ಕಾಲೇಜು ಸಮಯದಲ್ಲಿ ಹೊಳೆದ ಐಡಿಯಾ ಇಂದು ವರ್ಷಕ್ಕೆ ಎರಡು ಕೋಟಿ ವಹಿವಾಟು ಮಾಡುತ್ತಿದೆ ಈ ಉದ್ಯಮ.

525

ಜೀವನದಲ್ಲಿ ಬರಿ ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡುವ ಒಂದು ವರ್ಗ ಇದ್ದರೆ ಮತ್ತೊಬ್ಬರಿಗೆ ಉದ್ಯೋಗ ಕೊಡಿಸಬೇಕು ಅಷ್ಟರ ಮಟ್ಟಿಗೆ ಬೆಳೆಯಬೇಕು ಎಂದು ಯೋಚನೆ ಮಾಡುವವರು ಇದ್ದಾರೆ. ಆದರೆ ಅದು ಎಲ್ಲರಿಗೂ ಸಾಧ್ಯ ಆಗುವುದಿಲ್ಲ ಏಕೆಂದರೆ ಇದ್ದದ್ದು ಕೂಡ ಕಳೆದು ಕೊಳ್ಳುತ್ತೇವೆ ಎಂಬ ಭಯ. ಯಶಸ್ಸು ಸಾಧಿಸಿದವರು ಎಲ್ಲರೂ ಕೂಡ ಎಲ್ಲವನ್ನೂ ಕಳೆದುಕೊಂಡು ಮತ್ತೆ ಮೇಲಕ್ಕೆ ಬಂದವರು. ಹೀಗಿರುವಾಗ ಧೈರ್ಯದಿಂದ ಮುಂದೆ ಸಾಗಿದರೆ ಮಾತ್ರ ಯಶಸ್ಸು ಸಾಧ್ಯ . ಹಾಗೆ ಧೈರ್ಯ ತೋರಿದ ಮೂವರು ಸ್ನೇಹಿತರ ಕಥೆ ಇದು.

ಇವರ ಹೆಸರು ಮೌಸಮ್,ರೂಪಮ್ ಮತ್ತು ಡೇವಿಡ್ . ಇವರು ಅಸ್ಸಾಂ ಮೂಲದ ಹುಡುಗರು. ಇಂಜಿನಿಯರಿಂಗ್ ಪದವಿ ಓದುತ್ತಿದ್ದ ಇವರಿಗೆ ಕಾಲೇಜಿನಲ್ಲಿ ಪ್ರೊಜೆಕ್ಟ್ ವರ್ಕ್ ಎಂದು ಇರುತ್ತದೆ. ಇದಕ್ಕಾಗಿ ಮಾಡಬೇಕಿದ್ದ ಪ್ರೊಜೆಕ್ಟ್ ಬಗೆಗಿನ ಐಡಿಯಾ ಹುಡುಕುತ್ತಿದ್ದಾಗ ಹೊಳೆದ ಐಡಿಯಾ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಹೌದು ಇವರಿಗೆ ಪ್ರೊಜೆಕ್ಟ್ ಮಾಡಲು ಇವರು ಪ್ರಕೃತಿಗೆ ಮಾರಕವಾದ ಪ್ಲಾಸ್ಟಿಕ್ ಅನ್ನು ರಿಸೈಕಲ್ ಮಾಡುವ ಬಗೆಗೆ ಯೋಚನೆ ಮಾಡುತ್ತಾರೆ. ಪ್ಲಾಸ್ಟಿಕ್ ನಿಂದ ಇಟ್ಟಿಗೆ ತಯಾರು ಮಾಡುವ ಐಡಿಯಾ ಮಾಡುತ್ತಾರೆ.

ಇದನ್ನು ಕಾರ್ಯಗತ ಮಾಡಲು ಬಹಳಷ್ಟು ಅಡೆತಡೆಗಳು ಇದ್ದವು.ಪ್ಲಾಸ್ಟಿಕ್ ಕರಗಿಸಿ ಇಟ್ಟಿಗೆ ತಯಾರು ಮಾಡಿದರೆ ಅದು ಪ್ರಕೃತಿಗೆ ಹೆಚ್ಚಿನ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತದೆ. ಅದಕ್ಕಾಗಿ ಮತ್ತೆ ಅದನ್ನು ಹುಡಿ ಮಾಡಿ ರಿಸೈಕಲ್ ಮಾಡುವ ಯೋಜನೆ ಮಾಡುತ್ತಾರೆ. ಅಷ್ಟೊಂದು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಹುಡಿ ಮಾಡಲು ಅಷ್ಟೇ ದೊಡ್ಡ ಗಾತ್ರದ ಮೆಷಿನ್ ಕೂಡ ಬೇಕು, ಅದನ್ನು ಎಲ್ಲೂ ಖರೀದಿ ಮಾಡಲು ಹೋಗದೆ ಅವರೇ ಕಂಡು ಹಿಡಿದರು ಈ ಹೊಸ ಮೆಷಿನ್ ಕೂಡ. ಹೀಗೆ ಪ್ಲಾಸ್ಟಿಕ್ ಹುಡಿ, ಸಿಮೆಂಟ್ ಮತ್ತು ಕೆಮಿಕಲ್ ಬಳಸಿ ತಯಾರಿಸಿದ ಇಟ್ಟಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇಟ್ಟಿತು. ದಿನ ಒಂದಕ್ಕೆ 10,000 ಇಟ್ಟಿಗೆ ತಯಾರಿಸುವ ಮಟ್ಟಿಗೆ ಬೆಳೆದು ನಿಂತಿತು. ಕಳೆದ ವರ್ಷದಲ್ಲಿ 2 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಈ ವರ್ಷ ಇದು ದ್ವಿಗುಣ ಗೊಳ್ಳುತ್ತದೆ ಎಂದು ಹೇಳುತ್ತಾರೆ ಕಂಪನಿಯ ಸಂಸ್ಥಾಪಕರು.

Leave A Reply

Your email address will not be published.