ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ. ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿಸಿದರ ಬಗ್ಗೆ ಕಾರಣ ಕೊಟ್ಟ ಅಧ್ಯಕ್ಷ. ಏನಿದು ಕಾರಣ?

381

ಏಕಾಏಕಿ ಏಕದಿನ ಪಂದ್ಯದಿಂದ ಕೊಹ್ಲಿ ಅವರನ್ನ ಕೆಳಗಿಳಿಸಿ ರೋಹಿತ್ ಶರ್ಮ ಅವರನ್ನು ಸೌತ್ ಆಫ್ರಿಕಾ ಸರಣಿಗೆ ನಾಯಕನನ್ನಾಗಿ ಮಾಡಿದ್ದೂ ಎಲ್ಲರಿಗು ಆಶ್ಚರ್ಯ ತಂದಿದೆ. ಅದಲ್ಲದೆ ಟಿ-೨೦ ವಿಶ್ವಕಪ್ ಬಳಿಕ ಟಿ-೨೦ ನಾಯಕತ್ವ ದಿಂದ ಕೆಳಗೆ ಇಳಿಯುತ್ತೇನೆ ಎಂದು ಹೇಳಿದ್ದ ಕೊಹ್ಲಿ ಈಗ ಏಕದಿನದಿಂದಲೂ ನಾಯಕ ಸ್ಥಾನದಿಂದ ಕೆಳಗೆ ಬಂದಿದು ಎಲ್ಲರಲ್ಲೂ ಆಶ್ಚರ್ಯ ಮೂಡಿತ್ತು. ಮಾದ್ಯಮದಲ್ಲಿ ಊಹಾಪೋಹಗಳಿಗೆ BCCI ಅಧ್ಯಕ್ಷ ಕೊನೆಗೂ ಉತ್ತರ ನೀಡಿದ್ದಾರೆ.

ಮೌನ ಮುರಿದ ಗಂಗೂಲಿ ಇದು ನನ್ನೊಬ್ಬನ ನಿರ್ಧಾರವಲ್ಲ ಎಲ್ಲ ಸದಸ್ಯರು ಒಟ್ಟಿಗೆ ಸೇರಿ ತೆಗೆದುಕೊಂಡ ನಿರ್ಧಾರ ನಾವು ವಿರಾಟ್ ಕೊಹ್ಲಿ ಅವರಿಗೆ ೪೮ ಗಂಟೆಗಳ ಸಮಯ ಕೂಡ ನೀಡಿದ್ದೆವು ಏಕದಿನ ನಾಯಕತ್ವದಿಂದ ಹೊರ ಬರುವಂತೆ ಮನವಿ ಮಾಡಿದ್ದೆವು. ಆದರೆ ವಿರಾಟ್ ಕೊಹ್ಲಿ ಇದಕ್ಕೆ ಒಪ್ಪಲಿಲ್ಲ, ಲಿಮಿಟೆಡ್ ಫಾರ್ಮ್ಯಾಟ್ ಆದಂತಹ ಟಿ-೨೦ ಹಾಗು ಏಕದಿನಕ್ಕೆ ಒಬ್ಬನೇ ನಾಯಕ ಇರಬೇಕು ಎನ್ನುವುದು ಆಯ್ಕೆಗಾರರ ಸಹಮತ ವಾಗಿತ್ತು ಅದಕ್ಕಾಗಿ ಕೊಹ್ಲಿ ಕೆಳಗಿಳಿಯುವಂತೆ ಮನವಿ ಮಾಡಲಾಯಿತು ಎಂದು ಗಂಗೂಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಒಂದೇ ಒಂದು ICC ಸರಣಿ ಗೆದ್ದಿಲ್ಲ ಅಲ್ಲದೆ ನಾಯಕನಾಗಿ ಕಳೆದ ಟಿ-೨೦ ವಿಶ್ವಕಪ್ ಕೊನೆಯ ಅವಕಾಶವಾಗಿತ್ತು. ಆದರೆ ಅದನ್ನೂ ಗೆಲ್ಲದೇ ಗ್ರೂಪ್ ಪಂದ್ಯದಲ್ಲಿಯೇ ಭಾರತ ತಂಡ ಹೊರಗೆ ಬಂತು. ಅದಲ್ಲದೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಪಾಕಿಸ್ತಾನದ ಎದುರಿಗೆ ಹೀನಾಯವಾಗಿ ಸೋಲನ್ನು ಅನುಭವಿಸಿತು. ವಿರಾಟ್ ಕೊಹ್ಲಿ ಟೆಸ್ಟ್ ತಂಡವನ್ನು ಮಾತ್ರ ಮುನ್ನಡೆಸುತ್ತಾರೆ ಎಂದು ಆಯ್ಕೆ ಸಮಿತಿ ನಿರ್ಧಾರ ಮಾಡಿದೆ. ಲಿಮಿಟೆಡ್ ಓವರ್ ಮ್ಯಾಚ್ ಅಲ್ಲಿ ರೋಹಿತ್ ಶರ್ಮ ನಾಯಕತ್ವ ವಹಿಸಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

Leave A Reply

Your email address will not be published.