ಕೋವಿಡ್ 2ನೇ ಅಲೆಯಲ್ಲಿ ತನ್ನ ಗಂಡ ಮತ್ತು ಮಗಳನ್ನು ಕಳೆದುಕೊಂಡ ಈ ಮಹಾತಾಯಿ ಮಾಡಿದ ಕೆಲಸ ಏನೆಂದು ತಿಳಿದರೆ ನೀವು ಮೆಚ್ಚುಗೆ ವ್ಯಕ್ತ ಪಡಿಸುವಿರಿ?

1,227

ಜೀವನವೇ ಹಾಗೆ ನೋಡಿ ಒಂದಿಲ್ಲ ಒಂದು ಪಾಠವನ್ನು ಕಲಿಸುತ್ತಾ ಇರುತ್ತದೆ. ಕೆಲವೊಮ್ಮೆ ಒಳ್ಳೆಯದಾಗುತ್ತದೆ ಅದರಿಂದ ನಾವು ಒಂದು ಪಾಠ ಕಲಿಯುತ್ತೇವೆ. ಹಾಗೆ ಕೆಟ್ಟದು ಆದಾಗಾಲು ಒಂದು ಪಾಠ ಕಲಿಯುತ್ತೇವೆ ಅದು ನಮ್ಮ ಮುಂದಿನ ಜೀವನಕ್ಕೆ ಭದ್ರ ಬುನಾದಿ ಹಾಗೆ ಕಾರ್ಯ ನಿರ್ವಹಿಸುತ್ತದೆ.

ನಾವು ಇಂದು ತಿಳಿಯಲು ಹೊರಟ ಈ ಮಹಾನು ತಾಯಿಯ ಕಥೆ ಕೂಡ ಅಂತಹದು. ಜೀವನದಲ್ಲಿ ಏನಾದರೂ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಾವು ಕಳೆದ ಕೆಟ್ಟ ದಿನಗಳೇ ಕಾರಣ. ಈ ತಾಯಿಯ ಜೀವನದಲ್ಲಿಯೂ ಎಂದಿಗೂ ಮರೆಯಲಾಗದ ಕೆಟ್ಟ ದಿನಗಳು ಕಳೆದು ಹೋಗಿದ್ದವು. ಹೌದು ಕೊರೋನ ಎಂಬ ಪಿಡುಗು ಇಡೀ ವಿಶ್ವವನ್ನೇ ತತ್ತರಿಸಿತ್ತು. ತಾನು ತನ್ನವರು ಎಲ್ಲವನ್ನೂ ಕಳೆದುಕೊಂಡು ಇಂದಿಗೂ ಬದುಕಲು ಹೆಣಗುವವರು ಇದ್ದಾರೆ. ಅಂತಹ ಸ್ಥಿತಿ ತಂದೊದಗಿತ್ತು ಈ ಮಹಾಮಾರಿ.

ತಿಲಹರಿ ಕೃಷ್ಣಾ ದಾಸ ಇವರ ಹೆಸರು. ಜೀವನದಲ್ಲಿ ಎಂದಿಗೂ ಮರೆಯಲಾಗದ ಕಹಿ ನೆನೆನಪನ್ನು ಕೊಟ್ಟಿತ್ತು ಕೋರೋಣ ಇವರಿಗೆ. ತನ್ನ ಆತ್ಮೀಯವಾಗಿ ಜೊತೆಗಿದ್ದ 71 ವರ್ಷದ ತನ್ನ ಗಂಡ ಮತ್ತು 30 ವರ್ಷದ ಮಗಳನ್ನು ಅದು ಪಡೆದುಕೊಂಡಿತ್ತು. ಇದರಿಂದಾಗಿ ತೀವ್ರವಾಗಿ ಮನಸ್ಸು ಕುಂಠಿತ ವಾಗಿತ್ತು. ಆದರೂ ಯಾಕೋ ಕಳೆದು ಹೋದವರ ನೆನಪು ಹಾಗೆ ಇದ್ದರೂ ಅದೇ ನೋವಿನಲ್ಲಿ , ತಮ್ಮ ಪ್ರಾಣ ಉಳಿಸಿಕೊಳ್ಳಲು ಹೆಣಗುತ್ತಿರುವ ಬಡ ಜೀವಿಗಳ ಮೇಲೆ ಇವರ ಮನಸು ಮಿಡಿದಿತ್ತು. ತನಗಾದ ನೋವು ಮತ್ತೊಬ್ಬರಿಗೆ ಆಗಬಾರದು ಎಂಬ ಭಾವನೆಯಿಂದ ಇವರು ಅಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ 16 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್ ಒಂದನ್ನು ದಾನವಾಗಿ ತನ್ನ ಗಂಡ ಮತ್ತು ಮಗಳ ಹೆಸರಿನಲ್ಲಿ ನೀಡಿದರು. ಇದು ಉಚಿತ ಸೇವೆಗಾಗಿ ಮೀಸಲಿಟ್ಟಿದ್ದಾರೆ. ಇದರಿಂದಾಗಿ ಅದೆಷ್ಟೋ ಬಡ ಜನರಿಗೆ ಆದರೆ ಆದಂತೆ ಆಗಿದೆ. ಅದೇನೇ ಆಗಲಿ ತಾವು ಕಂಡ ನೋವು ಮತ್ತೊಬ್ಬರು ಕಾಣಬಾರದು ಎಂಬ ಇವರ ಈ ಆಲೋಚನೆ ಅವರನ್ನು ಸುಖವಾಗಿ ಇಟ್ಟಿರಲಿ ಎನ್ನುತ್ತಾರೆ ಜನರು.

Leave A Reply

Your email address will not be published.