ಟಾಟಾ ಕಂಪನಿ ಇಲ್ಲಿವರೆಗೂ ಬೈಕ್ ಯಾಕೆ ತಯಾರಿಸಿಲ್ಲ ಗೊತ್ತೇ? ಬೈಕ್ ಬದಲು ಅದೇ ಬೆಲೆಗೆ ಕಾರ್ ಅನ್ನು ಜನರಿಗೆ ತಯಾರು ಮಾಡಿದ್ದಾರೆ.

1,983

ರತನ್ ಟಾಟಾ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತಮ್ಮ ಆದಾಯದ 60% ಹಣವನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸಿ ಇಡೀ ದೇಶದಲ್ಲಿ ಹೆಸರುವಾಸಿ ಆಗಿದ್ದಾರೆ. ಟಾಟಾ ಸಂಸ್ಥೆ ನಿರ್ಮಿಸಿದ್ದ ಟಾಟಾ ನ್ಯಾನೋ ಕಾರುಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಕೈಗೆಟಕುವ ದರದಲ್ಲಿ ಕಾರೊಂದನ್ನು ಪರಿಚಯ ಮಾಡಿದ ಕೀರ್ತಿ ಅವರ ಟಾಟಾ ಸಂಸ್ಥೆಗೆ ಸಲ್ಲುತ್ತದೆ. ಬರೀ ಒಂದು ಲಕ್ಷ ರೂಪಾಯಿ ದರದಲ್ಲಿ ಮಾರುಕಟ್ಟೆಗೆ ಬಿಟ್ಟ ಈ ಕಾರು ಹಾಟ್ ಕೇಕ್ ತರ ಮಾರುಕಟ್ಟೆಯಲ್ಲಿ ಬಿಕರಿಯಾಗಿತ್ತು. ಆದರೆ ಈ ಒಂದು ನ್ಯಾನೋ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಹಿಂದೆ ರತನ್ ಟಾಟಾ ಅವರ ಒಂದು ಸಣ್ಣ ನೋವಿನ ಅನುಭವ ಇದೆ.

ಹೌದು ರತನ್ ಟಾಟಾ ಅವರ ಮನಸ್ಸು ಹಾಗೆ ನೋಡಿ ಏನೋ ಒಂದು ಕಷ್ಟ ಎಂದು ಕಂಡಾಗ ಅವರ ಮನಸ್ಸು ಮಿಡಿಯುತ್ತದೆ. ಹಾಗೆ ಒಂದು ದಿನ ಅವರು ತಮ್ಮ ಕಾರಿನಲ್ಲಿ ಕಚೇರಿಗೆ ಹೋಗುತ್ತಾ ಇದ್ದಾಗ ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಕಾರನ್ನು ನಿಲ್ಲಿಸಿದ್ದರು. ಅದೇ ಸಮಯಕ್ಕೆ ಒಂದು ಬೈಕ್ ನಲ್ಲಿ ತಂದೆಯೊಬ್ಬರು ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕುಳ್ಳಿರಿಸಿ ಹೋಗುತ್ತಿದ್ದುದು ಕಂಡಿತು. ಈ ದೃಶ್ಯ ಕಂಡು ರತನ್ ಟಾಟಾ ಅವರಿಗೆ ತುಂಬಾ ಬೇಸರ ಆಗಿತ್ತು. 4 ಜನರ ಈ ಸಣ್ಣ ಕುಟುಂಬ ಆ ಬೈಕ್ ನಲ್ಲಿ ಎಷ್ಟು ಕಷ್ಟ ಪಟ್ಟು ಹೋಗುತ್ತಿದ್ದಾರೆ.

pc financial express
pc- financial express

ಅದೂ ಕೂಡ ನಿಯಮಗಳನ್ನು ಉಲ್ಲಂಘಿಸಿ. ಅದಕ್ಕೋಸ್ಕರ ಅವರ ಮನಸಿನಲ್ಲಿ ಯೋಚನೆ ಒಂದು ಮೂಡಿತು, ಬೈಕ್ ಖರೀದಿಸುವ ದರದಲ್ಲಿ ಯಾಕೆ ನಾನೊಂದು ಕಾರನ್ನು ತಯಾರಿಸಬಾರದು? ಹೌದು ಈ ಒಂದು ಘಟನೆಯೇ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ ಬರಲು ಪ್ರೇರೇಪಣೆ ನೀಡಿತ್ತು. ಸಣ್ಣ ಬಡ ಕುಟುಂಬಗಳ ಕಾರಿನಲ್ಲಿ ಸಂಚರಿಸುವ ಕನಸು ನನಸಾಗಲಿ ಎಂಬ ಆಶಯದಿಂದ ಮಾರುಕಟ್ಟೆಗೆ ಬಂದಿದ್ದೆ ಈ ನ್ಯಾನೋ ಕಾರುಗಳು.
ಇಂದು ಅದು ಮಾರುಕಟ್ಟೆಯಲ್ಲಿ ಇಲ್ಲವಾದರೂ ಇದ್ದಷ್ಟು ವರ್ಷ ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. ಅದೆಷ್ಟೋ ಕುಟುಂಬಗಳ ಆಸೆಯನ್ನು ಈಡೇರಿಸಿತ್ತು.

Leave A Reply

Your email address will not be published.