ಚಿನ್ನದ ರೂಪದಲ್ಲಿ ಹೊಳೆಯುವ ಈ ಪರ್ವತದ ಮೇಲೆ ದೇವರಿದ್ದಾರೆ ? ಯಾರು ಇದುವರೆಗೆ ಇಲ್ಲಿಗೆ ಹೋಗಲು ಆಗಲಿಲ್ಲ ಯಾವುದು ಈ ಪರ್ವತ ?
ಭಾರತ ದೇಶ ಎಂದರೆ ಹಾಗೆ ನೋಡಿ ಯಾವ ದೇಶದಲ್ಲೂ ಕಾಣದ ಅದೆಷ್ಟೋ ಗೌಪ್ಯತೆ ಇಲ್ಲಿದೆ. ಅದರ ಬೆನ್ನು ಹತ್ತಿ ಹೋದ ಜನರು ಅದೆಷ್ಟೋ ಆದರೆ ಉತ್ತರ ಮಾತ್ರ ಹುಡುಕಲು ಯಾರಿಂದಲೂ ಆಗಲಿಲ್ಲ. ಬದಲಾಗಿ ಅವರನ್ನೇ ಹುಡುಕುವ ಪರಿಸ್ಥಿತಿ ಬಂದಿತ್ತು. ಹೌದು ನಂಬಿಕೆ ಎಂಬ ವಿಚಾರ ಹಾಗೆ ಅದನ್ನು ನಂಬಿದವರಿಗೆ ಅಂದು ಎಂದು ಬಿಟ್ಟು ಕೊಡುವುದಿಲ್ಲ. ನಮ್ಮ ಆದ್ಯಾತ್ಮ ಗ್ರಂಥಗಳಲ್ಲಿ ಹೇಳಿದ ಹಾಗೆ ಧರ್ಮವನ್ನು ನೀನು ರಕ್ಷಣೆ ಮಾಡಿದರೆ ಧರ್ಮವು ನಿನ್ನನ್ನು ಕಾಯುತ್ತದೆ ಎಂದು. ಇದೀಗ ನಾವು ಹೇಳಲು ಹೋರಾಟ ವಿಷಯ ಅಂತಹುದೇ ಗೌಪ್ಯತೆ ಇರುವ ವಿಷಯ. ಬನ್ನಿ ಯಾವುದು ಆ ಜಾಗ ತಿಳಿಯೋಣ.
ಭಾರತ ದೇಶದ ಕಿರೀಟ ಎಂದೇ ಕರೆಯಲ್ಪಡುವ ಹಿಮಾಲಯ ದ ಶ್ರೇಣಿಗಳು . ಎಲ್ಲರಿಗೂ ಇದರ ಬಗ್ಗೆ ಗೊತ್ತೇ ಇದೆ ಆ ಶ್ರೇಣಿಯಲ್ಲಿರುವ ಒಂದು ಪರ್ವತವೇ ಕೈಲಾಸ ಪರ್ವತ. ಹೌದು ಇದನ್ನು ಶಿವನ ವಾಸ ಸ್ಥಾನ ಎಂದು ಹೇಳಲಾಗುತ್ತದೆ. ಕೈಲಾಸ ಪರ್ವತದ ತುದಿ ಭಾಗ ಮೋಡಗಳಿಂದ ಆವೃತವಾಗಿದ್ದು , ಮೋಡಗಳ ನಡುವೆ ದೇವತೆಗಳು ವಾಸವಾಗಿದ್ದಾರೆ ಎಂದು ನಂಬಲಾಗಿದೆ. ಚಳಿಗಾಲದ ಸಮಯದಲ್ಲಿ ಎಲ್ಲಾ ಶ್ರೇಣಿಗಳ ಹಿಮಾಗಳು ಕರಗುತ್ತದೆ ಆದರೆ ಕೈಲಾಸ ಪರ್ವತದ ಮೇಲಿನ ಹಿಮಗಳು ಕರಗುವುದಿಲ್ಲ.
ಮತ್ತು ಯಾರಿಗೂ ಕೂಡ ಅದರ ತುತ್ತ ತುದಿಗೆ ಹತ್ತಲು ಅವಕಾಶ ಇಲ್ಲ. ಹಾಗೆ ತಮ್ಮ ಎಲ್ಲೆಗಳ ಮೀರಿ ನಡೆದರೂ ಅವರು ಅಂದು ಯಶಸ್ಸು ಕಂಡಿಲ್ಲ ಎಂದು ಹಿರಿಯರು ಹೇಳುತ್ತಾರೆ. ಚಳಿಗಾಲದಲ್ಲಿ ಬಿಸಿಲಿನ ಝಳಕ್ಕೆ ಶ್ರೇಣಿಯು ಬಂಗಾರದ ಬಣ್ಣದಲ್ಲಿ ಹೊಳೆಯುತ್ತದೆ ಅದಕ್ಕೆ ಏನು ಕಾರಣ ಎಂದು ಯಾರಿಗೂ ಗೊತ್ತಿಲ್ಲ. ಕೆಲವೊಂದು ನಿಗೂಢ ವಿಚಾರಗಳು ನಿಗೂಢ ಆಗಿಯೇ ಇರುವುದು ಒಳಿತು. ಅದರ ಬೆನ್ನಟ್ಟಿ ಹೋಗುವುದು ಔಚಿತ್ಯ ಅಲ್ಲ. ಅದು ಏನೇ ಇರಲಿ ನಂಬಿಕೆಗಳ ಮೇಲೆ ನಿಂತ ಈ ಜಗತ್ತು ಅಪನಂಬಿಕೆಗಳಿಗೆ ಬಲಿಯಾಗದಿರಲಿ.