ದಕ್ಷಿಣ ಸಿನೆಮಾಗಳ ಹವಾದಿಂದ ಹಾರಿ ಹೋಗಿದ್ದ ಬಾಲಿವುಡ್ ಗೆ ಜೀವದಾನ ನೀಡಿದ ಕಾರ್ತಿಕ್ ಆರ್ಯನ್ ನಟನೆಯ ಬೂಲ್ ಬಲಯ್ಯ ೨ ಸಿನೆಮಾ.
ಭಾರತೀಯ ಸಿನೆಮಾ ರಂಗ ಬಾಲಿವುಡ್ ಅಂದರೆ ಭಾರತೀಯ ಸಿನೆಮಾ ಎಂದು ಹೇಳಲಾಗುತ್ತಿತ್ತು, ಅತಿ ದೊಡ್ಡ ಸಿನೆಮಾ ರಂಗ ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು, ನಟರು ಇರುತ್ತಿದ್ದರು. ಇತರ ರಾಜ್ಯದ ಭಾಷೆಯ ಸಿನೆಮಾಗಳನ್ನು ದಕ್ಷಿಣದ ಸಿನೆಮಾ ಅಂತ ಕರಿಯುತ್ತಿದ್ದರೆ ವಿನಃ ಭಾರತೀಯ ಸಿನೆಮಾ ಅಂತ ಕರೆಯುತ್ತಿರಲಿಲ್ಲ. ಅದೇ ಕಾರಣಕ್ಕೆ ಇತರ ಯಾವುದೇ ಭಾಷೆಯ ಸಿನೆಮಾಗಳು ಯಾವುದೇ ಪಾನ್ ಇಂಡಿಯಾ ಸಿನೆಮಾ ಅಂದರೆ ಎಲ್ಲ ಭಾಷೆಯಲ್ಲೂ ಡಬ್ ಮಾಡಿ ಬಿಡುಗಡೆ ಮಾಡುತ್ತಿರಲಿಲ್ಲ. ಆದ್ರೆ ರಾಜಮೌಳಿ ಅವರ ಬಾಹುಬಲಿ ಸಿನೆಮಾ ಬಂದ ನಂತರ ಈ ಪಾನ್ ಇಂಡಿಯಾ ಸಿನೆಮಾಗೆ ಶಕ್ತಿ ಬಂದಂತಾಗಿದೆ.
ದಕ್ಷಿಣದ KGF ಹಾಗು RRR ಚಿತ್ರಗಳು ಬಾಕ್ಸ್ ಆಫೀಸ್ ಅಲ್ಲಿ ದೂಳೆಬ್ಬಿಸಿತು. ಉತ್ತಮ ಮ್ಯೂಸಿಕ್ ಹಾಗು ಸಿನೆಮಾಟೋಗ್ರಪಿ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೆ ಕಾರಣಕ್ಕೆ ಸಿನೆಮಾದ ನಿರೀಕ್ಷೆ ಕೂಡ ಹೆಚ್ಚಾಗಿತ್ತು ಭಾರತೀಯರ ಮನಸಿನ್ನಲ್ಲಿ. ಅದೇ ಕಾರಣಕ್ಕೆ ಒಂದು ತಿಂಗಳು ಮುಗಿದರು ಕೂಡ KGF ಹವಾ ಕಡಿಮೆ ಆಗಿಲ್ಲ. ಬಾಲಿವುಡ್ ನಲ್ಲಿ KGF ನಂತರ ಬಂದ ಎಲ್ಲ ಸಿನೆಮಾಗಳು ಅದು ಕೂಡ ದೊಡ್ಡ ದೊಡ್ಡ ಸ್ಟಾರ್ ಗಳ ಸಿನೆಮಾಗಳು ಮಕಾಡೆ ಮಲಗಿತ್ತು. ಯಾವುದೇ ಕಲೆಕ್ಷನ್ ಮಾಡದೇ ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಿತ್ತು.
ಬಾಲಿವುಡ್ ಸಿನೆಮಾಗಳು ಯಾವುದು ಕೂಡ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡದೇ ಇದಾಗ ಎಲ್ಲರು ಬಾಲಿವುಡ್ ಮುಗಿದೇ ಹೋಯಿತು ಎನ್ನುವಂತಾದರೂ ಈಗ ಅದಕ್ಕೆ ಮರುಜೀವ ನೀಡಿದ್ದು ಕಾರ್ತಿಕ್ ಆರ್ಯನ್ ನಟಿಸಿದ ಬೂಲ್ ಬಲಯ್ಯ ೨ ಸಿನೆಮಾ. ಇದು ಎರಡನೇ ಭಾಗವಾಗಿದೆ ಆದರೆ ಮೊದಲನೇ ಭಾಗಕ್ಕೆ ಯಾವುದೇ ಲಿಂಕ್ ಇಲ್ಲ. ಮೊದಲನೇ ಭಾಗದಲ್ಲಿ ಕಿಲಾಡಿ ಅಕ್ಷಯ್ ಕುಮಾರ್ ನಟಿಸಿದ್ದರು. ಎರಡನೇ ಸಿನೆಮಾದಲ್ಲಿ ಕಾರ್ತಿಕ್ ಆರ್ಯನ್ ನಟನೆ ಮಾಡಿದ್ದೂ ಈ ಸಿನೆಮಾ ಕೂಡ ಕಲೆಕ್ಷನ್ ಮಾಡಲ್ಲ ಎಂದು ಅನೇಕರು ಚರ್ಚೆ ಮಾಡುತ್ತಿದ್ದರು.
ಇದೀಗ ಅವರೆಲ್ಲರ ನಿರೀಕ್ಷೆ ಮೀರಿಸಿ ಉತ್ತಮ ಕಲೆಕ್ಷನ್ ಮಾಡಿದೆ ಬೂಲ್ ಬುಲಯ್ಯ ೨ ಸಿನೆಮಾ. ಈ ವರ್ಷದ ಅತಿ ದೊಡ್ಡ ಓಪನಿಂಗ್ ಪಡೆದ ಸಿನೆಮಾ ಇದಾಗಿದೆ.ಮೊದಲನೇ ದಿನವೇ ೧೪.೧೧ ಕೋಟಿ ಗಳಿಸಿತ್ತು, ಎರಡನೇ ದಿನಕ್ಕೆ ೧೮.೩೪ ಕೋಟಿ, ೩ ನೇ ದಿನ ೨೩.೫೧ ಕೋಟಿ ಹಾಗು ನಾಲ್ಕನೇ ದಿನ ೧೦.೭೫ ಕೋಟಿ ಗಳಿಸುವ ಮೂಲಕ ಕಾಶ್ಮೀರ ಫೈಲ್ಸ್ ನಂತರ ಬಾಲಿವುಡ್ ಗೆ ಬಲ ನೀಡಿದೆ. ಈ ಸಿನೆಮಾ ೧೦೦ ಕೋಟಿ ಸುಲಭವಾಗಿ ದಾಟಲಿದೆ ಎಂದು ವಿಮರ್ಶಕರು ಕೂಡ ಹೇಳುತ್ತಿದ್ದಾರೆ. ಈ ಸಿನೆಮಾದಲ್ಲಿ ಕಾರ್ತಿಕ್ ಆರ್ಯನ್ ಹಾಗು ಕಿಯರ ಅಡ್ವಾಣಿ ಹಾಗು ತಬು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.