ಒಂದು ಕಾಲದ ಖ್ಯಾತ ನಟಿ ದಿವ್ಯ ರವರ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಮತ್ತೊಂದು ವಿಡಿಯೋ ವೈರಲ್: ಷಾಕಿಂಗ್ ವಿಡಿಯೋ ದಲ್ಲಿ ಏನಿದೆ ಗೊತ್ತೇ??
ಆಕಾಶದೀಪ ಧಾರಾವಾಹಿ ಖ್ಯಾತಿಯ ನಟಿ ದಿವ್ಯ ಶ್ರೀಧರ್ ವೈಯಕ್ತಿಕ ಬದುಕು ಅತಂತ್ರವಾಗಿದೆ. ಇತ್ತೀಚಿಗಷ್ಟೇ ತಮ್ಮ ಮದುವೆ ಬಗ್ಗೆ ಹಾಗೂ ತಾವು ತಾಯಿಯಾಗುತ್ತಿರುವ ಸುದ್ದಿ ಹಂಚಿಕೊಂಡಿದ್ದ ಅವರು ಇದೀಗ ತನ್ನ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೂಲಕ ಸುದ್ದಿಯಲ್ಲಿದ್ದಾರೆ. ಆಕಾಶ ದೀಪ ದಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅವರು ಕೆಲವು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಅವರ ನಟನೆಯ ಚಿತ್ರಗಳು ಅಷ್ಟೇನೂ ಸದ್ದು ಮಾಡದೆ ಇದ್ದಾಗ ಮತ್ತೆ ಅವರು ಕಿರುತೆರೆಗೆ ಮರಳಿದರು. ಕನ್ನಡ ಸೇರಿದಂತೆ ತಮಿಳು, ತೆಲುಗು ಸೀರಿಯಲ್ಗಳಲ್ಲೂ ಅವರು ಕಾಣಿಸಿಕೊಂಡರು. ಆಕಾಶ ದೀಪ ದಾರವಾಹಿ ಅವರಿಗೆ ಜನಪ್ರಿಯತೆ ತಂದು ಕೊಟ್ಟಿತು. ನಂತರ ಅವರು ತಮಿಳು ಧಾರಾವಾಹಿಗಳಲ್ಲಿ ನಟಿಸಿ ಮತ್ತಷ್ಟು ಹೆಸರು ಮಾಡಿದರು. ಇದೀಗ ನಟಿ ದಿವ್ಯ ಶ್ರೀಧರ್ ಪತಿಯ ಮೇಲೆ ಹಲ್ಲೆ ಆರೋಪ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ನಟಿ ದಿವ್ಯ ಶ್ರೀಧರ್ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಕು ಮೂಡಿದ್ದು ಎರಡು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಅವರು ತಮ್ಮ ನೋವು ತೋಡಿಕೊಂಡಿದ್ದರು. ನನ್ನ ಪತಿ ನನ್ನ ಮೇಲೆ ಹಲ್ಲೇ ನಡೆಸಿದ್ದಾರೆ, ನಾನು ಗರ್ಭಿಣಿ ಎನ್ನುವುದನ್ನು ನೋಡದೆ ನನ್ನ ಹೊಟ್ಟೆಗೆ ಒದೆದಿದ್ದಾರೆ. ನಾನೀಗ ಆಸ್ಪತ್ರೆಯಲ್ಲಿದ್ದೇನೆ, ನನಗೆ ಗರ್ಭಪಾತವಾಗಬಹುದು ಎಂದು ವಿಡಿಯೋದಲ್ಲಿ ದಿವ್ಯ ಕಣ್ಣೀರು ಹಾಕಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ದಿವ್ಯ ಶ್ರೀಧರ ಪ್ರಕರಣದಲ್ಲಿ ಇದೀಗ ಕರ್ನಾಟಕ ಮಹಿಳಾ ಆಯೋಗದ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ. ದಿವ್ಯ ಕರ್ನಾಟಕದವರೆ ಆಗಿರುವುದರಿಂದ ಆಯೋಗ ನಟಿಯ ಪರ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದೆ. ಪತಿಯಿಂದ ದೈಹಿಕ ಹಲ್ಲೆಗೆ ಒಳಗಾಗಿರುವ ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದೆ.
ಮೊನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ದಿವ್ಯ ಆಸ್ಪತ್ರೆಯಿಂದ ನೇರವಾಗಿ ತನ್ನ ಪತಿ ಅಮ್ಜದ್ ಖಾನ್ ಮನೆಗೆ ಬಂದಿದ್ದಾರೆ. ಈ ವೇಳೆ ನನಗೆ ಯಾಕೆ ಮೋಸ ಮಾಡಿದೆ ಎಂದು ದಿವ್ಯ ಪತಿಯನ್ನು ಪ್ರಶ್ನಿಸಿ ರಂಪಾಟ ಮಾಡಿದ್ದಾರೆ. ವಿಡಿಯೋವನ್ನು ಪತಿ ವೈರಲ್ ಮಾಡಿದ್ದು ವಿಡಿಯೋದಲ್ಲಿ ದಿವ್ಯ ಹಾಗೂ ಪತಿ ಪರಸ್ಪರ ನೀನು ಮೋಸ ಮಾಡಿದೆ, ನೀನು ಮೋಸ ಮಾಡಿದೆ ಎಂದು ಜಗಳವಾಡಿಕೊಂಡಿದ್ದಾರೆ. ಐದು ವರ್ಷಗಳಿಂದ ಲೀವಿಂಗ್ ತುಗೆದರ್ ರಿಲೇಶನ್ ಶಿಪ್ ನಲ್ಲಿದ್ದ ಈ ಜೋಡಿ ಇತ್ತೀಚಿಗೆ ವಿವಾಹವಾಗಿದ್ದರು. ಅದಕ್ಕೂ ಮೊದಲು ದಿವ್ಯ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ್ದರು, ಅಲ್ಲದೆ ಅವರು ಕೆಲ ದಿನಗಳ ಹಿಂದೆ ತಾನು ಗರ್ಭಿಣಿಯಾಗುತ್ತಿರುವ ಸುದ್ದಿ ಹಂಚಿಕೊಂಡಿದ್ದರು. ಮದುವೆಯಾಗಿ ವರ್ಷದೊಳಗೆ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ.