ಐಪಿಎಲ್ ೨೦೨೨ : ಆಕಾಶ್ ಛೋಪ್ರ ಭವಿಷ್ಯವಾಣಿ. ೨೦ ಕೋಟಿಗಿಂತಲೂ ಅಧಿಕ ಬೆಲೆಗೆ ಹರಾಜಗುತ್ತಾರೆ ಈ ಆಟಗಾರ. ಯಾರೂ ಈತ?

284

ಇತ್ತೀಚಿಗೆ ನಡೆದ ನ್ಯೂಜಿಲೆಂಡ್ ಹಾಗು ಭಾರತದ ಟಿ-೨೦ ಪಂದ್ಯದಲ್ಲಿ ಭಾರತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಗೆದ್ದು ಬೀಗಿದೆ. ಇದು ಭಾರತ ತಂಡಕ್ಕೆ ಮುಖ್ಯವಾದ ಪಂದ್ಯವಾಗಿತ್ತು. ಕಾರಣ ಭಾರತ ತಂಡಕ್ಕೆ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದರೆ ಭಾರತದ ಟಿ-೨೦ ತಂಡದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ ಈ ಜೋಡಿ ಹಾಗು ಸರಣಿ ಗೆದ್ದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಈ ನ್ಯೂಜಿಲೆಂಡ್ ಭಾರತ ಸರಣಿಯಲ್ಲಿ ಕೆಎಲ್ ರಾಹುಲ್ ಒಪನಿಂಗ್ ಬ್ಯಾಟ್ಸ್‌ಮನ್ ಆಗಿ ಶರ್ಮಾ ಜೊತೆ ಉತ್ತಮ ಜೊತೆಯಾಟ ನೀಡುವಲ್ಲಿ ಯಶಸ್ಸನ್ನು ಪಡೆದಿದ್ದಾರೆ. ಇದಲ್ಲದೇ ಇವರ ಹಿಂದಿನ ಐಪಿಎಲ್ ದಾಖಲೆ ಕೂಡಾ ಇವರ ಫಿಟ್ನೆಸ್ ಬಗ್ಗೆ ಪುರಾವೆ ನೀಡುತ್ತದೆ. ಇದಲ್ಲದೆ ಇವರು‌ ನಾಯಕ ಸ್ಥಾನವನ್ನು ಕೂಡಾ ಸಮರ್ಥವಾಗಿ ನಿಭಾಯಿಸಬಲ್ಲ ಆಟಗಾರರಾಗಿದ್ದಾರೆ. ವಿಕೇಟ್‌ ಕೀಪಿಂಗ್ ಕೂಡಾ ಉತ್ತಮವಾಗಿ ನಿರ್ವಹಿಸಿದ್ದು ಅನೇಕ ವಿಮರ್ಶಕರ ನೆಚ್ಚಿನ ಆಟಗಾರರಾಗಿದ್ದಾರೆ.

ನ್ಯೂಜಿಲೆಂಡ್ ಹಾಗು ಭಾರತದ ಟಿ-೨೦ ಸರಣಿಯಲ್ಲಿ ಕೆಎಲ್ ರಾಹುಲ್ ಪ್ರದರ್ಶನ ನೋಡಿ ಖ್ಯಾತ ಕಾಮೆಂಟೇಟರ್ ಹಾಗು ಮಾಜಿ ಆಟಗಾರ ಆಕಾಶ್ ಛೋಪ್ರಾ ಭವಿಷ್ಯವಾಣಿ ನುಡಿದಿದ್ದಾರೆ. ಅವರ ಪ್ರಕಾರ‌ ಐಪಿಎಲ್ ೨೦೨೨ ರಲ್ಲಿ ಆಟಗಾರರನ್ನು ಖರೀದಿ ಮಾಡಲು ಹಣದ ಯಾವುದೇ ಲಿಮಿಟ್ ಇಲ್ಲದೇ ಇದ್ದರೆ ಮುಂದಿನ ಆಟಗಾರರ ಹರಾಜಿನಲ್ಲಿ ಕೆಎಲ್ಲ ರಾಹುಲ್ ೨೦ ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಬಲ್ಲ ಆಟಗಾರ ಎಂದು ಹೇಳಿದ್ದಾರೆ.

ಟ್ವೀಟ್ ಮಾಡುವ ಮೂಲಕ ಈ ಭವಿಷ್ಯವಾಣಿ ತಿಳಿಸಿದ ಆಕಾಶ್ ಛೋಪ್ರಾ ಅವರ ಮಾತು ಅನೇಕರಿಗೆ ಸರಿ ಎನಿಸಿದೆ. ಇದಕ್ಕಿಂತ ಮೊದಲು ಪತ್ರಿಕೆಯಲ್ಲಿ ಕೆಎಲ್ ರಾಹುಲ್ ಅವರನ್ನು ಪಂಜಾಬ್ ತಂಡ ಉಳಿಸಿಕೊಳ್ಳುವದಿಲ್ಲ ಎಂದು ವರದಿಯಾಗಿತ್ತು. ಇದು ನಿಜವಾಗಿದ್ದಲ್ಲಿ ರಾಹುಲ್ ಹಾರಾಜು ಪ್ರಕ್ರಿಯೆಗೆ ಬರುವುದಂತೂ ಖಚಿತ. ಇವರ ಇತ್ತೀಚಿನ ಕೆಲ ಪಂದ್ಯದಲ್ಲಿ ಪ್ರದರ್ಶನ ನೋಡಿದರೆ ಕೆಎಲ್ ರಾಹುಲ್ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Leave A Reply

Your email address will not be published.