“ಗಾಡ್ ಫಾದರ್” ಬಗ್ಗೆ ನೀವು ಕೇಳಿದ್ದೀರ ಆದರೆ “DOG ಫಾದರ್” ಬಗ್ಗೆ ಕೇಳಿದ್ದೀರ? ಯಾರಿವರು ಇವರು ಮಾಡಿದ ಸಾಧನೆ ಏನು?
ಜೀವನದಲ್ಲಿ ದೇವರು ಎಲ್ಲವನ್ನೂ ಎಲ್ಲರಿಗೂ ಕರುಣಿಸುವುದಿಲ್ಲ , ಯಾಕೆಂದರೆ ಈ ಜಗತ್ತಿನ ಸಮತೋಲನ ಕಾಯಲು. ಎಲ್ಲವನ್ನೂ ಎಲ್ಲರಿಗೂ ಕೊಟ್ಟರೆ ಸಮಸ್ಯೆ ಎಂಬುವುದು ಯಾರಿಗೂ ಇರುವುದಿಲ್ಲ. ಹಾಗಾಗಿ ಮನುಷ್ಯತ್ವ ಎಂಬ ವಿಚಾರ ಈಗಲೂ ಜೀವಂತವಾಗಿದೆ. ನಾವು ಇಂದು ತಿಳಿಯಲು ಹೊರಟ ಈ ವ್ಯಕ್ತಿ ಕೂಡ ಅಂತಹವರು, ಇವರ ಮನಸ್ಸು ಕೂಡ ಮಿಡಿದಿದೆ ಆದರೆ ಮತ್ತೊಬ್ಬ ವ್ಯಕ್ತಿಗಾಗಿ ಅಲ್ಲ ಬದಲಾಗಿ ಯಾರಿಗೂ ತನ್ನ ವೇದನೆಯನ್ನು ಹೇಳಿಕೊಳ್ಳಾಲಗದ ಮೂಖ ಪ್ರಾಣಿಗಳ ಮೇಲೆ.
ಇವರ ಹೆಸರು ರಾಕೇಶ್, ವೃತ್ತಿಯಲ್ಲಿ ಬ್ಯುಸಿನೆಸ್ ಮ್ಯನ್ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ ಹಾಗೆಯೇ ಕೊಟ್ಟದ್ದನ್ನು ಸದುಪಯೋಗ ಮಾಡಲು ಒಳ್ಳೆಯ ಮನಸ್ಸು ಕೂಡ ಕೊಟ್ಟಿದ್ದಾನೆ. ಒಂದೊಮ್ಮೆ ಇವರು ತಮ್ಮ ನಾಯಿಯ ಜೊತೆಗೆ ವಾಕ್ ಹೋಗಿದ್ದಾಗ ಅಲ್ಲಿ ಬೀದಿ ನಾಯಿ ಒಂದು ಮಳೆಯಲ್ಲಿ ಒದ್ದೆಯಾಗಿ ಆಶ್ರಯ ಪಡೆಯಲು ಹೆಣಗುತ್ತಿತ್ತು. ಒಂದೆಡೆ ಎಲ್ಲಾ ರೀತಿಯ ಸೌಲಭ್ಯ ಇರುವ ಜನರು ಒಂದೆಡೆ ಬಾಯಿ ಬಾರದ ಈ ಮೂಖ ಪ್ರಾಣಿಗಳು. ಅವರು ಅಂದೆ ತಾವು ಸಂಪಾದಿಸಿದ ಹಣ ಆಸ್ತಿಯನ್ನು ದಾರೆ ಎರೆದು ಒಂದು ಫಾರ್ಮ್ ಹೌಸ್ ನಿರ್ಮಾಣ ಮಾಡುತ್ತಾರೆ. ಇದರಲ್ಲಿ ಬೀದಿ ನಾಯಿಗಳು, ಇತರರು ತಂದು ಬಿಟ್ಟು ಹೋದ ನಾಯಿಗಳು, ಅನಾರೋಗ್ಯದಿಂದ ಬಳುತ್ತಿದ್ದ ನಾಯಿಗಳನ್ನು ತಂದು ಸಾಕಲು ಶುರು ಮಾಡಿದರು. ನಾಯಿ ಜೊತೆಗೆ ದಾನ ಕುದುರೆ ಕೂಡ ಇದೆ.
ಇವರು ಇವುಗಳ ಪಾಲನೆಗಾಗಿ ಖರ್ಚು ಮಾಡಿದ್ದು ಒಂದೆರಡು ರೂಪಾಯಿ ಅಲ್ಲ ಬದಲಾಗಿ ಲಕ್ಷಾಂತರ ರೂಪಾಯಿ. ತನ್ನಲ್ಲಿದ್ದ 20 ವಾಹನ ಮತ್ತು ಮೂರು ಮನೆಯನ್ನು ಮಾರಿ ಇವುಗಳ ಸಾಕಣೆಗೆ ಹಣ ಹೊಂದಿಸಿದ್ದರು. ಇದುವರೆಗೂ 800 ಕ್ಕು ಹೆಚ್ಚು ಪ್ರಾಣಿಗಳನ್ನು ಸಾಕಿ ಸಲಹಿದ್ದಾರೆ ಇವರು. ಇನ್ನು ಮುಂದಕ್ಕೂ ಇದನ್ನು ಮುಂದುವರೆಸುತ್ತೆನೆ ಎನ್ನುತ್ತಾರೆ ರಾಕೇಶ್. ಅವರ ಒಳ್ಳೆಯ ಮನಸ್ಸಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂದು ಹಾರೈಸೋಣ.