ಕಡೆಗೂ ತಮ್ಮ ಯೂಟ್ಯೂಬ್ ಆದಾಯವನ್ನು ಜನರ ಎದುರಿಗಿಟ್ಟ ಕನ್ನಡದ ಖ್ಯಾತ ಯೂಟ್ಯೂಬರ್ Dr Bro? ಅಬ್ಬಬ್ಬಾ ಒಂದು ತಿಂಗಳಲ್ಲಿ ಇಷ್ಟು ಆದಾಯವೇ?
Dr Bro ಎಂಬ ಹೆಸರು ಕೇಳಿದ್ರೆ ಸಾಕು ಕರ್ನಾಟಕದಲ್ಲಿ ಗೊತ್ತಿಲ್ಲದ ಜನರೇ ಇಲ್ಲ. ಅದು ಹೆಸರಲ್ಲ ಬದಲಾಗಿ ಒಂದು ಬ್ರಾಂಡ್ ಆಗಿ ಬದಲಾಗಿದೆ. ಹೌದು ತಮ್ಮ ಟ್ರಾವೆಲಿಂಗ್ ಬ್ಲಾಗ್ ಮೂಲಕ ಮನೆ ಮನೆಯಲ್ಲಿ ಹೆಸರುವಾಸಿ ಆಗಿದ್ದಾರೆ ಗಗನ್ ಅವರು. ಬೆಂಗಳೂರಿನಲ್ಲಿ ನೆಲೆಸಿರುವ ಇವರು ರಾಜ್ಯ ಸುತ್ತುತ್ತಾ ಆರಂಭಿಸಿದ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಇಂದು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಇದಕ್ಕೆಲ್ಲ ಇವರು ಪಟ್ಟ ಶ್ರಮ ಮಾತ್ರ ಕಾರಣ. ಶ್ರಮ ಪಟ್ಟು ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಆಸಕ್ತಿಯಲ್ಲಿ ತೊಡಗಿಸಿಕೊಂಡ ಇವರನ್ನು ಕರ್ನಾಟಕದ ಜನತೆ ಕೂಡ ಕೈಬಿಟ್ಟಿಲ್ಲ .
ಕರ್ನಾಟಕದಲ್ಲಿ ವಿವಿಧ ಸ್ಥಳಗಳನ್ನು ಸುತ್ತುತ್ತಾ ದೇಶವನ್ನು ತೋರಿಸಿ ಒಂದೊಮ್ಮೆ ಅವರು ಪ್ರಪಂಚದ ಭೂಪಟ ಇಟ್ಟು ಪ್ರತಿಯೊಂದು ದೇಶ ಸುತ್ತಿ ನಿಮಗೆ ತೋರಿಸುತ್ತೇನೆ ಎಂದು ಮಾಡಿದ ಪ್ರತಿಜ್ಞೆಯಲ್ಲಿ ಅವರು ಒಂದು ಹೆಜ್ಜೆ ಇಟ್ಟಿದ್ದಾರೆ. ಹೌದು ದೇಶ ವಿದೇಶಗಳಲ್ಲಿ ಸುತ್ತುತ್ತಾ ಅಲ್ಲಿನ ವಿಸ್ಮಯಗಳನ್ನು ತೋರಿಸುತ್ತಾ ಅಲ್ಲಿನ ವಿಶೇಷತೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಭಾಷೆ ಬರದಿದ್ದರೂ ತಮಗೆ ಬರುವ ಭಾಷೆಯಲ್ಲಿ ಮಾತಾಡಿಕೊಂಡು ಜನರನ್ನು ಬಹಳ ಹತ್ತಿರ ಮಾಡಿಕೊಳ್ಳುವ ಕಲೆ ಅವರ ವ್ಯಕ್ತಿತ್ವದಲ್ಲಿ ಇದೆ.
