಾರೆ, ಇನ್ನುಮುಂದೆ ನೀವು ಅವರ ಜೊತೆಗೆ ಬಾಳುವುದು ಸರಿಯಲ್ಲ, ಅವರನ್ನು ಬಿಟ್ಟು ಮುಂದಿನ ಜೀವನವನ್ನು ನಿಮ್ಮ ಮಗುವಿನ ಜೊತೆಗೆ ಚೆನ್ನಾಗಿ ನಡೆಸಿ, ಇನ್ನುಮೇಲಾದರು ನೆಮ್ಮದಿಯಿಂದ ಜೀವನ ನಡೆಸಿ..ಎಂದು ನೆಟ್ಟಿಗರು ದಿವ್ಯ ಶ್ರೀಧರ್ ಅವರಿಗೆ ಸಲಹೆ ನೀಡುತ್ತಿದ್ದಾರೆ.