ತಲೆಕೆಳಗಾದ ಶಾಹಿದ್ ಕಪೂರ್ ಜೆರ್ಸಿ ಸಿನೆಮಾ ಲೆಕ್ಕಾಚಾರ. ರೀಮೇಕ್ ಮಾಡೋದಕ್ಕಿಂತ ಡಬ್ ಮಾಡಬಹುದಿತ್ತು ಎಂದ ರಾಮ್ ಗೋಪಾಲ್ ವರ್ಮಾ.

1,854

ಶಾಹಿದ್ ಕಪೂರ್ ಬಾಲಿವುಡ್ ನ ಸೂಪರ್ ಹಿಟ್ ಮೂವಿ ನೀಡಿದ ಸ್ಟಾರ್ ನಟ. ಈ ಹಿಂದೆ ಬಿಡುಗಡೆಯಾದ ತೆಲುಗು ಸಿನೆಮಾ ಕಬೀರ್ ಸಿಂಗ್ ಕೂಡ ಸೂಪರ್ ಹಿಟ್ ಆಗಿತ್ತು. ಈ ಜೆರ್ಸಿ ಕೂಡ ತೆಲುಗು ಸೂಪರ್ ಹಿಟ್ ಮೂವಿ ಆಗಿದೆ. ಆದರೆ ಈ ಸಿನೆಮಾ ಹೇಳಿಕೊಳ್ಳುವಂತಹ ಯಶಸ್ಸು ಲಭಿಸಲಿಲ್ಲ ಎನ್ನುವುದು ನಾವಿಲ್ಲಿ ಗಮನಿಸಬೇಕಾದದ್ದು. ದಕ್ಷಿಣ ದ ಸಿನೆಮಾವನ್ನು ರೀಮೇಕ್ ಮಾಡುವ ಮೂಲಕ ಹಣ ಮಾಡುವ ಬಾಲಿವುಡ್ ಗೆ ದೊಡ್ಡ ಹೊಡೆತ ನೀಡಿದ್ದು ಇತ್ತೀಚಿಗೆ ಬಿಡುಗಡೆ ಆದ ಕನ್ನಡದ KGF ಚಾಪ್ಟರ್ ೨.

ಯಾವುದೇ ಹೊಸ ಕಾನ್ಸೆಪ್ಟ್ ಇಲ್ಲದೆ ಕೇವಲ ದಕ್ಷಿಣ ಭಾರತದ ಎಲ್ಲ ಸಿನೆಮಾಗಳನ್ನು ರಿಮೇಕ್ ಮಾಡಿ ಒಳ್ಳೆ ಹಣ ಮಾಡುತಿತ್ತು ಬಾಲಿವುಡ್ ಸಿನೆಮಾ. ಇದೀಗ ಬಾಹುಬಲಿ ನಂತರ ಅನೇಕ ದಕ್ಷಿಣದ ಚಿತ್ರಗಳು ಪಾನ್ ಇಂಡಿಯಾ ಸಿನೆಮಾ ಮಾಡುವ ಮೂಲಕ ಬಾಲಿವುಡ್ ನ ಹಣ ಪ್ರಿಂಟ್ ಮಾಡುವ ಐಡಿಯಾ ಗೆ ಫುಲ್ ಸ್ಟಾಪ್ ಇಡುತ್ತಿದೆ ಅಂದರೆ ತಪ್ಪಾಗಲ್ಲ. ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಕೂಡ ತೆಲುಗಿನ ರಿಮೇಕ್ ಆಗಿದ್ದು ಇದೀಗ ಬಾಕ್ಸ್ ಆಫೀಸ್ ಅಲ್ಲಿ ಹಣ ಗಳಿಸಲು ಕೂಡ ಪರದಾಡುತ್ತಿದೆ.

ಇದಕ್ಕೆ ದಕ್ಷಿಣದ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡುವ ಮೂಲಕ ಬಾಲಿವುಡ್ ಗೆ ಬುದ್ದಿವಾದ ಹೇಳಿದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ RVG ಇತ್ತೀಚಿಗೆ ಕನ್ನಡ ಮತ್ತು ತೆಲುಗು ಸಿನೆಮಾಗಳು ಹಿಂದಿ ಡಬ್ ಮೂಲಕ ಬಿಡುಗಡೆ ಆದರೂ ಕೂಡ ಅಲ್ಲಿನ ಜನರಿಂದ ಪಡೆದ ಪ್ರೀತಿಯಿಂದ, ಬಾಲಿವುಡ್ ದಕ್ಷಿಣ ಸಿನಿಮಾಗಳನ್ನು ರಿಮೇಕ್ ಮಾಡುವ ಬದಲು ಡಬ್ ಮಾಡಿ ಬಿಡುಗಡೆ ಮಾಡಿದರೇನೇ ಉತ್ತಮ ಎಂದು ಹೇಳಿದ್ದಾರೆ.

