ಕಟ್ಟಡ ಅಥವಾ ಫ್ಲಾಟ್ ಕೊಳ್ಳುವಾಗ ಈ ದಾಖಲೆ ಇದೆಯಾ ಎಂದು ನೋಡಿ ಖರೀದಿಸಿ. ಇಲ್ಲಾಂದ್ರೆ ತೊಂದರೆ ತುಂಬಾ ಇದೆ.

267

ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಆಸೆ ಇದ್ದೇ ಇರುತ್ತದೆ. ಇಂತಹ ಆಸೆಯಲ್ಲಿ ತಮ್ಮದೇ ಒಂದು ಮನೆ ಮಾಡಿ ಸಂಸಾರ ಮಾಡಬೇಕು ಎಂಬುವುದು ಹೆಚ್ಚಿನ ಜನರ ಆಸೆ. ಹೌದು ಅದಕ್ಕಾಗಿ ತಮ್ಮ ಜೀವನವನ್ನೇ ಸವೆಸುತ್ತಾರೆ. ಕೂಡಿಟ್ಟ ಹಣವನ್ನೆಲ್ಲಾ ಅದಕ್ಕೆ ಹೂಡಿಕೆ ಮಾಡುತ್ತಾರೆ. ಆದರೆ ಇದರಿಂದಾಗಿ ಮೋಸ ಹೋದ ಅದೆಷ್ಟೋ ಜನರು ಇರುತ್ತಾರೆ. ನಂಬಿಕೆಯಿಂದ ಮಾಡಿದ ವ್ಯವಹಾರದಿಂದ ಕೈ ಸುಟ್ಟುಕೊಂಡ ಜನರು ತುಂಬಾ ಇದ್ದಾರೆ.

ಅದಕ್ಕೆ ಯಾವುದೇ ಒಂದು ಫ್ಲಾಟ್ ಅಥವಾ ಜಾಗ ಅಥವಾ ಕಟ್ಟಡ ಖರೀದಿ ಮಾಡುವ ಮುನ್ನ ಅದರ APF Code ಬಗ್ಗೆ ತಿಳಿದುಕೊಳ್ಳಿ. ಹಾಗಾದರೆ ಇದು ಏನು ಎಂಬ ಯೋಚನೆ ಇದ್ದಾರೆ ಅದಕ್ಕೆ ಉತ್ತರ ಇಲ್ಲಿದೆ. APF ಎಂದರೆ Approved Projec Financial ಎಂದು . ಈ APF ಕೋಡ್ ಅನ್ನು ಬ್ಯಾಂಕ್ ನವರು ನೀಡುತ್ತಾರೆ. ಹೌದು ಇದು ಎಲ್ಲರ ಬಳಿ ಇರುವುದಿಲ್ಲ ಇದಕ್ಕೆ ಅದರದ್ದೇ ಆದ ಕೆಲವು ನಿಯಮಗಳಿವೆ. ಭೂಮಿ ಯಾವುದೇ ಕೇಸ್ ನಲ್ಲಿ ಇರಬಾರದು. ಸರ್ಕಾರದಿಂದ ಎಲ್ಲಾ ರೀತಿಯ ಮಾನ್ಯತೆ ಮತ್ತು ಕ್ಲಿಯರೆನ್ಸ್ ಪಡೆದಿರಬೇಕು.

ಕಟ್ಟಡ ನಿರ್ಮಾಣ ಮಾಡುವ ವ್ಯಕ್ತಿ ಕನಿಷ್ಠ 5 ವರ್ಷದ ಅನುಭವ ಹೊಂದಿರಬೇಕು. ಹೀಗಿದ್ದಾಗ ಮಾತ್ರ ಬ್ಯಾಂಕ್ ಅವರಿಗೆ APF ನಂಬರ್ ಕೊಡುತ್ತದೆ. ಇಂತಹ ಮಾನ್ಯ ಇರುವ APF code ಯಾರ ಬಳಿ ಇರುತ್ತದೋ . ಅಂತಹ ವ್ಯಕ್ತಿಗಳು ಅಥವಾ ಬಿಲ್ಡರ್ ಗಳಿಂದಲೆ ಆಸ್ತಿ ಖರೀದಿ ಮಾಡಿ. ಕೊನೆಗೆ ದೊಡ್ಡ ಮೊತ್ತ ಹೂಡಿಕೆ ಮಾಡಿ ಕಣ್ಣೀರು ಇಡುವ ಬದಲು ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದು ಖರೀದಿ ಮಾಡುವುದು ಒಳಿತು.

Leave A Reply

Your email address will not be published.