ತನ್ನ ತಾಯಿಗೆ ಮಾಡಿದ ಅವಮಾನಕ್ಕೆ ಬಸ್ ಕಂಡಕ್ಟರ್ ಮಗಳು ಮಾಡಿದ ಕೆಲಸ ಏನು ಗೊತ್ತೇ?

407

ತಂದೆ ತಾಯಿ ಮತ್ತು ಮಕ್ಕಳ ಸಂಬಂಧ ಅದು ಎಷ್ಟೋ ಜನುಮದ ಅನಾನುಬಂದ. ಅದು ಏನೇ ಆಗಲಿ ತನ್ನ ತಂದೆ ತಾಯಿಯ ವಿಚಾರ ಬಂದಾಗ ಯಾರೊಬ್ಬ ಮಗನೂ ಅಥವಾ ಮಗಳು ಅದರಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅವರ ಪರವಾಗಿಯೇ ನಿಲ್ಲುತ್ತಾರೆ. ಅಂತಹುದೇ ಒಂದು ಘಟನೆ ನಡೆದಿದೆ, ತಂದೆ ವೃತ್ತಿಯಲ್ಲಿ ಬಸ್ ಕಂಡಕ್ಟರ್ ತಾಯಿಗೆ ಒಂದೊಮ್ಮೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿ ಕೊಳ್ಳಬೇಕು ಎಂದು ಹಠ ಹಿಡಿದು ಮಗಳು ಮಾಡಿದ ಕೆಲಸ ನೋಡಿದರೆ ಯಾರಿಗಾದರೂ ಹೆಮ್ಮೆ ಅನಿಸಬೇಕು ಏನಿದು ಘಟನೆ ಬನ್ನಿ ತಿಳಿಯೋಣ.

ಅವರ ಹೆಸರು ಶಾಲಿನಿ ಅಗ್ನಿಹೋತ್ರಿ, ಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಾರೆ. ತಂದೆ ವೃತ್ತಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಶಾಲಿನಿ ಅವರು ತಮ್ಮ ಬಾಲ್ಯದಲ್ಲಿ ನಡೆದ ಘಟನೆಯಿಂದಾಗಿ ಅವರ ಒಳಗಿನ ಆ ಹಠ ಎದ್ದಿತ್ತು. ಒಮ್ಮೆ ತನ್ನ ತಾಯಿಯ ಜೊತೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ತನ್ನ ತಾಯಿ ಕೂತಿದ್ದ ಹಿಂದಿನ ಸೀಟ್ ನಲ್ಲಿ ವ್ಯಕ್ತಿ ಒಬ್ಬರು ಕೂತು ಮುಂದಿನ ಸೀಟಿನ ಮೇಲೆ ಕೈ ಇಟ್ಟಿದ್ದರು. ಆದರೆ ಅದರಿಂದಾಗಿ ಶಾಲಿನಿ ಅವರ ತಾಯಿ ಅಲ್ಲಿ ಯಾಕೋ ಕಸಿವಿಸಿ ಗೊಂಡರು. ಆತನಲ್ಲಿ ಹಲವು ಬಾರಿ ಕೈ ತೆಗೆಯುವಂತೆ ಮನವಿ ಮಾಡಿದ್ದರು. ಆದರೂ ಆತ ಕೇಳದಂತೆ ಸುಮ್ಮನಿದ್ದ ಕೊನೆಗೆ ಸಿಟ್ಟಿನಿಂದ ಎದ್ದು ನೀನು ನೋಡಲು ಯಾವ ಡಿಸಿ ಹಾಗೆ ಕಾಣುತ್ತಿ ಅಂತ ನಿನ್ನ ಮಾತನ್ನು ನಾನು ಕೇಳಬೇಕು ಎಂದು ಗದರಿಸಿದ್ದ.

ಆದರೆ ಆತನ ಆ ಮಾತು ಪುಟ್ಟ ಶಾಲಿನಿಯ ಮನಸಿನಲ್ಲಿ ಅಚ್ಚೊತ್ತಿ ಕುಳಿತಿತ್ತು. ಆಗಲೇ ಅವರು ಜೀವನದಲ್ಲಿ ದೊಡ್ಡ ಹುದ್ದೆ ಏರಬೇಕು ಎಂದು ನಿರ್ಧಾರ ಮಾಡಿದ್ದರು. ತಮ್ಮ ಪದವಿ ನಂತರ upsc ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು. ಮನೆಯವರಲ್ಲಿ ಹೇಳದೆ ಈ ಒಂದು ತಯಾರಿಯಲ್ಲಿ ನಿರತರಾಗಿದ್ದರು. ಮನಸಿನೊಳಗೆ ಅಂದು ಹತ್ತಿದ್ದ ಆ ಕಿಚ್ಚು ಆರಲಿಲ್ಲ. ಪ್ರಯತ್ನಕ್ಕೆ ಫಲ ಎಂಬಂತೆ ಮೊದಲ ಪ್ರಯತ್ನದಲ್ಲಿ ಪರೀಕ್ಷೆ ತೇರ್ಗಡೆ ಆಗು ಐಪಿಎಸ್ ಅಧಿಕಾರಿ ಆದರು. ಹೀಗೆ ಅಂದು ಯಾರೋ ಒಬ್ಬ ವ್ಯಕ್ತಿ ಮಾಡಿದ ಆ ಅವಮಾನ ಶಾಲಿನಿ ಪಾಲಿಗೆ ವರದಾನ ಆಗಿ ಪರಿಣಮಿಸಿತ್ತು. ಅದೇನೇ ಆಗಲಿ ಈ ತರಹದ ಗುಣ ಎಲ್ಲರಲ್ಲೂ ಬರಬೇಕು. ಆಡಿದ ಮಾತುಗಳು ಮಾಡುವ ಕೆಲಸದಲ್ಲಿ ಉತ್ತರ ಕೊಡಬೇಕು.

Leave A Reply

Your email address will not be published.