ಚೈನಾಗೆ ಸೆಡ್ಡು ಹೊಡೆದು ನಿಂತ KGF ಚಾಪ್ಟರ್ 2 ಚಿತ್ರ? ಅಷ್ಟಕ್ಕೆ ಚೈನಾ ಮುಟ್ಟಿ ನೋಡಿಕೊಳ್ಳುವಂತ ನಡೆದ ಘಟನೆ ಏನು?

585

KGF ಚಾಪ್ಟರ್ 2 ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶ ಅಲ್ಲದೇ ವಿದೇಶಗಳಲ್ಲಿ ಕೂಡ ಈ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ ಜನರು. ಇಡೀ ಭಾರತದಲ್ಲೇ ಅತ್ಯಂತ ನಿರೀಕ್ಷಿತ ಸಿನೆಮಾ ಲಿಸ್ಟ್ ನಲ್ಲಿ ಮೊದಲ ಸ್ಥಾನ ಗಳಿಸಿರುವ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಗ್ಯಾರಂಟಿ. ಯಶ್ ಅವರು ಪಾನ್ ಇಂಡಿಯಾ ನಟನಾಗಿ ಮಿಂಚುತ್ತಿದ್ದಾರೆ. ಹೀಗೆ ಇರುವಾಗ ಈಗ ಮತ್ತೊಂದು ಸುದ್ದಿ ಬರುತ್ತಿದ್ದು ಚೀನಾ ತಬ್ಬಿಬ್ಬು ಆಗುವಂತೆ ಮಾಡಿದೆ kgf ಚಾಪ್ಟರ್ 2 ಚಿತ್ರ ಹಾಗಾದರೆ ನಡೆದ ಘಟನೆ ಏನು? ಬನ್ನಿ ತಿಳಿಯೋಣ.

ಮೋಸೈಕ್ ಪೊಟ್ರಟ್ ಎಂಬ ಕಲಾ ವಿಧಾನ ಇದೆ. ಇದರಲ್ಲಿ ಬಣ್ಣ ಬಣ್ಣದ ಪುಸ್ತಕಗಳನ್ನು ಬಳಸಿಕೊಂಡು ಕಲಾಕೃತಿಯ ರಚನೆ ಮಾಡಲಾಗುತ್ತದೆ. ಈ ಕಲೆಯಲ್ಲಿ ಚೈನಾ ಎತ್ತಿದ ಕೈ ಇವರಿಗೆ ಚೈನಾ ಹೆಸರಲ್ಲಿ ಅತೀ ದೊಡ್ಡ ಮೊಸಾಯಿಕ್ ಆರ್ಟ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇತ್ತು. ಆದರೆ ಇದೀಗ ನಮ್ಮ ಕರ್ನಾಟಕದ ಪಡ್ಡೆ ಹುಡುಗರು ಚೈನಾವನ್ನು ಮಕಾಡೆ ಮಲಗಿಸಿದ್ದಾರೆ. ಹೌದು KGF ಚಾಪ್ಟರ್ 2 ಹವಾ ಇರೋವಾಗಲೆ ನಮ್ಮ ಕರ್ನಾಟಕದ ಮಾಲೂರಿನಲ್ಲಿ ಯಶ್ ಅವರ ಕಲಾಕೃತಿ ಮಾಡಲಾಗಿದೆ.

21600 ಚದರ ಅಡಿ ಜಾಗದಲ್ಲಿ 20000ಕ್ಕಿಂತಲೂ ಹೆಚ್ಚು ಬಗೆ ಬಗೆಯ ಪುಸ್ತಕಗಳನ್ನು ಬಳಸಿ ಈ ಕಲಾಕೃತಿ ನಿರ್ಮಿಸಲಾಗಿದೆ. ಈ ಹಿಂದೆ ಚೈನಾ ಪಾಲಿಗೆ ಇದ್ದ 20,000 ಚದರ ಮೀಟರ್ ಕಲಾಕೃತಿಯ ದಾಖಲೆ ಮುರಿದು ಬಿಟ್ಟಿದೆ ಈ ತಂಡ. ಹಲವಾರು ದಿನಗಳ ಪರಿಶ್ರಮದಿಂದ ಮೂಡಿಬಂದ ಈ ಕಲಾಕೃತಿ ಮೂರು ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಚಿತ್ರ ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸೋಣ.

Leave A Reply

Your email address will not be published.