ಇಷ್ಟೆಲ್ಲಾ ಇರುವಾಗ Dr Bro ಯೂಟ್ಯೂಬ್ ನಲ್ಲಿ ಎಷ್ಟು ಸಂಪಾದನೆ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳ ನಮಗೆಲ್ಲಾ ಇದ್ದೆ ಇದೆ . ಯೂಟ್ಯೂಬ್ ಅಂದರೆ ಒಳ್ಳೆ ಹಣ ಮಾದ ಬಹುದು ಎಂದು ಎಲ್ಲರಿಗೂ ಗೊತ್ತು ಆದರೆ Dr Bro ಎಷ್ಟು ಸಂಪಾದನೆ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು, ಅದಕ್ಕ್ಕೆ ಅವರೇ ಉತ್ತರ ನೀಡಿದ್ದಾರೆ. ಎರಡು ದಿನಗಳ ಹಿಂದೆ ಲೈವ್ ಮುಖಾಂತರ ಬಂದು ತನ್ನ ಅಭಿಮಾನಿಗಳ ಜೊತೆ ಹರಟೆ ಹೊಡೆಯುತ್ತಾ ತಮ್ಮ ಅನುಭವಗಳನ್ನು ಹೇಳುತ್ತಾ ಇದ್ದಾಗ. ಅಭಿಮಾನಿ ಒಬ್ಬರು ಕೇಳಿದ ಪ್ರಶ್ನೆಗೆ ತಮ್ಮ ಯೂಟ್ಯೂಬ್ ಸ್ಟುಡಿಯೋ ತೆರೆದು ಲೈವ್ ನಲ್ಲಿಯೇ ತಮ್ಮ ಆದಾಯ ಎಷ್ಟು ಎಂದು ತೋರಿಸಿದ್ದಾರೆ. ಹೌದು ಅವರು ಪ್ರತಿ ತಿಂಗಳು ಸರಿಸುಮಾರು 2100 ಡಾಲರ್ ಹಣ ಸಂಪಾದನೆ ಮಾಡುತ್ತಾರೆ. ಇದು ಭಾರತೀಯ ಮೌಲ್ಯದಲ್ಲಿ ಸರಿ ಸುಮಾರು 1 ಲಕ್ಷ 75 ಸಾವಿರದ ವರೆಗೆ ಬರುತ್ತದೆ. ಇದು ಎಲ್ಲರ ಹುಬ್ಬು ಏರಿಸುವುದು ಖಂಡಿತಾ ಆದರೆ ಅವರು ಹೇಳುವ ಪ್ರಕಾರ ಅವರ ವಿದೇಶ ಪ್ರಯಾಣದ ವೆಚ್ಚ ಕೂಡ ಅಷ್ಟೇ ಇದೆ. ಸರಿ ಸುಮಾರು 50-60 ಸಾವಿರ ರುಪಾಯಿ ವಿಮಾನ ಯಾನ ವೆಚ್ಚ ಆದರೆ, 30-40 ಸಾವಿರ ಪ್ರತಿ ಟೂರ್ ನ ವಾಸ ಮತ್ತು ಊಟದ ವೆಚ್ಚ ಹೋಗುತ್ತದೆ. ಇತರ ಎಲ್ಲಾ ಖರ್ಚು ವೆಚ್ಚ ಕಳೆದು 15-20 ಸಾವಿರ ಉಳಿಯುತ್ತದೆ ಎನ್ನುತ್ತಾರೆ Dr Bro. ಅದೇನೇ ಇರಲಿ ತಮ್ಮ ಹವ್ಯಾಸವನ್ನು ಮಾಡುತ್ತಾ ಅದರಲ್ಲಿ ಖುಷಿ ಪಟ್ಟುಕೊಂಡು ಹಣ ಸಂಪಾದನೆ ಮಾಡಿ ಜನರ ಮನ ಗೆಳ್ಳುತ್ತಿರುವ ಗಗನ್ ಅವರಿಗೆ ಶುಭವಾಗಲಿ. ಇನ್ನಷ್ಟು ದೇಶ ಸುತ್ತಿ ಜನರಿಗೆ ಇನ್ನಷ್ಟು ದೇಶ ತೋರಿಸುವಂತಾಗಲಿ ಎಂದು ನಾವು ಕೂಡ ಹಾರೈಸೋಣ.