ಕೊನೆಗೂ ಸಿಕ್ತು ಉತ್ತರ: ಕೊಹ್ಲಿ ಶತಕ ಬಾರಿಸಿದ ಬಳಿಕ ಮುತ್ತಿಟ್ಟ ಉಂಗುರಕ್ಕೆ ಇರುವ ವಿಶೇಷತೆ ಏನು ಗೊತ್ತೇ?? ಈ ಉಂಗುರ ಕೊಟ್ಟವರು ಯಾರು ಗೊತ್ತೆ?
ಕಿಂಗ್ ಕೋಹ್ಲಿ ಅವರ 71ನೇ ಶತಕದ ಸುದ್ದಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೋಹ್ಲಿ ಅವರ ಬ್ಯಾಟ್ ಇಂದ ಬಂದ ಸೆಂಚುರಿ ಎಲ್ಲರಿಗೂ ಬಹಳಷ್ಟು ಸಂತೋಷ ತಂದಿತು. ಬರೊಬ್ಬರಿ 1021 ದಿನಗಳ ಬಳಿಕ ಕೋಹ್ಲಿ ಅವರ ಬ್ಯಾಟ್ ಇಂದ ಸೆಂಚುರಿ ಬಂದಿದೆ, 2019ರಿಂದ ಕಳಪೆ ಫಾರ್ಮ್ ನಲ್ಲಿದ್ದ ಕೋಹ್ಲಿ ಅವರು ಸೆಂಚುರಿ ಗಳಿಸಿರಲಿಲ್ಲ, ರನ್ ಗಳಿಸಲು ಕಷ್ಟಪಡುತ್ತಿದ್ದರು, ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಸೋತ ನಂತರ ಟಿ20 ಹಾಗೂ ಒನ್ ಡೇ ಕ್ರಿಕೆಟ್ ಕ್ಯಾಪ್ಟನ್ಸಿ ಇಂದ ಹೊರಬಂದರು. ಬಳಿಕ ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದ ಕೂಡ ಹೊರನಡೆದರು.
ಬಳಿಕ ಕೋಹ್ಲಿ ಅವರು ವೃತ್ತಿಜೀವನದ ಬಹಳ ಕಷ್ಟದ ದಿನಗಳನ್ನು ಅನುಭವಿಸಿದರು. ಅವರ ಕಳಪೆ ಫಾರ್ಮ್ ಇಂದಾಗಿ ಸಾಕಷ್ಟು ಟೀಕೆಗೆ ಒಳಗಾದರು, ಆದರೆ ಕೋಹ್ಲಿ ಅವರು ಸತತ ಪರಿಶ್ರಮದಿಂದ ಈಗ ಫಾರ್ಮ್ ಗೆ ಮರಳಿ ಬಂದಿದ್ದಾರೆ. ಅಫ್ಘಾನಿಸ್ತಾನ್ ತಂಡದ ವಿರುದ್ಧ ಭಾರಿಸಿದ ಸೆಂಚುರಿ ಮೂಲಕ ಕೋಹ್ಲಿ ಅವರು ಫಾರ್ಮ್ ಗೆ ಮರಳಿ ಬಂದಿರುವ ಸಂದೇಶ ನೀಡಿದ್ದು, ಟಿ20 ವಿಶ್ವಕಪ್ ಪಂದ್ಯಗಳು ಶುರು ಆಗುವುದಕ್ಕಿಂತ ಮೊದಲು ಕೋಹ್ಲಿ ಅವರು ಫಾರ್ಮ್ ಗೆ ಬಂದಿರುವುದು ಸಂತೋಷದ ವಿಚಾರ ಆಗಿದೆ. ಇನ್ನು ಕೋಹ್ಲಿ ಅವರು ಅಂದು ಸೆಂಚುರಿ ಭಾರಿಸಿದ ಬಳಿಕ ಬಹಳ ಸಂತೋಷದಿಂದ ತಮ್ಮ ಕೊರಳಿದ್ದ ಉಂಗುರ ತೆಗೆದು ಅದಕ್ಕೆ ಮುತ್ತು ಕೊಟ್ಟರು. ಆ ಉಂಗುರ ಕೊಟ್ಟವರು ಯಾರು? ಉಂಗುರ ಯಾಕೆ ಸ್ಪೆಷಲ್? ಹೀಗೆ ಕೆಲವು ಪ್ರಶ್ನೆಗಳು ಮೂಡಿದ್ದವು, ಅದಕ್ಕೀಗ ಉತ್ತರ ಸಿಕ್ಕಿದೆ.
ಕೋಹ್ಲಿ ಅವರು ಫಾರ್ಮ್ ಕಳೆದುಕೊಂಡು ಟೀಕೆಗೆ ಒಳಗಾದ ಕಷ್ಟದ ಸಮಯದಲ್ಲಿ ಅವರ ಜೊತೆಗಿದ್ದು, ಸಪೋರ್ಟ್ ಮಾಡುತ್ತಿದ್ದರು, ಅದರಿಂದ ವಿರಾಟ್ ಕೋಹ್ಲಿ ಅವರು ತಮ್ಮ ಸೆಂಚುರಿ ಅನ್ನು ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಗೆ ಅರ್ಪಿಸಿದ್ದಾರೆ, ಕೋಹ್ಲಿ ಅವರು ಮುತ್ತು ಕೊಟ್ಟ ಆ ರಿಂಗ್, ಅವರ ಮದುವೆಗೆ ಪತ್ನಿ ಅನುಷ್ಕಾ ಕೊಟ್ಟ ರಿಂಗ್ ಆಗಿದೆ. ಅಫ್ಘಾನಿಸ್ತಾನ್ ಸೆಂಚುರಿ ಕೋಹ್ಲಿ ಅವರ ಪಾಲಿಗು ಬಹಳ ಮುಖ್ಯವಾದ ಸೆಂಚುರಿ ಆಗಿತ್ತು, ಪಂದ್ಯ ಮುಗಿದ ಬಳಿಕ ಇದರ ಬಗ್ಗೆ ಮಾತನಾಡಿದ ಕೋಹ್ಲಿ ಅವರು ಮಗಳಿಗೆ ಹಾಗೂ ಪತ್ನಿಗೆ ಸೆಂಚುರಿ ಅರ್ಪಿಸಿದ್ದಾಗಿ ಹೇಳಿದ್ದಾರೆ.