ಟೆಲೆಕಾಂ ಕ್ಷೇತ್ರವನ್ನು ತಲ್ಲಣಗೊಳಿಸಿದ ಏರ್ಟೆಲ್: ಜಿಯೋ ಗೆ ಶಾಕ್: 5 ರೂಪಾಯಿಗಿಂತ ಕಡಿಮೆಗೆ 1 ವರ್ಷದ ಕೂಲ್ ಪ್ಲಾನ್. ಏನು ಸಿಗುತ್ತದೆ ಗೊತ್ತೆ??
ಭಾರತ ದೇಶದಲ್ಲಿ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಎಂದು ಖ್ಯಾತಿ ಪಡೆದಿರುವುದು ಏರ್ಟೆಲ್ ಸಂಸ್ಥೆ. ಇದೀಗ ಏರ್ಟೆಲ್ ಸಂಸ್ಥೆ ತಮ್ಮ ಗ್ರಾಹಕರಿಗಾಗಿ, ಕೂಲ್ ಪ್ಲಾನ್ ಒಂದನ್ನು ಹೊರತಂದಿದೆ. ಇದು ಪ್ರೀಪೇಯ್ಡ್ ಗ್ರಾಹಕರಿಗೆ ಅತ್ಯುತ್ತಮವಾದ ಯೋಜನೆ ಆಗಿದೆ. ಇದು ಒಂದು ವರ್ಷದ ಪ್ಲಾನ್ ಆಗಿದ್ದು, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯಬಹುದು. ಗ್ರಾಹಕರಿಗೆ ಕಡಿಮೆ ಬೆಲೆಗೆ ಒಳ್ಳೆಯ ಪ್ಲಾನ್ ಗಳನ್ನು ಕೊಡುವ ಜಿಯೋ ಸಂಸ್ಥೆಗೆ ಇದು ಕಾಂಪಿಟೇಶನ್ ಆಗಿದೆ. ಏರ್ಟೆಲ್ ನ ಈ ಹೊಸ ಪ್ಲಾನ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಏರ್ಟೆಲ್ ನೀಡಿರುವ ಈ ಹೊಸ ಪ್ಲಾನ್, ₹1,799 ರೂಪಾಯಿಯ ಪ್ಲಾನ್ ಆಗಿದೆ. ಈ ಪ್ಲಾನ್ ನ ವ್ಯಾಲಿಡಿಟಿ ಹೊಂದಿರುತ್ತದೆ. ವರ್ಷ ಪೂರ್ತಿ, 365 ದಿನಗಳ ವರೆಗೂ ಸೇವೆ ನೀಡುವ ಈ ಪ್ಲಾನ್ ನಲ್ಲಿ, ಅನಿಯಮಿತ ಕರೆಗಳನ್ನು ಪಡೆಯುತ್ತೀರಿ. ಜೊತೆಗೆ 24 ಜಿಬಿ, ಅಂದರೆ ಒಂದು ತಿಂಗಳಿಗೆ 2ಜಿಬಿ ಡೇಟಾ ಸಿಗುತ್ತದೆ. ಜೊತೆಗೆ 3600 ಉಚಿತ ಎಸ್.ಎಂ.ಎಸ್ ಗಳು ಲಭ್ಯವಿರುತ್ತದೆ. ಇಲ್ಲಿ ನೀಡುತ್ತಿರುವುದು ಲುಂಪ್ಸಮ್ ಡೇಟಾ ಆಗಿರುವ ಕಾರಣ, ದಿನಕ್ಕೆ 2 ಜಿಬಿ ಅಥವಾ 3ಜಿಬಿ ಡೇಟಾ ಎಂದು ಲಿಮಿಟ್ಸ್ ಇರುವುದಿಲ್ಲ. ಈ ಪ್ಲಾನ್ ನಲ್ಲಿ ಹೆಚ್ಚಿನ ಡೇಟಾ ಸಿಗುವುದಿಲ್ಲ, ಹೆಚ್ಚುವರಿ ಡೇಟಾ ಬೇಕಾದರೆ ಏರ್ಟೆಲ್ ಡೇಟಾ ಪ್ಲಾನ್ ಗಳನ್ನು ರೀಚಾರ್ಜ್ ಮಾಡಿಕೊಳ್ಳಬೇಕು. ಹೆಚ್ಚು ಡೇಟಾ ಬಳಸದವರಿಗೆ ಇದು ಸೂಕ್ತವಾದ ಪ್ಲಾನ್ ಆಗಿದೆ.
ಮನೆ ಮತ್ತು ಆಫೀಸ್ ನಲ್ಲೋ ವೈಫೈ ಬಳಸುವವರಿಗೆ ಇದು ಒಳ್ಳೆಯ ಪ್ಲಾನ್. ಹೆಚ್ಚು ಡೇಟಾ ಬಳಸದೆ ವಯಸ್ಸಾದವರು, ವಾಟ್ಸಾಪ್ ಮಾತ್ರ ಬಳಸುವ ವ್ಯಕ್ತಿಗಳಿಗೆ ಇದು ಬಹಳ ಒಳ್ಳೆಯ ಪ್ಲಾನ್ ಆಗಿದೆ. ಈ ಸೌಲಭ್ಯಗಳ ಜೊತೆಗೆ, ಅಪೋಲೊ 24×7 ಸೌಲಭ್ಯ, ಫಾಸ್ಟ್ಯಾಗ್ 100 ರೂಪಾಯಿಯ ಕ್ಯಾಶ್ ಬ್ಯಾಕ್, ಉಚಿತ ಹಲೋ ಟ್ಯೂನ್ಸ್, ಹಾಗೂ ವುಂಕ್ ಮ್ಯೂಸಿಕ್ ನ ಪ್ರಯೋಜನ ಪಡೆಯಬಹುದು. ಈ ಪ್ಲಾನ್ ನಲ್ಲಿ ಸಿಗುವ 3600 ಎಸ್.ಎಂ.ಎಸ್ ಗಳು ಒಂದೇ ಸಾರಿಗೆ ಬರುವುದಿಲ್ಲ, ದಿನಕ್ಕೆ 100 ಎಸ್.ಎಂ.ಎಸ್ ಗಳನ್ನು ಮಾತ್ರ ಗ್ರಾಹಕರು ಬಳಸಬಹುದು. ಇದನ್ನು ಪರ್ ಡೇ ಪ್ರಕಾರ ನೋಡುವುದಾದರೆ, ಒಂದು ದಿನಕ್ಕೆ 4.9 ರೂಪಾಯಿ ಆಗುತ್ತದೆ, ದಿನಕ್ಕೆ 5 ರೂಪಾಯಿಗಿಂತ ಕಡಿಮೆ ಹಣದಲ್ಲಿ, 100 ಎಸ್.ಎಂ.ಎಸ್, ಡೇಟಾ ಹಾಗೂ ಅನಿಯಮಿತ ಕರೆಗಳನ್ನು ಪಡೆಯಬಹುದು.