ಐಪಿಎಲ್ ಗಿಂತ PSL ಬೆಸ್ಟ್ ಎಂದ ಪಾಕಿಸ್ತಾನದ ಪತ್ರಕರ್ತನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಕನ್ನಡಿಗ ರಾಬಿನ್ ಉತ್ತಪ್ಪ.

1,212

ಕನ್ನಡಿಗ ರಾಬಿನ್ ಉತ್ತಪ್ಪ ಮುಂಬರುವ ಐಪಿಎಲ್ ಗೆ ತಯಾರಾಗುತ್ತಿದ್ದಾರೆ. ಅವರನ್ನು CSK ಹರಾಜಿಗೂ ಮುನ್ನವೇ ಬಿಡುಗಡೆ ಮಾಡಿ ಮತ್ತೊಮ್ಮೆ ಅವರ ಮೂಲಬೆಲೆ ೨ ಕೋಟಿ ನೀಡಿ ಖರೀದಿ ಮಾಡಿತ್ತು. ಕಳೆದ ವರ್ಷದ CSK ಚಾಂಪಿಯನ್ಷಿಪ್ ಅಲ್ಲಿ ರಾಬಿನ್ ಉತ್ತಪ್ಪ ಪಾತ್ರ ಕೂಡ ತುಂಬಾ ಇದೆ. ಪ್ಲೇ ಆಫ್ ಹಂತದಲ್ಲಿ ರಾಬಿನ್ CSK ಪರ ಉತ್ತಮ ಆಟವಾಡಿ ತಂಡ ಗೆಲ್ಲುವಲ್ಲಿ ಉತ್ತಮ ಸಾತ್ ನೀಡಿದ್ದರು. ಐಪಿಎಲ್ ರೀತಿ ಪಾಕಿಸ್ತಾನದಲ್ಲೂ ಕೂಡ PSL ನಡೆಯುತ್ತದೆ. ಇದನ್ನು ಪಾಕಿಸ್ತಾನದ ಕ್ರಿಕೆಟ್ ಮುಖ್ಯಸ್ಥ ಐಪಿಎಲ್ ಗಿಂತ ದೊಡ್ಡ ಯಶಸ್ಸು ಕಂಡಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದಯೇ ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಕೂಡ PSL ದೊಡ್ಡ ಯಶಸ್ಸು ಎಂದು ನಂಬಿದ್ದಾರೆ. ನಂತರ ಈಗ ಪಾಕಿಸ್ತಾನದ ಪತ್ರಕರ್ತ ಐಪಿಎಲ್ ಗಿಂತ PSL ಉತ್ತಮವಾಗಿದೆ ಎಂದು ಹೇಳಿಕೊಂಡಿದ್ದಾರೆ. ಸ್ಪರ್ಧೆಯ ಹೊರತಾಗಿಯೂ ಕೂಡ PSL ವೇಗವಾಗಿ ಬೆಳೆದಿದೆ ಎಂದು ಹೇಳಿದ್ದಾರೆ. ಅಲ್ಲದೆ PSL ವಿಶ್ವದಾದ್ಯಂತ ಜನಪ್ರಿಯಗೊಂಡಿದೆ ಎಂದು ಭಾರತ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ರಾಬಿನ್ ಉತ್ತಪ್ಪ ತಕ್ಕ ಉತ್ತರ ಹೇಳಿ ಪಾಕಿಸ್ತಾನದ ಪತ್ರಕರ್ತನ ಬಾಯಿ ಮುಚ್ಚಿಸಿದ್ದಾರೆ.

ಅರ್ಫಾ ಫಿರೋಜ್ ಝಕೀ ಎನ್ನುವಾತ ಟ್ವಿಟ್ಟರ್ ಅಲ್ಲಿ ” PSL ಹಾಗು ಐಪಿಎಲ್ ನಡುವೆ ಹೋಲಿಕೆ ಅಲ್ಲ, ೨೦೦೮ ರಲ್ಲಿ ಐಪಿಎಲ್ ಶುರು ಆಗಿದೆ. ಅದು ಶುರು ಆದಾಗ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿ ಸ್ಪರ್ದಿಗಳಿರಲಿಲ್ಲ. ಈಗ ಬೇರೆ ಬೇರೆ ಲೀಗ್ ಇದ್ದರು ಕೂಡ ಪಾಕಿಸ್ತಾನದ PSL ವಿಶ್ವದಾದ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದೆ ಎಂದು ಒಪ್ಪಿಕೊಳ್ಳಬೇಕು” ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಉತ್ತಪ್ಪ “ಈ ಮಾರುಕಟ್ಟೆ ಯನ್ನು ಸೃಷ್ಟಿ ಮಾಡಿದ್ದೆ ಭಾರತ ಎಂದು ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಹಾಗು ಪತ್ರಕರ್ತನಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ಉತ್ತರ ನೀಡಿದ್ದಾರೆ.

Leave A Reply

Your email address will not be published.