ಟ್ವಿಟ್ಟರ್ ಅಲ್ಲಿ ಶಾಹಿದ್ ಕಪೂರ್ ಅವರ ಜೆರ್ಸಿ ಸಿನೆಮಾದ ಬಗ್ಗೆ ಹೇಳುತ್ತಾ, ಜೀವನದಲ್ಲಿ ಎರಡನೇ ಅವಕಾಶಕ್ಕಾಗಿ ಕಾಯುತ್ತಿರುವ ಶಾಹಿದ್ ಕಪೂರ್ ನಾಯಕನಾಗಿ ಈ ಜೆರ್ಸಿ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಕಳೆದ ವಾರ ಬಿಡುಗಡೆ ಆಗಿದ್ದರು ಕೂಡ ಕನ್ನಡದ KGF ಚಿತ್ರದ ಬಿರುಗಾಳಿಯ ನಡುವೆ ಬಾಕ್ಸ್ ಆಫೀಸ್ ಅಲ್ಲಿ ಯಾವುದೇ ಪ್ರಭಾವ ಬೀರಲು ಆಗಿಲ್ಲ. ಹಾಗೇನೇ ಟ್ವೀಟ್ ಅಲ್ಲಿ ಜೆರ್ಸಿ ಒಂದು ರಿಮೇಕ್ ನ ದುರಂತ ಚಿತ್ರವಾಗಿದೆ. ಇದರೊಟ್ಟಿಗೆ ಬಾಲಿವುಡ್ ನ ರಿಮೇಕ್ ಭವಿಷ್ಯ ಕೊನೆಯಾಗುತ್ತದೆ.

ಪುಷ್ಪ, RRR ಹಾಗು KGF Chapter 2 ನಂತಹ ಹಿಂದಿ ಡಬ್ ಸಿನೆಮಾಗಳು ಮೂಲ ಭಾಷೆಗಿಂತ ಹೆಚ್ಚಾಗಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ತರಹ ಆಗಲು ಸಿನೆಮಾದ ವಿಷಯ ಉತ್ತಮವಾಗಿರಬೇಕಷ್ಟೆ. ಇಷ್ಟಕ್ಕೆ ನಿಲ್ಲಿಸದ RGV, ನಿರ್ಮಾಪಕರು ಈ ತೆಲುಗಿನ JERSI ಚಿತ್ರವನ್ನು ಕೇವಲ ೧೦ ಲಕ್ಷ ಖರ್ಚು ಮಾಡಿ ಡಬ್ ಮಾಡಿ ಬಿಟ್ಟಿದ್ದರೆ ಲಾಭ ಆಗುತಿತ್ತು, ಇದೀಗ ರಿಮೇಕ್ ಮಾಡಿ ೧೦೦ ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಪುಷ್ಪ, RRR ಹಾಗು KGF ನಂತಹ ದಕ್ಷಿಣದ ಡಬ್ ಸಿನೆಮಾಗಳು ಹಿಟ್ ಆದ ನಂತರ ಯಾವುದೇ ಉತ್ತಮ ವಿಷಯ ಹೊಂದಿರುವ ದಕ್ಷಿಣದ ಸಿನೆಮಾಗಳನ್ನು ರಿಮೇಕ್ ಹಕ್ಕು ಮಾರಾಟ ಮಾಡುವುದಿಲ್ಲ. ಏಕೆಂದರೆ ವಿಷಯ ಹಾಗು ದಕ್ಷಿಣದ ಸಿನೆಮಾ ತಾರೆಯರು ಉತ್ತರದಲ್ಲೂ ಇಷ್ಟವಾಗುತ್ತಿದ್ದರೆ. ಜನರು ಮುಖಕ್ಕೆ ಬೆಲೆ ಕೊಡಲ್ಲ ಬದಲಾಗಿ ಸಿನೆಮಾ ವಿಷಯ ಕ್ಕೆ ಎಲ್ಲಿಯ ನಟರಾದರು ಪರವಾಗಿಲ್ಲ ಜನರು ಅವರನ್ನು ಸ್ವೀಕರಿಸುತ್ತಿದ್ದಾರೆ. ಜೆರ್ಸಿ ತನ್ನ ಆರಂಭಿಕ ವಾರಾಂತ್ಯಕ್ಕೆ ೧೪ ಕೋಟಿ ಗಳಿಸಿದರೆ, ಕನ್ನಡ KGF ಸಿನೆಮಾ ೯೦೦ ಕೋಟಿ ಗಳಿಸಿ ಈಗಲೂ ಕೂಡ ಮುಂದೆ ಹೋಗುತ್ತಿದೆ.

Leave A Reply

Your email address will not be published.