ಕೆಲಸ ದಿಂದ ಬೇಸತ್ತು ಹೋಗಿದ್ದರೆ ಈ ಉದ್ಯಮ ಪ್ರಾರಂಭಿಸಿ. ಕಡಿಮೆ ಬಂಡವಾಳ ಹಾಕಿ ಉತ್ತಮ ಲಾಭ ಪಡೆಯಿರಿ.
ಬೆಳಿಗ್ಗೆ ಇಂದ ರಾತ್ರಿ ವರೆಗೂ ಕಷ್ಟಪಟ್ಟು ದುಡಿದು ಉತ್ತಮ ಸಂಬಳ ಸಿಗದೇ ಬೇಸರಪಟ್ಟವರೇ ಹೆಚ್ಚು. ಸ್ವಂತ ಉದ್ಯಮ ಮಾಡುವ ಅಂದರೆ ಯಾವುದೇ ಐಡಿಯಾ ಸಿಗುತ್ತಿಲ್ಲ ಅಥವಾ ಹಾಕಲು ಬೇಕಾದ ಬಂಡವಾಳ ಇಲ್ಲ. ಇಂತಹದರಲ್ಲಿ ನಾವು ನಮ್ಮ ಪೇಜ್ ಅಲ್ಲಿ ಇಂತಹ ಬಿಸಿನೆಸ್ ಐಡಿಯಾ ಬಗ್ಗೆ ಹೇಳುತ್ತಿದ್ದೇವೆ. ಈಗಲೂ ಅಂತಹದೇ ಒಂದು ಉತ್ತಮ ಬಿಸಿನೆಸ್ ಐಡಿಯಾ ದೊಂದಿಗೆ ಈ ಪೋಸ್ಟ್ ಹಾಕಿದ್ದೇವೆ ಪೂರ್ತಿ ಓದಿ. ಯಾವುದಾದರು ಉತ್ತಮ ಉದ್ಯಮ ಇದ್ದರೆ ಅದು ಕೃಷಿ. ಇದರಲ್ಲಿ ಮಾಡುವ ಉದ್ಯಮ ತುಸು ಕೆಲಸ ಹೆಚ್ಚಾದರೂ ಕೂಡ ಲಾಭ ಕೂಡ ಹೆಚ್ಚಿರುತ್ತದೆ.
ಮಾರುಕಟ್ಟೆಯಲ್ಲಿ ಲವಂಗದ ಎಲೆಗೆ ಬಹಳ ಬೇಡಿಕೆ ಇದೆ. ಆದ್ದರಿಂದ ಈ ಕೃಷಿ ಮಾಡುವುದು ಲಾಭದಾಯಕ ಎಂದರೆ ತಪ್ಪೇನಿಲ್ಲ. ಈ ಕೃಷಿ ಮಾಡುವುದು ಬಹಳ ಸುಲಭ ಹಾಗೇನೇ ಬಂಡವಾಳ ಕೂಡ ಜಾಸ್ತಿ ಬೇಕಂತಿಲ್ಲ. ಈ ಕೃಷಿ ಮೂಲಕ ಕಡಿಮೆ ಬಂಡವಾಳ ಹಾಕಿ ಅಧಿಕ ಲಾಭ ಪಡೆಯಬಹುದು. ಈ ಲವಂಗದ ಎಲೆ ಬಹಳ ಉಪಯೋಗಿ ವಸ್ತು ಕೂಡ ಆಗಿದೆ. ಈ ಲವಂಗದ ಎಲೆ ಗಳನ್ನೂ ಭಾರತ, ಅಮೇರಿಕ ಹಾಗು ಯುರೋಪಿಯನ್ ದೇಶಗಳಲ್ಲಿ ತಿನ್ನುವ ಆಹಾರದಲ್ಲಿ ಬಳಸುತ್ತಾರೆ. ಇದನ್ನು ಸೂಪ್, ಮಾಂಸ, ಸಮುದ್ರ ಆಹಾರ, ಮತ್ತು ತರಕಾರಿ ಭಕ್ಷಗಳಲ್ಲಿ ಬಳಸಲಾಗುತ್ತದೆ.
ಈ ಎಲೆಗಳನ್ನು ಸಂಪೂರ್ಣವಾಗಿ ಆಹಾರಗಳಲ್ಲಿ ಬಳಸಲಾಗುತ್ತದೆ ಆದರೆ ತಿನ್ನುವದಕಿಂತ ಮೊದಲು ತೆಗೆದು ಇಡಲಾಗುತ್ತದೆ. ಭಾರತ ಹಾಗು ಪಾಕಿಸ್ತಾನದಂತಹ ದೇಶಗಳಲ್ಲಿ ಬಿರಿಯಾನಿ, ಪಲವುಗಳಲ್ಲಿ ಪ್ರತಿನಿತ್ಯ ಬಳಸುತ್ತಾರೆ. ಇದನ್ನು ಗರಂ ಮಸಾಲೆ ರೂಪದಲ್ಲಿ ಕೂಡ ಬಳಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಉಪಕಾರಿ. ಭಾರತ ರಷ್ಯಾ, ಮದ್ಯ ಅಮೇರಿಕ, ಇಟಲಿ, ಫ್ರಾನ್ಸ್ ಮತ್ತು ಬೆಲ್ಜಿಯಂ ನಂತಹ ದೇಶಗಳಲ್ಲಿ ಹೆಚ್ಚಾಗಿ ಉತ್ಪಾದಿಸುವ ದೇಶಗಳಾಗಿವೆ. ನಿಮ್ಮ ಮನೆಯಲ್ಲಿ ಜಾಗ ಇದ್ದರೆ ಈ ಕೃಷಿ ಆರಾಮವಾಗಿ ಮಾಡಬಹುದಾಗಿದೆ. ಶುರು ಮಾಡುವಾಗ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ.
ದೊಡ್ಡದಾಗುತ್ತ ಹೋದಹಾಗೆ ಪರಿಶ್ರಮ ಅಷ್ಟು ಹಾಕಬೇಕೆಂದಿಲ್ಲ. ಈ ಕೃಷಿ ಇಂದ ಪ್ರತಿ ವರ್ಷ ಉತ್ತಮ ಅಧಯ ಪಡೆಯಬಹುದು. ಈ ಬೇಯ್ ಎಲೆಗಳನ್ನು ಅಂದರೆ ಲವಂಗ ಎಲೆ ಕೃಷಿ ಗೆ ಸರಕಾರದಿಂದ ಕೂಡ ಆರ್ಥಿಕ ನೆರವು ಸಿಗುತ್ತದೆ. ಶೇಕಡಾ ೩೦% ಸಹಾಯಧನ ಸರಕಾರದ ಔಷದಿಯ ಸಸ್ಯಗಳ ಮಂಡಳಿ ಇಂದ ದೊರಕುತ್ತದೆ. ಬೇಯ್ ಎಲೆಗಳಿಂದ ವಾರ್ಷಿಕವಾಗಿ ೩೦೦೦-೫೦೦೦ ವರೆಗೆ ಗಳಿಸಬಹುದು. ಇಂತಹ ೨೫-೩೦ ಸಸಿ ಇದ್ದರೆ ನೀವು ವಾರ್ಷಿಕವಾಗಿ ೭೫,೦೦೦-೧,೨೫,೦೦೦ ವರೆಗೂ ಹಣ ಗಳಿಸಿಕೊಳ್ಳಬಹುದು.