ಕಾಂಗ್ರೆಸ್‌ಗೆ ಟಾಟಾ ಬೈ ಬೈ ಹೇಳಿ ದೀದಿ ಪಕ್ಷ ಸೇರಿದ ಕಾಂಗ್ರೆಸ್ಸಿಗರು. ಕಾಂಗ್ರೆಸ್ ಗೆ ಗುಡ್‌ಬೈ ಹೇಳದವರ ಸಂಖ್ಯೆ ಎಷ್ಟು ಗೊತ್ತೆ?
ಕಾಂಗ್ರೆಸ್ ಒಂದು ಕಾಲದಲ್ಲಿ ಅತ್ಯಂತ ಶಕ್ತಿಯುತವಾಗಿದ್ದ ಪಕ್ಷ ಕಾಲಕ್ರಮೇಣವಾಗಿ ಬೇರೆ ಬೇರೆ ಪಕ್ಷವಾಗಿ ಒಡೆಯುತ್ತಾ ಹೋಯಿತು. ೨೦೧೪ ರ ಲೋಕಸಭಾ ಚುನಾವಣೆಯ ನಂತರವಂತೂ ಕಾಂಗ್ರೆಸ್ ಜನರ ವಿಶ್ವಾಸ ಗಳಿಸಲು ಕೂಡಾ ಪರದಾಡುವಂತಾಯಿತು. ಒಂದು ಕಾಲದಲ್ಲಿ ಪಕ್ಷದ ಚಿನ್ಹೆಯೊಂದಿಗೆ ಯಾರು ನಿಂತರೂ ಗೆಲ್ಲುತ್ತಿದ್ದರು ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದು ಕಾಂಗ್ರೆಸ್ ಕೇವಲ ೪೪ ಸೀಟುಗಳನ್ನು ಮಾತ್ರ ಗೆಲ್ಲವಂತಾಯಿತು.
ಕಾಂಗ್ರೆಸ್ ಮೇಘಾಲಯದಲ್ಲಿ ದೊಡ್ಡ ವಿಪಕ್ಷವಾಗಿತ್ತು. ೬೦ ಶಾಸಕರ ಬಲ ಹೊಂದಿರುವ ವಿಧಾನಸಭಾ ೪೦ ಸೀಟುಗಳನ್ನು ಪಡೆದಿರುವ ಬಿಜೆಪಿ ತನ್ನ ಮಿತ್ರ ಪಕ್ಷದೊಂದಿಗೆ ಸೇರಿ ಸರಕಾರ ರಚನೆ ಮಾಡಿದೆ. ೧೭ ಶಾಸಕರೊಂದಿಗೆ ಕಾಂಗ್ರೆಸ್ ಮುಖ್ಯ ವಿಪಕ್ಷವಾಗಿದೆ. ಇದೀಗ ಅರ್ಧಕ್ಕಿಂತ ಹೆಚ್ಚು ಜನ ಶಾಸಕರು ಅಂದರೆ ೧೭ ರಲ್ಲಿ ೧೧ ಜನರು ತೃಣಮೂಲ ಕಾಂಗ್ರೆಸ್ ಗೆ ಸೇರಿರುವುದು ಕಾಂಗ್ರೆಸ್ ಗೆ ತಲೆನೋವು ತಂದಿದೆ. ಇ ಪಕ್ಷಾಂತರ ಮಾಡಿದವರು ಅರ್ಧಕ್ಕಿಂತ ಜಾಸ್ತಿ ಜನ ಇರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಕೂಡಾ ಇವರ ಮೇಲೆ ಅನ್ವಯವಾಗುವುದಿಲ್ಲ.
ಇನ್ನು ಕಾಂಗ್ರೆಸ್ ನಲ್ಲಿ ನಾಯಕತ್ವ ಕೊರತೆ ಇಂದ ಅನೇಕರು ದೀದಿಯ ತೃಣಮೂಲ ಕಾಂಗ್ರೆಸ್ ಪರ್ಯಾಯವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಗೋವಾದಲ್ಲೂ ಕೂಡಾ ಅನೇಕ ಕಾಂಗ್ರಸ್ಸಿಗರು ತೃಣಮೂಲ ಕಾಂಗ್ರೆಸ್ ಗೆ ಸೇರುತ್ತಿದ್ದಾರೆ. ಇದು ವಿಪಕ್ಷಗಳಿಗೆ ಮಾತ್ರವಲ್ಲದೇ ಬಿಜೆಪಿಯ ಹಲವರು ಕೂಡಾ ದೀದಿ ಕಡೆ ಒಲವು ತೋರಿಸಿದ್ದಾರೆ. ಇದಕ್ಕೆ ದೊಡ್ಡ ಉದಾಹರಣೆ ನಿನ್ನೆ ನಡೆದ ದೀದಿ ಹಾಗು ಸುಬ್ರಹ್ಮಣ್ಯ ಸ್ವಾಮಿ ಅವರ ಭೇಟಿ. ಸದಾ ಮೋದಿ ಸರಕಾರ ದೂರುತ್ತಿದ್ದ ಸ್ವಾಮಿ ಅವರು ದೀದಿ ಪಕ್ಷಕ್ಕೆ ಸೇರುತ್ತಾರೆ ಅನ್ನುವ ಗುಮಾನಿಗೆ ಪುಷ್ಟಿ ತರಿಸಿದೆ ನಿನ್ನೆಯ ಭೇಟಿ.