ತೆಲುಗಿನ ಮತ್ತೊಂದು ಕ’ರ್ಮಖಾಂಡ ಬಯಲಿಗೆ: ಕಾಸ್ಟಿಂಗ್ ಕೌಚ್ ಷಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಪ್ರಗತಿ: ಹೇಳಿದ್ದೇನು ಗೊತ್ತೇ??
ಚಿತ್ರರಂಗದಲ್ಲಿ ನಾಯಕಿಯರ ವಿಚಾರದಲ್ಲಿ ಹೆಚ್ಚಾಗಿ ಚರ್ಚೆಗೆ ಒಳಗಾಗುವ ವಿಚಾರ ಕ್ಯಾಸ್ಟಿಂಗ್ ಕೌಚ್ ಬಗ್ಗೆ. ಮೀ ಟು ಶುರುವಾದ ಬಳಿಕ ಅನೇಕ ನಾಯಕಿಯರು ಭಯ ಪಡೆದ, ತಾವು ಅನುಭವಿಸಿದ ಲೈಂಗಿಕ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅನೇಕ ನಾಯಕಿಯರು ತಮಗೆ ಆದ ಕೆಟ್ಟ ಅನುಭವದ ಬಗ್ಗೆ ಮಾತನಾಡಿರುವುದನ್ನು ನಾವು ಕೇಳಿದ್ದೇವೆ. ಇದೀಗ ಟಾಲಿವುಡ್ ನ ಖ್ಯಾತ ಸೀನಿಯರ್ ನಟಿ ಪ್ರಗತಿ ಸಹ ಈ ವಿಚಾರದ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿ, ಟಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಪ್ರಗತಿ ಅವರು 90ರ ದಶಕದಿಂದಲು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಪ್ರಗತಿ ಅವರು ಆಗಾಗ ತಮ್ಮ ಹೇಳಿಕೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಕಮೆಂಟ್ ಮಾಡಿ ಸುದ್ದಿಯಾಗಿದ್ದಾರೆ, ಕ್ಯಾಸ್ಟಿಂಗ್ ಕೌಚ್ ವಿಚಾರಕ್ಕೆ ಇಡೀ ಚಿತ್ರರಂಗವನ್ನು ದೂರುವುದು ಸರಿಯಲ್ಲ ಎಂದು ಹೇಳಿದ್ದಾರೆ ನಟಿ ಪ್ರಗತಿ. “ನೀವು ಯಾವುದೇ ದೊಡ್ಡ ನಟಿಯರನ್ನು ಕೇಳಿ, ಅವರು ಈ ರೀತಿ ಕ್ಯಾಸ್ಟಿಂಗ್ ಕೌಚ್ ತೊಂದರೆಯನ್ನು ಅನುಭವಿಸಿಲ್ಲ ಎಂದು ಹೇಳುತ್ತಾರೆ. ಸಣ್ಣ ಪುಟ್ಟ ವಿಚಾರ ನಡೆದರು ದೊಡ್ಡ ನಟಿಯರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಕ್ಯಾಸ್ಟಿಂಗ್ ಕೌಚ್ ಆಪಾದನೆಗಳು ಬರುವುದೇ, ಹೆಚ್ಚು ಯಶಸ್ಸು ಕಾಣದ ನಟಿಯರಿಂದ. ಕ್ಯಾಸ್ಟಿಂಗ್ ಕೌಚ್ ಇರಬಹುದು, ಆ ರೀತಿ ಮಾಡುವವರು ಎಲ್ಲಾ ಇಂಡಸ್ಟ್ರಿಯಲ್ಲೂ ಇರುತ್ತಾರೆ. ಒಬ್ಬ ನಾಯಕಿಗಾಗಿ ಅವರು ಸಿನಿಮಾ ಮಾಡುವುದಿಲ್ಲ, ಕೋಟಿ ರೂಪಾಯಿ ಬಂಡವಾಳ ಹಾಕುವವರಿಗೆ 5 ನಿಮಿಷದ ಸಂತೋಷ ಪಾರಿತೋಷಕ ಆಗುವುದಿಲ್ಲ. ಹುಡುಗಿ ಅದಕ್ಕೆ ಒಪ್ಪಿಕೊಂಡರೆ ಮಾತ್ರ ನಟನೆಗೆ ಅವಕಾಶ ಕೊಡುತ್ತೇವೆ ಎನ್ನಲು ಆಗುವುದಿಲ್ಲ, ಪಾತ್ರಕ್ಕೆ ಸರಿಹೊಂದುವ ಹಾಗಿದ್ದರೆ ಮಾತ್ರ ಅವಕಾಶ ಕೊಡುತ್ತಾರೆ. ಸಾಕಷ್ಟು ಪಾತ್ರಗಳು ನಾಯಕಿಯರ ಮೇಲೆ ಕೇಂದ್ರೀಕರಿಸಲಾಗಿರುತ್ತದೆ. ಕ್ಯಾಸ್ಟಿಂಗ್ ಕೌಚ್ ನಟಿಯ ಕೆರಿಯರ್ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನಾನು ನಂಬುವುದಿಲ್ಲ.
ಅಷ್ಟೇ ಅಲ್ಲದೆ, ಪ್ರತಿಭೆ ಇಲ್ಲದೆ, ಕ್ಯಾಸ್ಟಿಂಗ್ ಕೌಚ್ ಅನ್ನು ಕಾರಣವಾಗಿ ನೀಡುವ ನಟಿಯರು ಸಹ ಇದ್ದಾರೆ, ಪಾತ್ರಕ್ಕೆ ಸರಿಹೊಂದುವ ನಾಯಕಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಷ್ಟು ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೇನೆ, ಮನಗೆ ನೆಗಟಿವಿಟಿ ಕಾಣಿಸಿಲ್ಲ. ಒಂದೆರಡು ಸಿನಿಮಾ ಮಾಡಿ ಹೋಗುವವರು ಈ ರೀತಿಯ ಅಪವಾದ ಮಾಡುವುದು ನನಗೆ ಹಾಸ್ಯದ ಹಾಗೆ ಕಾಣಿಸುತ್ತದೆ..” ಎಂದು ಹೇಳಿದ್ದಾರೆ ನಟಿ ಪ್ರಗತಿ.