ತಮಗೆ ಇಷ್ಟವಿಲ್ಲದೆ ಇದ್ದರೂ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಡೆ ರವರ ಬದುಕಿನ ಕಥೆ ಏನು ಗೊತ್ತೆ?? ಏನಾಗಿತ್ತು ಗೊತ್ತೇ ಕನಸು??

303

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಅವರವರ ಜೀವನದಲ್ಲಿ ಒಂದು ದೊಡ್ಡ ಕನಸನ್ನು ಕಟ್ಟಿಕೊಂಡಿರುತ್ತಾರೆ. ಕೆಲವರು ಆ ಕನಸನ್ನ ಬೆನ್ನತ್ತಿ ನನಸು ಮಾಡಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಇದು ಕನಸಾಗಿಯೇ ಉಳಿಯಲಿದೆ. ಈ ರೀತಿ ಅನೇಕರ ಜೀವನದಲ್ಲಿ ಕೆಲವು ಅನಿವಾರ್ಯಗಳಿಗೆ ತಲೆಬಾಗಿ ನಿಲ್ಲಬೇಕಾಗುತ್ತದೆ. ಅಂತದ್ದೇ ಪರಿಸ್ಥಿತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೂಡ ಅನುಭವಿಸಿದ್ದಾರೆ.

ಧರ್ಮಸ್ಥಳ ಅಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಹಸಿದವರಿಗೆ ಅನ್ನ ಸಂತರ್ಪಣೆ. ಅನ್ನ ಅಕ್ಷರ ಆರೋಗ್ಯ ಈ ಮೂರು ಅಗತ್ಯ ಇರೋ ಜನರಿಗೆ ಧರ್ಮಸ್ಥಳ ಕ್ಷೇತ್ರದಲ್ಲಿ ಸಿಗಲಿದೆ. ಈ ಪುಣ್ಯ ಕ್ಷೇತ್ರ ನಮ್ಮ ನಾಡು ಮಾತ್ರ ಅಲ್ಲ ದೇಶಾದ್ಯಂತ ಅಪಾರ ಭಕ್ತ ಗಣವನ್ನೊಂದಿದೆ. ಕರ್ನಾಟಕದ ಪ್ರಸಿದ್ದ ಕ್ಷೇತ್ರಗಳಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಈ ಪುಣ್ಯ ಕ್ಷೇತ್ರ ಕೂಡ ಒಂದಾಗಿದೆ. ಧರ್ಮಸ್ಥಳ ಕ್ಷೇತ್ರದಲ್ಲಿ ಬಂದಂತಹ ಭಕ್ತಾಧಿಗಳಿಗೆ ನಿರಂತರವಾಗಿ ಅನ್ನ ದಾಸೋಹ ಮಾಡುವ ಮೂಲಕ ಧರ್ಮಸ್ಥಳವನ್ನು ದೇಶಾದ್ಯಂತ ಪ್ರಸಿದ್ದಿ ಗೊಳಿಸಿದ ಹೆಗ್ಗಳಿಕೆ ಕ್ಷೇತ್ರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್ ವ್ಯಕ್ತಿಯ ಅವರ ಹಿನ್ನೆಲೆ ಬಗ್ಗೆ ಬಹುತೇಕರಿಗೆ ತಿಳಿದಿರುವುದಿಲ್ಲ.

ವೀರೇಂದ್ರ ಹೆಗ್ಗಡೆ ಅವರು ನವೆಂಬರ್ 25 ರಂದು ಬಂಟ್ವಾಳದಲ್ಲಿ ಜನಿಸುತ್ತಾರೆ. ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ಇವರ ಪೋಷಕರು. ಇವರಿಗೆ ಹೇಮಾವತಿ ಹೆಗ್ಗಡೆ ಅವರೊಂದಿಗೆ ಮದುವೆ ಆಗುತ್ತದೆ. ಈ ದಂಪತಿಗಳಿಗೆ ಶ್ರದ್ದಾ ಹೆಗ್ಗಡೆ ಎಂಬ ಒಬ್ಬ ಮಗಳು ಇದ್ದಾರೆ. ತಮ್ಮ ತಂದೆಯ ನಿಧನದ ನಂತರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ವೀರೇಂದ್ರ ಹೆಗ್ಗಡೆ ಅವರು ಅನಿವಾರ್ಯವಾಗಿ ತಮ್ಮ ಇಶ್ಪತ್ತನೇ ವಯಸ್ಸಿನಲ್ಲಿ ಪಟ್ಟಾಭಿಷೇಕ ಪಡೆಯುತ್ತಾರೆ. ವೀರೆಂದ್ರ ಹೆಗ್ಗಡೆ ಅವರು ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಮುಗಿಸಿ ಉಜಿರೆಯಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಾರೆ.

