ತನ್ನ ೧೬ ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಂದೇ ಒಂದು ನೋಬಾಲ್ ಹಾಕಿಲ್ಲ ಈ ಭಾರತೀಯ ಆಟಗಾರ. ಯಾರೀ ಲೆಜೆಂಡ್ ಗೊತ್ತೆ?

1,080

ಈ ಕ್ರಿಕೆಟ್ ಎನ್ನುವುದು ಒಂದು ಅತ್ಯತ್ತಮ ಆಟವಾಗಿದ್ದು, ಪ್ರತಿದಿನ ಹೊಸ ಹೊಸ ದಾಖಲೆ ಆಟಗಾರರು ಪ್ರತಿ ಪಂದ್ಯದಲ್ಲಿ ಮಾಡುತ್ತಾ ಹೋಗುತ್ತಾರೆ. ಈ ದಾಖಲೆ ಮೂಲಕ ಆ ಆಟಗಾರ ಎಷ್ಟು ಶ್ರೇಷ್ಠ ಎನ್ನುವುದು ನಾವು ಅರಿಯುತ್ತೇವೆ. ಬ್ಯಾಟಿಂಗ್ ಮಾಡುತ್ತಾ ಹಲವರು ರೆಕಾರ್ಡ್ ಮಾಡಿದರೆ, ಬೌಲರ್ ಗಳು ತಾವೇನು ಕಮ್ಮಿಯಿಲ್ಲ ಎನ್ನುತ್ತ ಬೌಲಿಂಗ್ ಅಲ್ಲೂ ದಾಖಲೆ ಮಾಡುತ್ತಾರೆ.

ಇಂದು ನಾವು ಹೇಳ ಹೊರಟಿರುವ ನಮ್ಮ ದೇಶದ ಈ ಆಲ್ ರೌಂಡರ್ ಒಂದೇ ಒಂದು ನೋ ಬಾಲ್ ಹಾಕದೇ ದಾಖಲೆ ಪುಟಗಳಲ್ಲಿ ತಮ್ಮ ಹೆಸರನ್ನು ಮುದ್ರಿಸಿದ್ದಾರೆ. ಇದು ಆಟಗಾರನ ಶಿಸ್ತಿನ ಬಗ್ಗೆ ನಮಗೆ ತಿಳಿಸಿ ಹೇಳುತ್ತದೆ. ಆಟಗಾರನ ದೃಡತೆ, ಏಕಾಗ್ರತೆ ಬಗ್ಗೆ ಸ್ಪಷ್ಟ ಉದಾಹರಣೆಯಾಗಿದೆ. ಈ ಆಟಗಾರ ಬೇರೆ ಯಾರೂ ಅಲ್ಲ ನಮ್ಮ ದೇಶಕ್ಕೆ ಮೊದಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ದೇವ್ ಸಾಧನೆ.ತಮ್ಮ ೧೬ ವರ್ಷದ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಂದೇ ಒಂದು ನೋ ಬಾಲ್ ಹಾಕದೇ ದಾಖಲೆ ಮಾಡಿದ್ದಾರೆ.

ಭಾರತದ ನಾಯಕ ಹಾಗು ಆಲ್ ರೌಂಡರ್ ಮೂಲಕ ತಂಡದಲ್ಲಿ ಸ್ಥಾನ ಪಡೆದು ಮೊದಲ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕಪಿಲ್ ದೇವ್ ತಮ್ಮ ವೃತ್ತಿ ಜೀವನ ಶುರು ಮಾಡಿದ್ದು ೧೯೭೮ ರಲ್ಲಿ ಹಾಗೆನೇ ಇವರು ರಿಟೈರ್ಡ್ ಆದದ್ದು ೧೯೯೪ ರಲ್ಲಿ. ಈ ೧೬ ವರ್ಷದ ಕ್ರಿಕೆಟ್ ವೃತ್ತಿಜೀವನದಲ್ಲಿ ಒಬ್ಬ ವೇಗದ ಬೌಲರ್ ಅಗಿದ್ದರೂ ಕೂಡಾ ಒಂದೇ ಒಂದು ನೋಬಾಲ್ ಹಾಕಲಿಲ್ಲ ಕಪಿಲ್ ದೇವ್.

ಆಲ್ ರೌಂಡರ್ ಕಪಿಲ್ ದೇವ್ ಭಾರತದ ಪರ ೧೩೧ ಟೆಸ್ಟ್ ಪಂದ್ಯ ಹಾಗು ೨೨೫ ಏಕದಿನ ಪಂದ್ಯ ಆಡಿದ್ದಾರೆ. ಇದರಲ್ಲಿ ಇವರು ಕ್ರಮವಾಗಿ ೫೨೪೮ ಹಾಗು ೩೭೮೩ ರನ್ ಕಲೆ ಹಾಕಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕಪಿಲ್ ದೇವ್ ೪೩೪ ಟೆಸ್ಟ್ ವಿಕೆಟ್ ಹಾಗು ಏಕದಿನದಲ್ಲಿ ೨೫೩ ವಿಕೆಟ್ ಪಡೆದು ಸರ್ವಶ್ರೇಷ್ಠ ಎನಿಸಿದ್ದಾರೆ. ಕಪಿಲ್ ದೇವ್ ಅಲ್ಲದೇ ವಿಶ್ವದಾದ್ಯಂತ ಇನ್ನೂ ನಾಲ್ಕು ಆಟಗಾರರು ನೋಬಾಲ್ ಹಾಕಲಿಲ್ಲ. ಅವರಲ್ಲಿ ಮೊದಲಿಗರು ವೆಸ್ಟ್ ಇಂಡೀಸ್ ನ ಲಾಂಸ್ ಗಿಬ್ಸ್, ಆಸ್ಟ್ರೇಲಿಯಾ ದ ಡೆನಿಸ್ ಲಿಲ್ಲಿ, ಇಂಗ್ಲೆಂಡ್ ನ ಇಯಾನ್ ಬಾಥಮ್ ಹಾಗೆನೇ ಪಾಕಿಸ್ತಾನದ ಇಮ್ರಾನ್ ಖಾನ್ ಹೆಸರು ಕೂಡಾ ಸೇರಿದೆ.

Leave A Reply

Your email address will not be published.