ತಾನೇ ಎಲ್ಲ ತನ್ನಿಂದಾನೆ ಎಲ್ಲ ಎನ್ನುತ್ತಿದ್ದ ನಟಿ ತಾಪ್ಸಿ ಈಗ ಹೇಗಾಗಿದ್ದರೆ ಗೊತ್ತೇ?? ಪತ್ರಕರ್ತ ಮುಂದೇನೆ ತಾಳ್ಮೆ ಕಳೆದುಕೊಂಡದ್ದು ಯಾಕೆ ಗೊತ್ತೇ?

183

ಕೆಲವೊಮ್ಮೆ ಸಿನಿಮಾ ಕಲಾವಿದರು ಮಾಧ್ಯಮದವರು ಕೇಳುವ ಪ್ರಶ್ನೆಗೆ ಕೋಪದಲ್ಲಿ ಉತ್ತರಿಸಿರುವುದನ್ನು ಕೆಲವು ಬಾರಿ ನೋಡಿದ್ದೇವೆ. ಈ ರೀತಿ ಅನೇಕ ಕಲಾವಿದರು ಪ್ರತಿಕ್ರಿಯೆ ಕೊಟ್ಟಿರುವುದನ್ನು ನೋಡಿರುತ್ತೇವೆ. ಇದೀಗ ದಕ್ಷಿಣ ಭಾರತ ಚಿತ್ರರಂಗದಿಂದ ನಟನೆ ಶುರು ಮಾಡಿ, ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ತಾಪ್ಸಿ ಇದೀಗ ಇಂಥದ್ದೇ ರೀತಿಯಲ್ಲಿ ಮೀಡಿಯಾದವರ ಪ್ರಶ್ನೆಗೆ ಖಾರವಾಗಿ ಉತ್ತರ ನೀಡಿ ಸುದ್ದಿಯಾಗಿದ್ದಾರೆ.

ನಟಿ ತಾಪ್ಸಿ ಅವರು ತಮ್ಮ ದೊಬಾರಾ ಸಿನಿಮಾ ಪ್ರೊಮೋಷನ್ ನಲ್ಲಿದ್ದರು, ಈ ಸಿನಿಮಾ ಬಗ್ಗೆ ನೆಗಟಿವ್ ಟಾಕ್ ಸಹ ಕೇಳಿ ಬರುತ್ತಿದೆ. ಆಗ ಮೀಡಿಯಾದವರು ಸಿನಿಮಾ ನೆಗಟಿವ್ ಪ್ರಚಾರದ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರಿಸಿರುವ ತಾಪ್ಸಿ ಅವರು “ಯಾವ ಸಿನಿಮಾ ಈಗ ನೆಗಟಿವ್ ಅಭಿಯಾನವನ್ನು ಎದುರಿಸಿಲ್ಲ ಹೇಳಿ? ಮೊದಲು ನೀವು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ, ನಂತರ ನಾನು ನೀವು ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತೇನೆ..” ಎಂದು ಖಾರವಾಗಿ ಹೇಳಿದ್ದಾರೆ ನಟಿ ತಾಪ್ಸಿ. ಇಷ್ಟಕ್ಕೆ ನಿಲ್ಲಿಸದ ಮೀಡಿಯಾದವರು ಮತ್ತೊಂದು ಪ್ರಶ್ನೆ ಸಹ ಕೇಳಿದ್ದಾರೆ.

ವಿಮರ್ಶಕರು ಕೂಡ ಈ ಅಭಿಯಾನದ ಭಾಗವಾಗಿದ್ದಾರಾ ಎಂದು ಪ್ರಶ್ನೆ ಕೇಳಿದ್ದು, ಕೋಪಗೊಂಡ ತಾಪ್ಸಿ ಅವರು, “ಯಾವುದೇ ಒಂದು ವಿಚಾರದ ಬಗ್ಗೆ ಮಾತನಾಡುವ ಮೊದಲು ಅದರ ತಿಳಿದುಕೊಂಡು ನಂತರ ಅದರ ಬಗ್ಗೆ ಮಾತನಾಡಿ. ಈ ರೀತಿ ಪ್ರಶ್ನೆ ಕೇಳಿ, ನಂತರ ನಟನಟಿಯರಿಗೆ ಶಿಷ್ಟಾಚಾರ ಇಲ್ಲ ಎಂದು ಹೇಳುತ್ತೀರಾ..” ಎಂದು ಖಡಕ್ ಆಗಿ ಮೀಡಿಯಾದವರ ಪ್ರಶ್ನೆಗೆ ಉತ್ತರ ಕೊಟ್ಟಿದ್ದು, ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ 79ಸಾವಿರ ಲೈಕ್ಸ್ ಗಳು ಹಾಗೂ 600ಕ್ಕಿಂತ ಹೆಚ್ಚು ಕಮೆಂಟ್ಸ್ ಗಳು ಬಂದಿವೆ. ಹಲವಾರು ಜನರು ತಾಪ್ಸಿ ಅವರು ಮಾಡಿದ್ದು ಸರಿ ಎನ್ನುತ್ತಿದ್ದಾರೆ.

Leave A Reply

Your email address will not be published.