ನಂತರ ಬೆಂಗಳೂರಿನ ಸೆಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪಾಸ್ ಆಗಿ, ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿ ನಂತರ ಬಿ.ಎ. ಪದವಿ ಪಡೆದುಕೊಳ್ಳುತ್ತಾರೆ.‌ಇದಾದ ನಂತರ ವೀರೇಂದ್ರ ಹೆಗ್ಗಡೆ ಅವರು ತಾವು ಲಾಯರ್ ಆಗ್ಬೇಕು ಎಂದು ಎಲ್.ಎಲ್.ಬಿ.ಓದಬೇಕು ಎಂಬ ಮಹಾದಾಸೆ ಇಟ್ಟುಕೊಂಡಿರುತ್ತಾರೆ.‌ಆದರೆ ಎಲ್ಲವೂ ಬದಲಾಗಿ ಮಂಜುನಾಥೇಶ್ವರ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ಆಗುತ್ತಾರೆ. ನಂತರದ ದಿನಗಳಲ್ಲಿ ಧರ್ಮಸ್ಥಳದಲ್ಲಿ ಬೃಹತ್ ಬಾಹುಬಲಿಯ ಪ್ರತಿಮೆ ಕೆತ್ತಿಸಿ ಸ್ಥಾಪನೆ ಮಾಡಿದರು. ಧರ್ಮಸ್ಥಳಕ್ಕೆ ಬರುವ ಪ್ರತಿಯೊಬ್ಬರಿಗೂ ಕೂಡ ಊಟ ಒದಗಿಸುವ ಕಾರ್ಯವನ್ನು ಆರಂಭಿಸಿದರು. ಇದು ನಿರಂತರವಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಕೂಡ ನಡೆಯುವಂತೆ ಮಾಡಿದರು.

ಆರೋಗ್ಯ ವಿಕಸನಕ್ಕಾಗಿ ವೀರೇಂದ್ರ ಹೆಗ್ಗಡೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಉದಾಹರಣೆಗೆ ಧರ್ಮಸ್ಥಳದಲ್ಲಿ ಸಂಚಾರಿ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆ ಸ್ಥಾಪನೆ, ಕಣ್ಣಿನ ಆಸ್ಪತ್ರೆ, ದಂತ ಚಿಕಿತ್ಸಾಲಯ, ಸೇರಿದಂತೆ ಉಡುಪಿ ಮತ್ತು ಮಂಗಳೂರಿನಲ್ಲಿ ಆಯುರ್ವೇದ ಆಸ್ಪತ್ರೆಯನ್ನು ಕೂಡ ಸ್ಥಾಪನೆ ಮಾಡಿದರು.‌ಶಿಕ್ಷಣ ಕ್ಷೇತ್ರದಲ್ಲಿ ಕೂಡ ವೀರೇಂದ್ರ ಹೆಗ್ಗಡೆ ಅವರು ಧರ್ಮ, ಸಾಹಿತ್ಯ, ಕಲೆಯ ಬಗ್ಗೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿದ್ದಾರೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟುಹಾಕಿ ಉಚಿತ ವಿಧ್ಯಾರ್ಥಿ ನಿಲಯಗಳು, ಪ್ರಾಥಾಮಿಕ, ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಆರಂಭಿಸಿದ್ದಾರೆ.

ಇದರ ಜೊತೆಗೆ ಧರ್ಯೋತ್ಥಾನ ಟ್ರಸ್ಟ್ ಆರಂಭಿಸಿ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಮಾಡಿಸಿದ್ದಾರೆ. ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಸೇವೆಗಳನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 1993 ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರಿಂದ ರಾಜರ್ಷಿ ಗೌರವ ಕೂಡ ವೀರೇಂದ್ರ ಹೆಗ್ಗಡೆ ಅವರಿಗೆ ಲಭಿಸಿದೆ. ಒಟ್ಟಾರೆಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಆಗಿ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳವನ್ನು ಸಾಹಿತ್ಯ, ಉದ್ಯೋಗ, ಕಲೆ, ಸಹಕಾರ, ಸೇವಾ ಕ್ಷೇತ್ರ ಹೀಗೆ ಅನೇಕ ಉತ್ತಮ ಕಾರ್ಯಗಳ ಮೂಲಕ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಸಾಧನೆ ಮಾಡಿದ್ದಾರೆ.

Leave A Reply

Your email address will not be published.