ಕನ್ನಡಿಗರ ಮನಗೆದ್ದ ಸಾಯಿ ಪಲ್ಲವಿ, ಕನ್ನಡ ದಿವಂಗತ ನಟನ ಜೊತೆ ನಟಿಸಬೇಕಿತ್ತು ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

187

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಮಲಯಾಳಂ ನ ಪ್ರೇಮಂ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಅವರ ಬೇಡಿಕೆಯನ್ನುವುದು ಭಾರತೀಯ ಚಿತ್ರರಂಗದಲ್ಲಿ ಸಖತ್ ಹೆಚ್ಚಾಗಿದೆ ಎಂದು ಹೇಳಬಹುದು. ಎಲ್ಲಕ್ಕಿಂತ ಪ್ರಮುಖವಾಗಿ ಬೇರೆ ನಟಿಯರು ಗ್ಲಾಮರಸ್ ಆಗಿ ಕಾಣಿಸಿಕೊಂಡರು ಪ್ರಯತ್ನಪಟ್ಟರೆ ಸಾಯಿ ಪಲ್ಲವಿ ಮಾತ್ರ ತಮ್ಮ ನ್ಯಾಚುರಲ್ ಸೌಂದರ್ಯದಿಂದಾಗಿ ತಮ್ಮ ನಟನೆಯ ಶಕ್ತಿಯಿಂದಾಗಿ ಪ್ರೇಕ್ಷಕರ ಮನಗಲ್ಲಲು ಯಶಸ್ವಿಯಾಗುತ್ತಾರೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅವರು ಆಯ್ಕೆ ಮಾಡುತ್ತಿರುವ ಸಿನಿಮಾ ಎನ್ನುವುದು ಸದಭಿರುಚಿ ಸಿನಿಮಾವನ್ನು ನೋಡುವ ಪ್ರೇಕ್ಷಕರ ಮನೆಗೆಲ್ಲುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾ ಆಗಿರುವ ಗಾರ್ಗಿ ಸಿನಿಮಾದಲ್ಲಿ ಇತ್ತೀಚಿಗಷ್ಟೇ ಸಾಯಿ ಪಲ್ಲವಿ ಯವರು ನಟಿಸಿದ್ದರು. ಗಾರ್ಗಿ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು ಎಂಬುದು ನಿಮಗಲ್ಲರಿಗೂ ತಿಳಿದಿರುವ ವಿಚಾರ ಇದು ಕನ್ನಡದಲ್ಲಿ ಕೂಡ ಬಿಡುಗಡೆಯಾಗಿತ್ತು. ನಟಿ ಸಾಯಿ ಪಲ್ಲವಿ ಅವರಿಗೆ ಕನ್ನಡವನ್ನು ನಮ್ಮ ಕನ್ನಡ ಚಿತ್ರರಂಗದ ನಟಿ ನಿರ್ದೇಶಕಿ ಆಗಿರುವ ಶೀತಲ್ ಶೆಟ್ಟಿ ಅವರು ಕಲಿಸಿಕೊಟ್ಟಿದ್ದರು.

ನಟಿ ಶೀತಲ್ ಶೆಟ್ಟಿ ಅವರಿಂದ ಕನ್ನಡವನ್ನು ಕಲಿತುಕೊಂಡು ತಾವೇ ಸ್ವತಹ ಡಬ್ ಮಾಡಿ ಸಾಯಿ ಪಲ್ಲವಿ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೇ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅನುಶ್ರೀ ಅವರ ಯುಟ್ಯೂಬ್ ಚಾನೆಲ್ ನಲ್ಲಿ ನಡೆಯುತ್ತಿದ್ದ ಸಂದರ್ಶನದ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಕನ್ನಡದ ನಟ ಯಾರು ಎಂದು ಕೇಳಿದಾಗ ಸಾಯಿ ಪಲ್ಲವಿ ಅವರು ನೀಡಿದ್ದ ಉತ್ತರ ನಿಜಕ್ಕೂ ಕೂಡ ಎಲ್ಲರ ಮನೆ ಗೆದ್ದಿದೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಹಾಗೂ ನಟ ಆಗಿರುವ ಶಂಕರ್ ನಾಗ್ ಅವರ ಜೊತೆಗೆ ಅಥವಾ ಅವರ ಸಿನಿಮಾದಲ್ಲಿ ನಟಿಸುವ ಆಸೆ ಇತ್ತು ಎಂಬುದಾಗಿ ಸಾಯಿ ಪಲ್ಲವಿ ಅವರು ಹೇಳಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.