ಗೂಗಲ್ ಮ್ಯಾಪ್ ಇಂದ ಅನೇಕರು ಬಂಪರ್ ಹಣ ಗಳಿಸುತ್ತಿದ್ದಾರೆ. ನೀವು ಮಾಡಬೇಕೆಂದಿದ್ದರೆ ಇದನ್ನ ಓದಿ?

668

ಇಂದು ನಾವು ಡಿಜಿಟಲ್ ಯುಗದಲ್ಲಿ ಇದ್ದೇವೆ ಇದರ ಮೂಲಕ ಪ್ರಪಂಚದ ಮೂಲೆಯಲ್ಲಿ ಇರುವ ಏನನ್ನು ಬೇಕಾದರೂ ಮನೆಯಲ್ಲಿ ಕುಳಿತೆ ಪಡೆದುಕೊಳ್ಳಬಹುದು. ಅಷ್ಟು ಪ್ರಪಂಚ ಇಂದು ಮುಂದುವರೆದಿದೆ. ಇಂದು ನಾವು ನಿಖರವಾದ ವಿಳಾಸವನ್ನು ತಿಳಿದುಕೊಳ್ಳಲು ಗೂಗಲ್ ಮ್ಯಾಪ್ ಅನ್ನು ಬಳಸುತ್ತೇವೆ. ಜನರು ಸಾಮಾನ್ಯವಾಗಿ ವಿಳಾಸ ಹುಡುಕಲು ಗೂಗಲ್ ಮ್ಯಾಪ್ ಗೆ ಲಿಂಕ್ ಹಾಕಿ ಅಥವಾ ಅಡ್ರೆಸ್ ಹಾಕಿ ಹೇಗೆ ಹೋಗಬೇಕು ಎನ್ನುವ ವಿಧಾನ ಪಡೆದುಕೊಳ್ಳುತ್ತಾರೆ. ಇದು ಕೇವಲ ವಿಳಾಸ ಕಂಡುಹುಡುಕಲು ಮಾತ್ರ ಉಪಯೋಗಿ ಅಂತ ನೀವು ತಿಳಿದುಕೊಂಡಿದ್ದರೆ ಈ ಮಾಹಿತಿ ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

ನಿಜವಾಗಿ ಹೇಳಬೇಕೆಂದರೆ ಜನರು ಇಂದು ಗೂಗಲ್ ಮ್ಯಾಪ್ ಮೂಲಕ ವಿಳಾಸ ಅಥವಾ ದಾರಿ ಹುಡುಕುವುದು ಮಾತ್ರ ಅಲ್ಲದೆ ದೊಡ್ಡ ಮಟ್ಟದಲ್ಲಿ ಹಣ ಕೂಡ ಗಳಿಸುತ್ತಿದ್ದಾರೆ. ಇದು ಹಣ ಮಾಡಲು ದೊಡ್ಡ ವೇದಿಕೆ ಎಂದರೆ ಕೂಡ ತಪ್ಪಾಗಲಾರದು. ಇದರಿಂದ ಹೇಗೆ ಹಣ ಗಳಿಸಬಹುದು ಎಂದು ಮಾಹಿತಿ ನಾನು ಇಂದು ನೀಡುತ್ತಿದ್ದೇನೆ, ಇದರಿಂದ ನೀವು ಇಂದು ಮ್ಯಾಪ್ ಮಾತ್ರ ಅಲ್ಲದೆ ನಿಮ್ಮ ಜೇಬು ಕೂಡ ತುಂಬಿಸಿಕೊಳ್ಳಬಹುದು.

ಮಾಧ್ಯಮ ವರದಿಗಳ ಪ್ರಕಾರ ನೀವು ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದರೆ ನೀವು ಮೊದಲಿಗೆ ಗೂಗಲ್ ಅಲ್ಲಿ ಲಿಸ್ಟ್ ಆದಂತಹ ಬಿಸಿನೆಸ್ ಹಾಗು ಆ ಬಿಸಿನೆಸ್ ಗೂಗಲ್ varify ಮಾಡಿಲ್ಲದನ್ನು ಹುಡುಕಬೇಕಾಗುತ್ತದೆ . ಗೂಗಲ್ ನ ವೆರಿಫಿಕೇಷನ್ ನಿಯಮಗಳ ಪ್ರಕಾರ ಪರಿಶೀಲಿಸಲ್ಪಡದ ಉದ್ಯಮಗಳು ಕೆಲವೇ ದಿನಗಳಲ್ಲಿ ಗೂಗಲ್ ಇಂದ ತೆಗೆಯಲ್ಪಡುತ್ತದೆ. ಆದ್ದರಿಂದ ನೀವು ಅಂತಹ ಬಿಸಿನೆಸ್ ಓನರ್ ಗೆ ಒಂದು ಮೇಲ್ ಕಳುಹಿಸಿ ಅವರ ಬಿಸಿನೆಸ್ ಗೂಗಲ್ ವೆರಿಫಿಕೇಷನ್ ಗೆ ಸಹಕಾರ ಮಾಡಿಕೊಡುತ್ತೇನೆ ಎಂದು ಹೇಳಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಿಮಗೆ ಉದ್ಯಮ ದವರು ಸ್ವಲ್ಪ ಮೊತ್ತವನ್ನು ಕೂಡ ನೀಡುತ್ತಾರೆ. ಇಂದು ಅನೇಕ ಯುವಕರು ಈ ರೀತಿ ಮಾಡಿ ೧೫೦೦ ದಿಂದ ೩೫೦೦ ರೂಪಾಯಿಗಳವರೆಗೆ ಸಂಪಾದಿಸುತ್ತಿದ್ದಾರೆ.

Leave A Reply

Your email address will not be published.