ಕೇವಲ 12000 ರೂಪಾಯಿಯಲ್ಲಿ 6 ಸೀಟರ್ ಬ್ಯಾಟರಿ ಬೈಕ್ ತಯಾರಿಸಿದ ಹಳ್ಳಿ ಹುಡುಗ. ಇದರಿಂದ ಪ್ರಭಾವಿತರಾಗಿ ಆನಂದ್ ಮಹೇಂದ್ರ ಹೇಳಿದ್ದೇನು ಗೊತ್ತ?

193

ಸಂಚಾರ ಮಾಧ್ಯಮ ಇಂದು ಬಹುಮುಖ್ಯ ಮಾಧ್ಯಮವಾಗಿ ಮಾರ್ಪಟ್ಟಿದೆ. ಜಗತ್ತು ವೇಗವಾಗಿ ಚಲಿಸುತ್ತಿರುವ ಕಾಲದಲ್ಲಿ ಭಾರತ ಕೂಡ ಅದರ ವೇಗವನ್ನು ಹೆಚ್ಚು ಪಡಿಸಲು ಉತ್ತಮ ಮೂಲಸೌಕರ್ಯ ವೃದ್ಧಿ ಪಡಿಸುತ್ತಿದೆ. ಇಂದು ವಾಹನಗಳ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ಬರುತ್ತಲೇ ಇದೆ. ಭಾರತಕ್ಕೆ ತೈಲಗಳಿಂದ ಮುಕ್ತಿ ಪಡಿಸಲು ಸರಕಾರ ಹೊಸ ಹೊಸ ಯೋಜನೆ ಅನ್ವೇಷಣೆಗಳಿಗೆ ಪ್ರೋತ್ಸಾಹಗಳನ್ನು ಕೊಡುತ್ತಿದೆ.

ಹಳ್ಳಿಗಳಲ್ಲಿ ನಿಧಾನವಾಗಿ ವಾಹನಗಳನ್ನು ಖರೀದಿ ಮಾಡುವತ್ತ ಮುಖ ಮಾಡುತ್ತಿದೆ ಯಾದರು ಕೂಡ ಅನೇಕರಿಗೆ ಈ ವಾಹನಗಳ ಖರೀದಿ ಮಾಡುವುದೇ ಒಂದು ದೊಡ್ಡ ವಿಷಯ. ಆದರೆ ಎಲ್ಲಿ ಇಚ್ಚಾಶಕ್ತಿ ಇರುತ್ತದೆಯೋ ಅಲ್ಲಿ ಹೊಸ ಆವಿಷ್ಕಾರಗಳು ಹುಟ್ಟೇ ಹುಟ್ಟುತ್ತದೆ. ಅಂತಹ ವಿಷಯ ನಾವು ಇಂದು ಹಂಚಿಕೊಳ್ಳುತ್ತಿದ್ದೇವೆ. ಒಬ್ಬ ಹಳ್ಳಿ ಹುಡುಗ 6 ಜನರು ಕುಳಿತುಕೊಳ್ಳಬಹುದಾದ ಬೈಕ್ ಒಂದನ್ನು ಕಂಡು ಹಿಡಿದಿದ್ದಾನೆ. ಇದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಭಾರತದ ಉತ್ತರ ಪ್ರದೇಶದಲ್ಲಿರುವ ಸಣ್ಣ ಹಳ್ಳಿ ಅಜಂ ಘಡ್ ಎನ್ನುವಲ್ಲಿ ಅಸದ್ ಎನ್ನುವ ಹುಡುಗ ಈ ಆವಿಷ್ಕಾರವನ್ನು ಮಾಡಿದ್ದಾನೆ. ಯಾವುದೇ ವೃತ್ತಿಪರ ಇಂಜಿನಿಯರಿಂಗ್ ಕೋರ್ಸ್ ಮಾಡದೇ ಈ ಹೊಸ ಆವಿಷ್ಕಾರ ಮಾಡಿದ್ದಾನೆ ಈ ಹುಡುಗ. ಮೊದಲಿಂದಲೂ ಬೈಕ್ ಗಳಲ್ಲಿ ಆಸಕ್ತಿ ಹೊಂದಿದ್ದ ಈ ಹುಡುಗ ಅದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ. ಬೈಕ್ ಮಾರ್ಪಾಡು ಇಂದು ಫ್ಯಾಷನ್ ಆಗಿ ಬಿಟ್ಟಿದೆ. ಇದು ನಗರದಿಂದ ಹಳ್ಳಿಯವರೆಗೂ ಇಂತಹ ಮಾಡಿಫೈಡ್ ಬೈಕ್ ಗಳನ್ನೂ ನೋಡಬಹುದಾಗಿದೆ.

