ದಂಗಲ್, ಬಾಹುಬಲಿ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದ KGF ಚಾಪ್ಟರ್ 2 ಇಷ್ಟರವರೆಗೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
ಹೌದು ಎಲ್ಲರ ನಿರೀಕ್ಷೆಯಂತೆ KGF ಚಾಪ್ಟರ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ತನ್ನ ಪಾರುಪತ್ಯ ಆರಂಭಿಸಿದೆ. ಬೀಸ್ಟ್ ಜೊತೆಗೆ ಬಿಡುಗಡೆ ಆಗಿದ್ದ ಸಿನೆಮಾ ಸ್ವಲ್ಪ ಹಿನ್ನಡೆ ಗಳಿಸಬಹುದು ಎಂದು ಅಭಿಮಾನಿ ಬಳಗ ಹೇಳಿಕೊಳ್ಳುತ್ತಿರುವ ಸಮಯದಲ್ಲಿ ಬೀಸ್ಟ್ ಅನ್ನು ಮನೆಗೆ ಅ-ಟ್ಟಿ ತನ್ನ ಹವಾ ಸೃಷ್ಟಿ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ ರಾಕಿ ಬಾಯ್. ಹಲವಾರು ದಾಖಲೆಗಳನ್ನು ಮು-ರಿಯುತ್ತಾ ಮುಂದೆ ಸಾಗುತ್ತಿದೆ ಸಿನೆಮಾ. ಮುಂಬರುವ ದಿನಗಳಲ್ಲಿ ೧೦೦೦ ಕೋಟಿ ಗಳಿಸಬಹುದು ಎಂದು ಹಲವರ ಅಭಿಪ್ರಾಯ.
ಈಗ ಮತ್ತೊಂದು ದಾಖಲೆ ಬರೆದಿದೆ. ಹೌದು ಅಮೀರ್ ಖಾನ್ ನಟನೆಯ ದಂಗಲ್ ಮತ್ತು ಪ್ರಭಾಸ್ ನಟನೆಯ ಬಾಹುಬಲಿ ಚಿತ್ರವನ್ನು ಬದಿಗೆ ಅಟ್ಟಿದೆ. ಹೌದು ಕಲೆಕ್ಷನ್ ವಿಚಾರದಲ್ಲಿ ಸಿನೆಮಾ ಮುನ್ನುಗ್ಗಿ ಸಾಗುತ್ತಿದೆ. ದಂಗಲ್ ಚಿತ್ರ 388 ಕೋಟಿ ಬಾಚಿದ್ದು ಹಾಗೆ ಬಾಹುಬಲಿ ಚಿತ್ರವು 418ಕೋಟಿ ಗಳಿಕೆ ಮಾಡಿತ್ತು. ಇದರ ಜೊತೆಗೆ ರಜನಿ ಕಾಂತ್ ಅವರ ರೋಬೋಟ್ 2.0 ಚಿತ್ರ 408 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ಇದೀಗ ಇದೆಲ್ಲಾ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ KGF ಚಾಪ್ಟರ್ 2. ಹೌದು 600ಕೋಟಿ ಕಲೆಕ್ಷನ್ ಮಾಡಿರುವ ಚಿತ್ರ ಇದೀಗ RRR ಚಿತ್ರವನ್ನು ಹಿಂದಿಕ್ಕುವ ಎಲ್ಲಾ ಲಕ್ಷಣ ಕಾಣುತ್ತಿದೆ.
ಅದೇ ರೀತಿಯಲ್ಲಿ ಇಷ್ಟರ ವರೆಗಿನ ಸಿನೆಮಾ ಇತಿಹಾಸದಲ್ಲಿ 1031ಕೋಟಿ ಕಲೆಕ್ಷನ್ ಮಾಡಿರುವ ಬಾಹುಬಲಿ 2 ಚಿತ್ರ ಮೊದಲ ಸ್ಥಾನದಲ್ಲಿ ಇದ್ದು. ಸಿನಿ ಅಭಿಮಾನಿಗಳು ಹೇಳುವ ಪ್ರಕಾರ ಈ ರೆಕಾರ್ಡ್ ಕೂಡ ಬ್ರೇಕ್ ಆಗಲಿದೆ ಎಂದು. ಅದೇನೇ ಆಗಲಿ ಚಿತ್ರದ ಯಶಸ್ಸು ಎಲ್ಲಾ ಸಿನಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದು, ಮುಂದಕ್ಕೆ ಚಿತ್ರ ಮತ್ತಷ್ಟು ಯಶಸ್ಸು ಕಾಣಲಿ ಎಂದು ಆಶಿಸೋಣ. ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ಇಂತಹ ಚಿತ್ರಗಳು ಬರಲಿ ಎಂದು ಆಶಿಸುವ.