ಕ್ರಿಕೆಟರ್ ಗಳು ಆಡುವ ಸಮಯದಲ್ಲಿ ತುಟಿ ಹಾಗು ಕೆನ್ನೆಗಳ ಮೇಲೆ ಬಿಳಿ ಬಣ್ಣ ಯಾಕೆ ಹಚ್ಚುತ್ತಾರೆ? ಇದು ಜಾಸ್ತಿ ಹಚ್ಚಲು ಕಾರಣವೇನು?
ಕ್ರಿಕೆಟ್ ಪಂದ್ಯಗಳಲ್ಲಿ ನೀವು ಅನೇಕ ಬಾರಿ ನೋಡಿರುತ್ತೀರಾ, ಆಟಗಾರರು ಮುಖದಲ್ಲಿ ಬಿಳಿ ಬಣ್ಣದ ಕ್ರೀಮ್ ಹಚ್ಚಿರುತ್ತಾರೆ. ಈ ಮುಖಕ್ಕೆ ಹಚ್ಚುವ ಕ್ರೀಮ್ ಯಾವುದು ಹಾಗು ಇದನ್ನು ಮುಖಕ್ಕೆ ಯಾಕೆ ಹಚ್ಚುತ್ತಾರೆ ಎನ್ನುವ ಕಾರಣ ನಿಮಗೆ ತಿಳಿದಿದೆಯಾ? ಇಲ್ಲವಾದರೆ ನಾವಿಂದು ಇದರ ಹಿಂದಿನ ಕಾರಣ ನಿಮಗೆ ತಿಳಿಸುತ್ತೇವೆ. ಪೂರ್ತಿ ಓದಿ.
ಈ ಬಿಳಿ ಬಣ್ಣದ ಕ್ರೀಮ್ ಮುಖದ ಮೇಲೆ ಹಚ್ಚುವುದನ್ನು ನೀವು ನೋಡುತ್ತೀರಲ್ಲ, ಅದನ್ನು ಜಿಂಕ್ ಆಕ್ಸೈಡ್ ಎನ್ನುತ್ತಾರೆ. ಇದನ್ನು ಫಿಸಿಕಲ್ ಸನ್ ಸ್ಕ್ರೀನ್ ಅಂತಲೂ ಕರೆಯುತ್ತಾರೆ. ಮುಖದ ಮೇಲೆ ಈ ಕ್ರೀಮ್ ರೆಫ್ಲೆಕ್ಟರ್ ಕೆಲಸ ಮಾಡುತ್ತದೆ. ಬಿಸಿಲಿನಿಂದ ಕಾಪಾಡಲು ಈ ಕ್ರೀಮ್ ಅನ್ನು ಬಳಸುತ್ತಾರೆ ಆಟಗಾರರು. ಇದು ಸೂರ್ಯನ ಕಿರಣಗಳು ಮುಖದ ಸ್ಕಿನ್ ಮೇಲೆ ಬೀಳುವುದರಿಂದ ಕಾಪಾಡಲು ಬಳಸುತ್ತಾರೆ. ಸೂರ್ಯನ ಯುವಿಎ ಹಾಗು ಯುವಿಬಿ ಕಿರಣಗಳಿಂದ ಕಾಪಾಡುತ್ತದೆ.
ಮುಖದ ಚರ್ಮದ ಮೇಲೆ ಈ ಕ್ರೀಮ್ ಪ್ರೊಟೆಕ್ಟಿವ್ ಲೇಯರ್ ತರಹ ಕೆಲಸ ಮಾಡುತ್ತದೆ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಚರ್ಮಕ್ಕೆ ಬೀಳುವುದಿಲ್ಲ. ಇದು ಸಾಮಾನ್ಯವಾಗಿ ಸಿಗುವ ಸನ್ ಕ್ರೀಮ್ ಇಂದ ಬೇರೆ ಆಗಿರುತ್ತದೆ. ಸಾಮಾನ್ಯವಾಗಿ ಸಿಗುವ ಕ್ರೀಮ್ ಗಳು ಕೆಮಿಕಲ್ ಮಿಕ್ಸೆಡ್ ಆಗಿರುತ್ತದೆ. ಅವುಗಳನ್ನು ನಮ್ಮ ತ್ವಚೆ ಅಬ್ಸರ್ಬ್ ಮಾಡಿಕೊಳ್ಳುತ್ತದೆ. ಈ ಆಟಗಾರರು ಬಳಸುವ ಕ್ರೀಮ್ ಜಿಂಕ್ ಅಕ್ಸಾಯ್ಡ್ ಆಗಿರುವ ಕಾರಣ ರೆಫ್ಲೆಕ್ಟಿವ್ ಫಿಸಿಕಲ್ ಕ್ರೀಮ್ ಬಳಸುತ್ತಾರೆ.