ಟಾಪ್ ನಟಿಯಾಗಿರುವ ಕವಿತಾ ಗೌಡ ರವರ ಒಂದು ಎಪಿಸೋಡಿಗೆ ಪಡೆಯುವ ಅಸಲಿ ಸಂಭಾವನೆ ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳ ಕಾಲ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡ ಇಂದಿಗೂ ಕೂಡ ಟಾಪ್ ನಟಿಯರ ಸಾಲಿನಲ್ಲಿ ಕಂಡು ಬರುವ ಕವಿತ ಗೌಡ ರವರ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಯಾಕೆಂದರೆ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದು ಕೊಂಡಿರುವ ನಟಿಯರಲ್ಲಿ ಕವಿತಾ ಗೌಡ ರವರು ಮೊದಲನೇ ಸಾಲಿನಲ್ಲಿ ಕಂಡು ಬರುತ್ತಾರೆ.
ಅದರಲ್ಲಿಯೂ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಪಡೆದು ಕೊಂಡ ನಂತರ ವಿದ್ಯಾ ವಿನಾಯಕ ಗಣೇಶ ಸೇರಿದಂತೆ ಇನ್ನಿತರ ಧಾರವಾಹಿಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಕವಿತಾ ಗೌಡ ರವರು ಪ್ರತಿ ಬಾರಿಯೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದ ಕವಿತಾ ಗೌಡ ರವರು ಇದೀಗ ಕಳೆದ ಕೆಲವು ದಿನಗಳಿಂದ ಕಿರುತೆರೆಯಿಂದ ದೂರ ಉಳಿದಿದ್ದರೂ ಕೂಡ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಇನ್ನು ಇವರು ಧಾರಾವಾಹಿಗಳಲ್ಲಿ ನಟಿಸಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ನಾವು ನೋಡುವುದಾದರೆ, ಒಂದು ಎಪಿಸೋಡಿಗೆ ಕವಿತ ಗೌಡ ರವರು 35 ಸಾವಿರದಿಂದ ನಲವತ್ತು ಸಾವಿರ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ಕಿರುತೆರೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.