ಕರ್ನಾಟಕದೆಲ್ಲೆಡೆ ಅಪ್ಪು ಕಲರವ. ಎಲ್ಲ ಕಡೆ ಡಾ. ಪುನೀತ್ ರಾಜಕುಮಾರ್. ಜೇಮ್ಸ್ ಗೆ ಕಾಯುತ್ತಿರುವ ಅಭಿಮಾನಿಗಳು.

357

ಅಪ್ಪು ನಮ್ಮನ್ನಗಲಿ ಕರ್ನಾಟಕದ ಜನರ ಮನಸಿಗೆ ತುಂಬಾ ನೋವಾಗಿದೆ. ಎಷ್ಟೋ ಜನರಿಗೆ ಮಕ್ಕಳಿಗೆ, ಗೋವುಗಳಿಗೆ, ವೃದ್ಧರಿಗೆ, ಗೆಳೆಯರಿಗೆ ಸಹಾಯ ಮಾಡಿ ಕಲಿಯುಗದ ಕರ್ಣ ಆಗಿದ್ದರು ನಮ್ಮ ಡಾ ಪುನೀತ್ ರಾಜಕುಮಾರ್. ಇಂದಿನ ಕಾಲದಲ್ಲಿ ಹೆಸರು ಗಳಿಸಲು ಕ್ಯಾಮೆರಾ ಮುಂದೆ ಸಹಾಯ ಮಾಡುವವರ ಮದ್ಯೆ ಯಾರಿಗೂ ಗೊತ್ತಾಗದೆ ತೆರೆ ಮರೆಯಲ್ಲಿ ಸಹಾಯ ಮಾಡಿ ದೇವರಾದ ಪುನೀತ್ ರಾಜುಕುಮಾರ್ ಅವರ ನಡೆ ನಮಗೆ ಎಲ್ಲರಿಗು ಸ್ಫೂರ್ತಿ. ಇದೀಗ ಅವರ ಕೊನೆಯ ಸಿನಿಮಾ ಜೇಮ್ಸ್ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದರ ಹವಾ ಇಡೀ ಕರ್ನಾಟಕದಲ್ಲಿ ಕಾಣಿಸುತ್ತಿದೆ.

ಕನ್ನಡಿಗರು ಹಿಂದೆಂದೂ ಕಾಣದ ಸಿನಿಮಾ ಸಡಗರ ಬೆಂಗಳೂರಿನಲ್ಲಿ ಜನರು ನೋಡುತ್ತಿದ್ದರೆ. ಎಲ್ಲಿ ನೋಡಿದರು ಕೂಡ ಕಾಣುವುದು ಅಪ್ಪು ಕಟೌಟ್ ಮಾತ್ರ. ಬೆಂಗಳೂರಿನ ಪ್ರಿ ರಿಲೀಸ್ ಇವೆಂಟ್ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಅಲ್ಲಿ ನಡೆದಿದ್ದು ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇದು ಸಂಭ್ರಮ ನೋಡಿದಾಗ ಅಭಿಮಾನಿಗಳು ಹಾಗು ಕನ್ನಡಿಗರು ಅಪ್ಪು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕಾಣುತ್ತಿದೆ. ಮಾರ್ಚ್ ೧೭ ಗೆ ಅಪ್ಪು ಕೊನೆಯ ಸಿನೆಮಾ ಜೇಮ್ಸ್ ಬಿಡುಗಡೆ ಅಗಲಿದ್ದು ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಪ್ರಿ ಇವೆಂಟ್ ಗೆ ಕೋಟಿಗಟ್ಟಲೆ ಅಪ್ಪು ಅಭಿಮಾನಿಗಳು ಭಾಗವಹಿಸಿದ್ದು ದೊಡ್ಡ ದೊಡ್ಡ ಸಿನೆಮಾ ತಾರೆಯರು ಕೂಡ ಪಾಲ್ಗೊಂಡಿದ್ದರು. ಈಗಾಗಲೇ ಜೇಮ್ಸ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳು ಹಾಗೇನೇ ಕನ್ನಡಿಗರಿಗೆ ಅತ್ಯಂತ ಇಷ್ಟವಾಗಿದೆ. ಅಲ್ಲದೆ ಸಿನಿಮಾ ಹಾಡುಗಳು ಕೂಡ ಬಿಡುಗಡೆ ಗೊಂಡಿದ್ದು ಉತ್ತಮ ರೆಸ್ಪಾನ್ಸ್ ಕೂಡ ಬಂದಿದೆ. ಹಾಡುಗಳೆಲ್ಲ ಮಿಲಿಯಾನ್ ಗಟ್ಟಲೆ ವೀಕ್ಷಣೆ ಪಡೆದಿದ್ದು ಅಪ್ಪು ಗೆ ಕನ್ನಡಿಗರ ದೊಡ್ಡ ಟ್ರಿಬ್ಯೂಟ್ ಎಂದರು ತಪ್ಪಾಗಲಾರದು. ೧೭ ಬಿಡುಗಡೆ ಆಗಲಿರುವ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.

Leave A Reply

Your email address will not be published.