ಹಾಗೇನೇ ಈ ಅಸದ್ ಪೆಟ್ರೋಲ್ ಬೈಕ್ ಅನ್ನು ಬ್ಯಾಟರಿ ಬೈಕ್ ಆಗಿ ಬದಲಾಯಿಸಿ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಂದಿನ ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ಎಲ್ಲರು ಎಲೆಕ್ಟ್ರಿಕ್ ವಾಹನಗಳಿಗೆ ಹೋಗುತ್ತಿದ್ದಾರೆ. ಆದರೆ ಈ ಎಲೆಕ್ಟ್ರಿಕ್ ವಾಹನಗಳು ದುಬಾರಿ ಆಗಿರುವುದರಿಂದ ಅನೇಕ ಜನರು ಈಗಿರುವ ಬೈಕ್ ಆನ್ ಪೆಟ್ರೋಲ್ ಇಂದ ಬ್ಯಾಟರಿ ಗೆ ಬದಲಾಯಿಸುತ್ತಿದ್ದಾರೆ. ಅಸದ್ ಈ ಬದಲಾವಣೆ ಮಾಡಿ ಸೈ ಎನಿಸಿಕೊಂಡಿದ್ದಾನೆ.

ಅಸದ್ ತಯಾರಿಸಿದ ಈ ಆರು ಸೀಟರ್ ಬೈಕ್ ಅಲ್ಲಿ ಸ್ಟ್ರಾಂಗ್ ಮೋಟಾರ್ ಬಳಸಲಾಗಿದ್ದು, ಆರು ಪ್ರಯಾಣಿಕರ ಬಾರವನ್ನು ಕೂಡ ಇದು ಸುಲಭವಾಗಿ ತಡೆದುಕೊಳ್ಳುತ್ತದೆ. ಬ್ರೇಕಿಂಗ್ ಸಿಸ್ಟಮ್, ಶಾಕ್ ಅಪ್, ಎಲ್ ಈ ಡಿ ಲೈಟ್ ಎಲ್ಲವನ್ನು ಅಗತ್ಯಕ್ಕೆ ಅನುಗುಣವಾಗಿ ತಯಾರು ಮಾಡಿದ್ದಾನೆ ಈ ಹುಡುಗ. ಈ ಬೈಕ್ ನ ಸರಾಸರಿ 150 ಕಿಲೋ ಮೀಟರ್ ನೀಡಿದರೆ ಇದಕ್ಕೆ ತಗಲುವ ವೆಚ್ಚ ಕೇವಲ ೧೦-೧೨ ರೂಪಾಯಿಗಳು. ಇದನ್ನು ಆನಂದ್ ಮಹಿಂದ್ರಾ ಅವರು ನೋಡಿ ಅಭಿನಂದಿಸಿದ್ದಾರೆ.

ದೇಶದ ಪ್ರಸಿದ್ಧ ಕಂಪನಿ ಆನಂದ್ ಮಹಿಂದ್ರಾ ಅವರು ಯಾವಾಗಲು ಇಂತಹ ಆವಿಷ್ಕಾರದ ವಿಷಯಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಾಳೆ ಇರುತ್ತಾರೆ. ಇಂತಹ ಆವಿಷ್ಕಾರಕ್ಕೆ ಬಹಿರಂಗ ಪ್ರಚಾರ ಕೂಡ ಮಾಡುತ್ತಾರೆ. ಇದೀಗ ಈ ವಿಡಿಯೋ ಶೇರ್ ಮಾಡಿದ್ದೂ ಎಲ್ಲೆಡೆ ವೈರಲ್ ಆಗುತ್ತಿದೆ.

ಕೇವಲ ಸಣ್ಣ ವಿನ್ಯಾಸದ ಒಳಹರಿವುಗಳೊಂದಿಗೆ, (ಚಾಸಿಸ್ @BosePratap ಗಾಗಿ ಸಿಲಿಂಡರಾಕಾರದ ವಿಭಾಗಗಳು ?) ಈ ಸಾಧನವು ಜಾಗತಿಕ ಅಪ್ಲಿಕೇಶನ್ ಅನ್ನು ಕಂಡುಹಿಡಿಯಬಹುದು. ಕಿಕ್ಕಿರಿದ ಯುರೋಪಿಯನ್ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸ ‘ಬಸ್’ ಆಗಿ? ನಾನು ಯಾವಾಗಲೂ ಗ್ರಾಮೀಣ ಸಾರಿಗೆ ನಾವೀನ್ಯತೆಗಳಿಂದ ಪ್ರಭಾವಿತನಾಗಿದ್ದೇನೆ, ಅಲ್ಲಿ ಅವಶ್ಯಕತೆಯು ಆವಿಷ್ಕಾರದ ತಾಯಿಯಾಗಿದೆ.

Leave A Reply

Your email address will not be published.