ತನ್ನ ತಾಯಿಯ ಕೊನೆ ಆಸೆಯನ್ನು ಈಡೇರಿಸಲಾಗದ ಮಹೇಶ್ ಬಾಬು. ಈಗ ಅದರ ಕುರಿತೇ ಕೊರಗುತ್ತಿದ್ದಾರೆ. ಏನಾಗಿದೆ ಗೊತ್ತೇ??

145

ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರು ನಿಧನಾರಾದ ವಿಚಾರ ನಮಗೆ ತಿಳಿದಿದೆ. ಮಹೇಶ್ ಬಾಬು ಅವರ ತಾಯಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು, ಚಿಕಿತ್ಸೆ ಫಲ ನೀಡದೆ ಎರಡು ದಿನಗಳ ಹಿಂದೆ ಕೊನೆಯುಸಿರೆಳೆದರು. ಅವರು ಇಹಲೋಕ ತ್ಯಜಿಸಿದ ಬಳಿಕ ಅವರ ಬಗ್ಗೆ ಅನೇಕ ವಿಚಾರಗಳು ವೈರಲ್ ಆಗುತ್ತಿದೆ. ಇಂದಿರಾ ದೇವಿ ಅವರು ಜೀವನದ ಬಹಳ ಸಮಯ ಒಂಟಿಯಾಗಿಯೇ ಕಳೆದಿದ್ದರಂತೆ. ಎಲ್ಲರು ಇದ್ದರು ಕೂಡ ಇಂದಿರಾದೇವಿ ಅವರು ಪದ್ಮಾಲಯ ಸ್ಟುಡಿಯೋದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು ಎಂದು ಹೇಳುತ್ತಾರೆ. ಇವರ ಗಂಡ ಕೃಷ್ಣ ಎರಡನೇ ಹೆಂಡತಿ ವಿಜಯ ನಿರ್ಮಲಾ ಅವರೊಡನೆ ಇರುತ್ತಿದ್ದರು.

ಹಾಗಾಗಿ ಇಂದಿರಾ ದೇವಿ ಅವರು ಒಬ್ಬಂಟಿಯಾದರು, ಮಗ ಮಹೇಶ್ ಬಾಬು ಮತ್ತು ಹೆಣ್ಣುಮಕ್ಕಳು ಅವರವರ ಕೆಲಸಗಳಲ್ಲಿ ಅವರವರು ಬ್ಯುಸಿ ಇರುತ್ತಿದ್ದರು. ಹಾಗಾಗಿ ಮಕ್ಕಳಿಗು ಭಾರವಾಗಿ ಇರದೇ, ಆಕೆ ಒಂಟಿಯಾಗೆ ಜೀವನ ಕಳೆದರು. ಇಂದಿರಾ ದೇವಿ ಅವರಿಗೆ ಒಂದು ಕೊನೆಯ ಆಸೆ ಇತ್ತಂತೆ, ಮಹೇಶ್ ಬಾಬು ಅವರ ಮಗಳು ಸಿತಾರ ಅವರಿಗೆ ಲಂಗಾ ದಾವಣಿ ಫಂಕ್ಷನ್ ಮಾಡಿ ಎಂದು ಕೇಳಿಕೊಂಡಿದ್ದರಂತೆ. ತಾವು ಬದುಕಿರುವಾಗಲೇ ಸಿತಾರ ಅವರಿಗೆ ಈ ಫಂಕ್ಷನ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರಂತೆ. ಆದರೆ ಮಹೇಶ್ ಬಾಬು ಅವರು ಮಾತ್ರ ತಾಯಿಯ ಆ ಕೋರಿಕೆಗೆ ಒಪ್ಪಿಗೆ ನೀಡಲಿಲ್ಲವಂತೆ.

ನನಗೆ ಇಂತಹ ಫಂಕ್ಷನ್ ಗಳು ಇಷ್ಟ ಆಗುವುದಿಲ್ಲ ಎಂದು ನೇರವಾಗಿ ಹೇಳಿಬಿಟ್ಟರಂತೆ ಮಹೇಶ್ ಬಾಬು. ಈ ಆಸೆಯ ಬಗ್ಗೆ ಯಾವಾಗಲೇ ಕೇಳಿದರು ಇನ್ಯಾವಾಗಾದರು ನೋಡೋಣ ಎಂದು ಹೇಳುತ್ತಿದ್ದರಂತೆ ಮಹೇಶ್ ಬಾಬು. ಕೊನೆಗೂ ಇಂದಿರಾದೇವಿ ಅವರ ಈ ಆಸೆ ನೆರವೇರದೆ ಹಾಗೆಯೇ ಮರಣ ಹೊಂದಿದರು. ಈ ವಿಷಯದಿಂದ ಮಹೇಶ್ ಬಾಬು ಅವರಿಗೆ ಬಹಳ ನೋವಾಗಿದೆ. ತಾಯಿಯ ಕೋರಿಕೆ ನೆರವೇರದೆ ಹೋಯಿತು ಎಂದು ಇಡೀ ಕುಟುಂಬ ಬಹಳ ನೋವು ಪಡುತ್ತಿದ್ದಾರಂತೆ. ಮಹೇಶ್ ಬಾಬು ಅವರ ಮುದ್ದಿನ ಮಗಳು ಸಿತಾರ ಕೂಡ ಅಜ್ಜಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Leave A Reply

Your email address will not be published.