ಗುಜರಾತಿನ ಈ ವಜ್ರ ವ್ಯಾಪಾರಿ ಮಾಡಿದ ಈ ಕೆಲಸದ ಬಗ್ಗೆ ತಿಳಿದರೆ ನಿಮ್ಮ ಕಣ್ಣುಗಳಲ್ಲಿ ಕೂಡ ನೀರು ಬರುತ್ತದೆ. ಏನು ಇವರು ಮಾಡಿದ ಆ ಕೆಲಸ?

689

ಮನುಷ್ಯ ಜೀವನ ಎಂಬುದು ಏಳು ಜನ್ಮದ ಪುಣ್ಯದ ಫಲ ಎಂದು ನಮ್ಮ ಹಿರಿಯರು ಹೇಳಿದ ಮಾತು. ಅದು ಎಷ್ಟರ ಮಟ್ಟಿಗೆ ಸತ್ಯ ಎಷ್ಟರ ಮಟ್ಟಿಗೆ ಸುಳ್ಳು ಎಂದು ಬಲ್ಲವರು ನಾವಲ್ಲ ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನ ಸಾರ್ಥಕತೆ ಕಾಣಬೇಕು ಆಗಲೇ ನಾವು ಮನುಷ್ಯರಾಗಿ ಹುಟ್ಟಿದ್ದಕ್ಕೆ ಬೆಲೆ. ಇಲ್ಲವಾದರೆ ಜೀವನವೇ ವ್ಯರ್ಥ, ಹುಟ್ಟಿದ ಜೀವ ಎಲ್ಲರಿಂದಲೂ ಸಹಕಾರ ಪಡೆದು ದೊಡ್ಡದಾಗಿ ಯಾರಿಗೂ ಪ್ರಯೋಜನ ಆಗದೆ ಭೂಮಿಗೆ ಭಾರ ಆದರೆ ಅಂತಹ ಜೀವನವೇ ವ್ಯರ್ಥ. ಆದರೆ ಅಂತಹ ಜನರ ಮಧ್ಯೆ ಇಲ್ಲೊಬ್ಬರು ಭಿನ್ನ . ಹೌದು ಬನ್ನಿ ತಿಳಿಯೋಣ ಇವರು ಮಾಡಿರುವ ಆ ಕೆಲಸ ಏನೆಂದು.

ಮತ್ತೊಬ್ಬರ ದುಃಖ ಕಷ್ಟ ಕಂಡು ನಮ್ಮ ಮನ ಮಿಡಿಯುವುದು ಸಹಜ, ಆದರೆ ಅದಕ್ಕೆ ನಾವು ಕೈ ಎ-ತ್ತಿ ಸಹಕಾರ ಮಾಡಿ ಅವರಿಗೆ ಭುಜಬ-ಲವಾಗಿ ನಿಂತರೆ ಅದುವೇ ಸಾರ್ಥಕತೆ. ಇವರು ಗುಜರಾತಿನ ವಜ್ರದ ವ್ಯಾಪಾರಿ ಹೆಸರು ಮಹೇಶ್ ಭಾಯಿ ಸವಾಣಿ. ಉತ್ತಮ ಆದಾಯ ಹೊಂದಿದ ಇವರು ಇಲ್ಲಿ ಬಡ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಹೌದು ಅನಾಥ ಹೆಣ್ಣು ಮಕ್ಕಳು, ಬಡತನದಲ್ಲಿರುವ ಹೆಣ್ಣು ಮಕ್ಕಳು, ಭಿಕ್ಷೆ ಎತ್ತಿ ಜೀವನ ನಡೆಸುವ ಹೆಣ್ಣುಮಕ್ಕಳಿಗೆ ಇವರು ತಂದೆಯ ಸಮಾನ ಎಂದರೂ ತಪ್ಪಾಲಿಕ್ಕಿಲ್ಲ. ಇವರು ಇಂತಹ ಹೆಣ್ಣು ಮಕ್ಕಳ ಮದುವೆ ಮಾಡಿಸುತ್ತಾ ಇದ್ದಾರೆ. ಬರೋಬ್ಬರಿ 9 ವರ್ಷಗಳಿಂದ ಈ ಪುಣ್ಯದ ಕೆಲಸ ಮಾಡುತ್ತಿದ್ದು ಇದುವರೆಗೂ 3000 ಕ್ಕಿಂತ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿದ್ದಾರೆ. ಎಲ್ಲವೂ ತಮ್ಮದೇ ಸ್ವಂತ ಖರ್ಚಿನಲ್ಲಿ ಮಾಡುವ ಇವರು ಏನು ಅಪೇಕ್ಷೆ ಪಡುವುದಿಲ್ಲ.

ಮದುವೆ ಅಷ್ಟೇ ಅಲ್ಲದೆ ಅವರ ಮುಂದಿನ ಜೀವನ , ಮಕ್ಕಳ ವಿಧ್ಯಾಭ್ಯಾಸ ಎಲ್ಲದಕ್ಕೂ ಸಹಾಯ ಮಾಡುತ್ತಿದ್ದಾರೆ. ಕೇವಲ ಧರ್ಮ ಆಧಾರದಲ್ಲಿ ಈ ಕೆಲಸ ಮಾಡುತ್ತಿಲ್ಲಎನ್ನದೆ ಇವರು ಈ ಕೆಲಸ ಮಾಡುತ್ತಿದ್ದಾರೆ. ಅದೇನೇ ಆಗಲಿ ಇಂತಹ ಒಳ್ಳೆಯ ಮನಸ್ಸು ದೇವರು ಎಲ್ಲರಿಗೂ ಕೊಡುವುದಿಲ್ಲ. ಇದ್ದವರು ಮತ್ತೆ ಮತ್ತೆ ಸಂಪತ್ತು ಮಾಡಬೇಕು ಎಂದು ಯೋಚಿಸುವ ಈ ಕಾಲದಲ್ಲಿ ಇವರು ತುಂಬಾ ವಿಭಿನ್ನ. ಇವರ ಕೆಲಸ ಹೀಗೆ ಮುಂದು ವರೆಯಲಿ. ಅದೆಷ್ಟೋ ಬಡ ಕುಟುಂಬಗಳಿಗೆ ಇವರು ಆಶಾಕಿರಣ ಆಗಲಿ ಎಂದು ಹಾರೈಸುವ.

Leave A Reply

Your email address will not be published.