ಟೆಲೆಕಾಂ ಕ್ಷೇತ್ರವನ್ನು ಮತ್ತೊಮ್ಮೆ ದಿಗ್ಬ್ರಮೆ ಗೊಳಿಸಿದ ಜಿಯೋ: ಕಂಪನಿಗಳಿಗೆ ಶಾಕ್: ಕೇವಲ ಚಿಲ್ಲರೆ ಹಣಕ್ಕೆ ಆಫರ್ ಮೇಲೆ ಆಫರ್. ಏನೆಲ್ಲಾ ಸಿಗುತ್ತಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಿಲಯನ್ಸ್ ಹೊಡೆತನದ ಟೆಲಿಕಾಂ ಕ್ಷೇತ್ರದ ದಿಗ್ಗಜ ಸಂಸ್ಥೆ ಆಗಿರುವ ಜಿಯೋ ಹಾಗಾಗ ತನ್ನ ಹೊಸ ಯೋಜನೆಗಳ ಮೂಲಕ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಅತ್ಯಂತ ಹೆಚ್ಚು ಪ್ರಯೋಜನ ವಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.

ಸಾಮಾನ್ಯವಾಗಿ ಪ್ರಿಪೇಡ್ ಯೋಜನೆಗಳಿಗೆ ಜಿಯೋ ಸಂಸ್ಥೆ ಹೆಸರುವಾಸಿಯಾಗಿದೆ ಆದರೆ ಪೋಸ್ಟ್ ಪೇಯ್ಡ್ ಯೋಜನೆಗಳಿಗೂ ಕೂಡ ಕಮ್ಮಿ ಏನಿಲ್ಲ. ಸಾಮಾನ್ಯವಾಗಿ ಪೋಸ್ಟ್ ಪೇಯ್ಡ್ ಯೋಜನೆಗಳು ಸಾಕಷ್ಟು ದುಬಾರಿ ಆಗಿರುತ್ತವೆ ಆದರೆ ಜಿಯೋ ಸಂಸ್ಥೆಯ ಯೋಜನೆಗಳು ಸಾಕಷ್ಟು ಕೈಗೆಟಕುವ ದರದಲ್ಲಿ ಪೋಸ್ಟ್ ಪೇಯ್ಡ್ ಯೋಜನೆಗಳಿವೆ ಎಂಬುದಾಗಿ ನೀವು ಕೂಡ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ನಾವು ಈಗ ಹೇಳಲು ಹೊರಟಿರುವುದು 399 ರೂಪಾಯಿಗಳ ಪೋಸ್ಟ್ ಪೇಯ್ಡ್ ರಿಚಾರ್ಜ್ ಪ್ಲಾನ್. ಇದರಲ್ಲಿ 75 ಜಿಬಿ ಇಂಟರ್ನೆಟ್ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು 200gb ವರೆಗೆ ರೋಲ್ ಓವರ್ ಡೇಟ ನೀಡಲಾಗುತ್ತದೆ. ನೂರು ಉಚಿತ ಎಸ್ಎಂಎಸ್ ಗಳು ಕೂಡ ಈ ಯೋಜನೆಯಲ್ಲಿ ನಿಮಗೆ ದೊರೆಯುತ್ತದೆ. ರೋಲ್ ಓವರ್ ಡೇಟಾ ನಿಮ್ಮ ಇಂಟರ್ನೆಟ್ ಖಾಲಿಯಾದಾಗ ನಿಮಗೆ ಕೆಲಸಕ್ಕೆ ಬರುತ್ತದೆ.

ಇನ್ನು ಮನೋರಂಜನ ಪ್ರಿಯರಿಗೆ ಈ ಯೋಜನೆಯಲ್ಲಿ ಓ ಟಿ ಟಿ ಪ್ಲಾಟ್ ಫಾರ್ಮ್ ಗಳಾಗಿರುವ ಅಮೆಜಾನ್ ಪ್ರೈಮ್ ಹಾಗೂ ನೆಟ್ ಪ್ಲಿಕ್ಸ್ ಉಚಿತವಾಗಿ ನಿಮಗೆ ನೋಡುವುದಕ್ಕೆ ಸಿಗಲಿದೆ. ಇದಕ್ಕೆ ನೀವು ದುಡ್ಡು ಕೊಟ್ಟು ಖರೀದಿಸುವುದಕ್ಕೆ ಹೋಗುವುದಾದರೆ ಕಡಿಮೆ ಎಂದರು 200 ರಿಂದ 500 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಈ ಪೋಸ್ಟ್ ಪೇಯ್ಡ್ ಪ್ಲಾನ್ ನಿಂದಾಗಿ ಮನೋರಂಜನೆಯನ್ನು ಉಚಿತವಾಗಿ ನೀವು ನೋಡಬಹುದಾದ ಸೌಲಭ್ಯ ಒದಗಿ ಬರುತ್ತಿರುವುದರಿಂದ ನಿಜಕ್ಕೂ ಕೂಡ ಇದೊಂದು ಅತ್ಯಂತ ಪ್ರಯೋಜನಾತ್ಮಕ ಯೋಜನೆಯಾಗಿದೆ.

Comments (0)
Add Comment