ಡೇವಿಡ್ ವಾರ್ನರ್ ಅಭ್ಯಾಸಕ್ಕೂ ಬರುತ್ತಿರಲಿಲ್ಲ, ಯಾವಾಗಲು ಪಾರ್ಟಿ ಮಾಡುತ್ತಿದ್ದರು. ಶಾಕಿಂಗ್ ವಿಷಯ ಬಿಚ್ಚಿಟ್ಟ ವೀರೇಂದ್ರ ಸೆಹ್ವಾಗ್. ವಾರ್ನರ್ ಈ ರೀತಿ ಇದ್ದರೆ?

2,097

ವೀರೇಂದ್ರ ಸೆಹ್ವಾಗ್ ಭಾರತದ ಶ್ರೇಷ್ಠ ಬ್ಯಾಟ್ಸಮನ್ ಗಳಲ್ಲಿ ಒಬ್ಬರು. ಇವರ ಆಟ ನೋಡುವುದೇ ಪ್ರತಿಯೊಬ್ಬರಿಗೂ ಸೋಜಿಗ. ೧೯೯೯ ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದವರು, ಹಲವಾರು ಶ್ರೇಷ್ಠ ಆಟಗಾರರೊಡನೆ ಆಟವಾಡಿದ್ದಾರೆ. ೧೫ ವರ್ಷಗಳ ನಂತರ ಅಂದರೆ ೨೦೧೪ ರಲ್ಲಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದರು. ಅವರ ಆರಾಧ್ಯ ದೈವ ಅಂದರೆ ಸಚಿನ್ ತೆಂಡೂಲ್ಕರ್ ಜೊತೆ ಆಡಿದ್ದಾರೆ, MS ಧೋನಿ ನಾಯಕತ್ವದಲ್ಲಿ ಆಡಿದ್ದಾರೆ ಅವರ ಮುಂದಿನ ಜನರೇಶನ್ ಆದರೆ ತಪ್ಪಾಗಲಾರದು ವಿರಾಟ್ ಕೊಹ್ಲಿ ಜೊತೆಗೂ ಪಾರ್ಟ್ನರ್ಶಿಪ್ ಆಟ ಆಡಿದ್ದಾರೆ.

ಎರಡನೇ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನ ನಾಯಕರಾಗಿದ್ದ ವೀರೇಂದ್ರ ಸೆಹ್ವಾಗ್ ಡೇವಿಡ್ ವಾರ್ನೆರ್ ಅವರ ಬಗೆಗಿನ ಒಂದು ವಿಷಯ ಬಿಚ್ಚಿಟ್ಟಿದ್ದಾರೆ. ಇದು ಇವಾಗ ಇಂಟರ್ನೆಟ್ ಅಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಡೇವಿಡ್ ವಾರ್ನರ್ ಅವರಿಗೆ ೨೦೦೯ ರ ಐಪಿಎಲ್ ಮೊದಲ ಆವೃತ್ತಿ ಆಗಿತ್ತು. ಆದರೆ ಅವರಿಗೆ ಯಾವುದೇ ಶಿಸ್ತು ಗೊತ್ತಿರಲಿಲ್ಲ. ಅವರನ್ನು ಸಂಭಾಳಿಸುವುದು ಕೂಡ ಕಷ್ಟದ ಕೆಲಸವಾಗಿತ್ತು. ಅವರು ಡ್ರೆಸ್ಸಿಂಗ್ ರೂಮ್ ಅಲ್ಲಿ ಇತರ ಆಟಗಾರರೊಡನೆ ಉತ್ತಮ ಬಾಂದವ್ಯ ಕೂಡ ಹೊಂದಿರಲಿಲ್ಲ. ಆಟಗಾರರೊಡನೆ ಜಗಳವಾಡುತ್ತಿದ್ದರು, ಇದನ್ನು ತಡೆಯಲಾಗದೆ ನಾವು ಅವರನ್ನು ವಾಪಸು ಮನೆಗೆ ಕೂಡ ಕಳಿಸದ್ದೇವು ಎಂದು ಸೆಹ್ವಾಗ್ ಹೇಳಿದ್ದಾರೆ.

ಸೆಹ್ವಾಗ್ cricbuzz ಜೊತೆ ಮಾತಾಡುತ್ತ ” ನಾನು ಕೂಡ ಒಂದೆರಡು ಆಟಗಾರ ಮೇಲೆ ಹತಾಶನಾಗಿದ್ದೇನೆ. ಅದರಲ್ಲಿ ಒಬ್ಬರು ಈ ಡೇವಿಡ್ ವಾರ್ನರ್. ಮೊದಲ ವರ್ಷದಲ್ಲೇ ಅವರು ಜಗಳವಾಡಿದ್ದರು. ಆದ್ದರಿಂದ ಅವರನ್ನು ಕೊನೆಯ ಎರಡು ಪಂದ್ಯಗಳಿಂದ ಅವರನ್ನು ಹೊರಗುಳಿಸಿ ವಾಪಸು ಮನೆಗೆ ಕಳಿಸಲಾಗಿತ್ತು. ಅವರು ಇಲ್ಲದೆಯೂ ಕೊನೆಯ ಎರಡು ಪಂದ್ಯ ನಾವು ಗೆದ್ದಿದ್ದೇವೆ. ಇಲ್ಲಿ ತಂಡಕ್ಕಿಂತ ಅವರು ಮುಖ್ಯವಲ್ಲ ಎಂದು ಮನವರಿಕೆ ಮಾಡಿಸಬೇಕಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ.

ಗುರುವಾರ ಡೆಲ್ಲಿ ಕ್ಯಾಪಿಟಲ್ ತಂಡ ಹೈದರಾಬಾದ್ ತಂಡವನ್ನು ೨೧ ರನ್ ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ವಾರ್ನೆರ್ ಬಹು ಮೂಲ್ಯ ೯೨ ರನ್ ಗಳ ಆಟವಾಡಿದ್ದರು. ಕಳೆದ ವರ್ಷ ವರ್ಷಗಳ ವರೆಗೆ ಹೈದರಾಬಾದ್ ತಂಡಕ್ಕೆ ಸೇವೆ ಸಲ್ಲಿಸಿದ್ದ ವಾರ್ನೆರ್ ಅವರನ್ನು ವಿವಾದಾತ್ಮಕವಾಗಿ ನಾಯಕತ್ವದಿಂದ ಕೆಳಗಿಳಿಸಲಾಯಿತು. ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ದೆಹಲಿ ತಂಡ ೬.೫ ಕೋಟಿ ನೀಡಿ ಖರೀದಿ ಮಾಡಿತ್ತು. ಹೈದರಾಬಾದ್ ಹಾಗು ಡೆಲ್ಲಿ ನಡುವೆ ನಡೆಯಬೇಕಿದ್ದ ಪಂದ್ಯದ ಮೊದಲು ಸೆಹ್ವಾಗ್ ಈ ಕಾಮೆಂಟ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಈ ರೀತಿ ಇದ್ದರೆ ಎನ್ನುವುದು ಈಗ ಎಲ್ಲರಿಗು ಆಶ್ಚರ್ಯವಾಗುತ್ತಿದೆ.

Leave A Reply

Your email address will not be published.