ತಮನ್ನಾ ರವರು ಹೆಚ್ಚಿನ ಅವಕಾಶ ಇಲ್ಲದೆ ಇದ್ದರೂ ರಾಯಲ್ ಜೀವನ ಹೇಗೆ ನಡೆಸುತ್ತಿದ್ದಾರೆ ಗೊತ್ತೇ?? ಸಿನಿಮಾ ಇಂದ ಇವರು ಗಳಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತೇ?

133

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾಗಿರುವ ನಟಿ ತಮನ್ನಾ ಚಿತ್ರರಂಗಕ್ಕೆ ಬಂದು ಸುಮಾರು 15 ವರ್ಷಗಳಾಗಿವೆ. ಈಗಾಗಲೇ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದವರು. ಅನೇಕ ಬ್ಲಾಕ್‌ ಬಸ್ಟರ್‌ ಸಿನಿಮಾಗಳು ತಮನ್ನಾ ಅವರ ಲಿಸ್ಟ್ ನಲ್ಲಿದೆ. ತೆಲುಗು ಮತ್ತು ತಮಿಳಿನ ಎಲ್ಲ ಟಾಪ್ ಹೀರೋಗಳೊಂದಿಗೆ ನಟಿಸಿದ್ದಾರೆ. ಎಷ್ಟೋ ಸ್ಟಾರ್ ಹೀರೋಯಿನ್ ಗಳು ಇವರಷ್ಟುಸ್ಟಾರ್ ಹೀರೋಗಳ ಜೊತೆ ನಟಿಸಿಲ್ಲ. ಆದರೆ ತಮನ್ನಾ ಪ್ರತಿ ಸ್ಟಾರ್ ಹೀರೋ ಜೊತೆಗೂ ಮಾಡಿದ್ದಾರೆ. ಅಲ್ಲದೇ ಸರಾಸರಿ ಹೀರೋಗಳ ಜೊತೆಯೂ ನಟಿಸಿ ಮೆಚ್ಚಿಗೆ ಪಡೆದುಕೊಂಡಿದ್ದಾರೆ.

ಈಗಲೂ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. ಇತ್ತೀಚೆಗೆ ತಮನ್ನಾ ಅವರು F-3 ಚಿತ್ರದ ಮೂಲಕ ಮತ್ತೊಂದು ಹಿಟ್ ಗಳಿಸಿದರು. ಇದೀಗ ಬಾಲಿವುಡ್ ನಲ್ಲಿ ಲಸ್ಟ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ನಟಿ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮನ್ನಾ ಅವರು ವರ್ಷಗಳ ವೃತ್ತಿಜೀವನದಲ್ಲಿ ಉತ್ತಮವಾಗಿ ಹಣವನ್ನು ಗಳಿಸಿದ್ದಾರೆ. ಹಾಗೆ ನೋಡಿದರೆ ಆಕೆಯ ಒಟ್ಟು ಆಸ್ತಿ ರೂ.150 ಕೋಟಿಗೂ ಹೆಚ್ಚು. ಮುಂಬೈನ ದುಬಾರಿ ಪ್ರದೇಶ ಜುಹುದಲ್ಲಿ 16.60 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಕೂಡ ಹೊಂದಿದ್ದಾರೆ.

ಇದರ ವಿಸ್ತೀರ್ಣ 80,778 ಚದರ ಅಡಿ. ಆಕೆ ಇರುವುದು ತುಂಬಾ ದುಬಾರಿ ಅಪಾರ್ಟ್ಮೆಂಟ್ ಆಗಿದೆ. ಆಕೆಯ ಬಳಿ ಹಲವು ಐಷಾರಾಮಿ ಕಾರುಗಳು ಸಹ ಇವೆ. BMW, Range Rover, Land Rover, Mercedes Benz ಮುಂತಾದ ಕಾರುಳು ತಮನ್ನಾ ಅವರ ಬಳಿ ಇದೆ. ಆ ಕಾರುಗಳ ಬೆಲೆ ಸುಮಾರು 3.50 ಕೋಟಿ ರೂಪಾಯಿಗಳು ಎಂದು ತಿಳಿದು ಬಂದಿದೆ. ತಮನ್ನಾ ಅವರ ಬಳಿ ದುಬಾರಿ ವಜ್ರದ ಉಂಗುರ ಕೂಡ ಇದೆ. ಇದೇ ವಜ್ರದ ಉಂಗುರವನ್ನು ನಟ ರಾಮ್ ಚರಣ್ ಅವರು ತಮ್ಮ ಪತ್ನಿ ಉಪಾಸನಾ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಈ ಉಂಗುರದ ಮೌಲ್ಯ ಸುಮಾರು 2 ಕೋಟಿ ರೂಪಾಯಿಗಳು ಎನ್ನಲಾಗಿದೆ. ಹೀಗೆ ನೂರಾರು ಕೋಟಿ ಗಳಿಸುತ್ತಿದ್ದಾರೆ ನಟಿ ತಮನ್ನಾ.

Leave A Reply

Your email address will not be published.