ಕನ್ನಡಿಗನ ಬ್ಯಾಟಿಂಗ್ ಅಬ್ಬರಕ್ಕೆ ಇಬ್ಬರು ಭಾರತೀಯ ಕ್ರಿಕೆಟ್ ತಂಡದ ಓಪನರ್ ಗಳು ಅತಂತ್ರ. ಯಾರಿವರು?

414

ಕ್ರಿಕೆಟ್ ಎಂದರೆ ಹಾಗೆ ನೋಡಿ ಬ್ಯಾಟ್ ಬೀಸುವ ಕಲೆ ಒಂದು ಕರಗತವಾಗಿದೆ ಎಂದರೆ ಆತ ಬಹು ಬೇಡಿಕೆಯ ಆಟಗಾರ ಆಗುವುದರಲ್ಲಿ ಎರಡು ಮಾತಿಲ್ಲ. ನಮ್ಮ ಕರ್ನಾಟಕದ ಹುಡುಗ ಗುಡುಗಿದ ಪರಿಗೆ ಈಗ ಭಾರತ ತಂಡದ ಕೆಲ ಆಟಗಾರರು ತಮ್ಮ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಹೌದು, ಅವರು ಮತ್ಯಾರು ಅಲ್ಲ ಕರಾವಳಿ ಕುವರ ಕೆ ಎಲ್ ರಾಹುಲ್ . ಹೌದು ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ದಿಂದ ಎಲ್ಲರ ಮನಸ್ಸನ್ನು ಅವರು ತಮ್ಮದೇ ತಿರುಗಿಸುವ ಹಾಗೆ ಮಾಡುತ್ತಿದ್ದಾರೆ.

ಹೌದು ಅವರ ಈ ಬ್ಯಾಟಿಂಗ್ ಫಾರ್ಮ್ ನಿಂದಾಗಿ ಅದೆಷ್ಟೋ ಆಟಗಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರು ಆ ಆಟಗಾರರು ಎಂದು ತಿಳಿಯೋಣ ಬನ್ನಿ. ಟೆಸ್ಟ್ ಕ್ರಿಕಟಿನಲ್ಲಿ ಓಪನಿಂಗ್ ಬ್ಯಾಟಿಂಗ್ ಮಾಡುತ್ತಿದ್ದ ಮುರಳಿ ವಿಜಯ್ ಈಗ ವಿಳಾಸ ಇಲ್ಲದೆ ನಾಪತ್ತೆ ಆಗಿದ್ದಾರೆ. ಕೆ ಎಲ್ ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ಫಾರ್ಮ್ ನಿಂದಾಗಿ ಮುರಳಿ ವಿಜಯ್ ತಮ್ಮ ಕ್ರಿಕೆಟ್ ಬದುಕನ್ನೇ ತ್ಯಜಿಸುವ ಯೋಚನೆ ಮಾಡುವಂತೆ ಮಾಡಿದೆ.

ಶಿಖರ್ ಧವನ್ ಭಾರತ ಕಂಡ ಅತ್ಯಂತ ಶ್ರೇಷ್ಠ ಆಟಗಾರ. ರೋಹಿತ್ ಧವನ್ ಓಪನಿಂಗ್ ಜೋಡಿ ಉತ್ತಮ ಕ್ರಿಕೆಟ್ ಆಡಿದೆ. ಆದರೆ ಈಗ ರಾಹುಲ್ ಬಂದ ನಂತರ one day ಮತ್ತು ಟೆಸ್ಟ್ ಹಾಗೂ ಟಿ ಟ್ವೆಂಟಿ ಅಲ್ಲು ಕೂಡ ರಾಹುಲ್ ತಮ್ಮ ಹವಾ ತೋರಿಸುತ್ತಿದ್ದು ಧವನ್ ಅವರ ಸ್ಥಾನಕ್ಕೆ ಪೆಟ್ಟು ಬಿದ್ದ ಹಾಗೆ ಆಗಿದೆ.

ಇನ್ನೊಬ್ಬ ಆಟಗಾರ ಪೃಥ್ವಿ ಶಾ ಅವರು ಹೌದು ತಮ್ಮ ಕರಿಯರ್ ಆರಂಭಿಸುವ ಸಮಯದಲ್ಲಿ ಅತ್ಯಂತ ಲಯದಲ್ಲಿ ಇದ್ದ ಈ ಡೆಲ್ಲಿ ಆಟಗಾರ ಈಗ ತಮ್ಮ ಕ್ರಿಕೆಟ್ ಬದುಕಿನ ಅತ್ಯಂತ ಕಠಿಣ ಸಮಯದಲ್ಲಿ ಇದ್ದಾರೆ ಹೌದು ತಮ್ಮ ಫಾರ್ಮ್ ಗೆ ಮರಳುವ ಎಲ್ಲಾ ಪ್ರಯತ್ನ ಅವರು ಮಾಡುತ್ತಿದ್ದಾರೆ. ಆದರೆ ಅದೇ ಸಮಯಕ್ಕೆ ಕ್ಲಿಕ್ ಆದ ರಾಹುಲ್ ತಮ್ಮ ಸ್ಥಾನ ಭದ್ರ ಪಡಿಸಕೊಂಡಿದ್ದಾರೆ. ಅದು ಏನೇ ಇರಲಿ ಈಗ ರಾಹುಲ್ ಇರುವ ಸ್ಥಾನ ಯಾರು ಕೊಟ್ಟಿದ್ದಲ ಬದಲಾಗಿ ಅವರು ಕಠಿಣ ಪರಿಶ್ರಮದಿಂದ ಪಡೆದು ಕೊಂಡದ್ದು ಎಂಬುದಕ್ಕೆ ನಾವು ಕನ್ನಡಿಗರು ಹೆಮ್ಮೆ ಪಡೆದುಕೊಳ್ಳಬೇಕು.

Leave A Reply

Your email address will not be published.