ಐಪಿಎಲ್ ೧೫ ನೇ ಸರಣಿಗೆ ಎರಡು ಹೊಸ ತಂಡಗಳು ಸೇರ್ಪಡೆ ಆಗಲಿದೆ. ಆ ಎರಡು ತಂಡಗಳು ಅಹಮದಾಬಾದ್ ಹಾಗು ಲಕ್ನೋಗಳಾಗಿವೆ. ಈ ಬಾರಿ ಎಂಟು ತಂಡಗಳ ಬದಲು ೧೦ ತಂಡಗಳು ಐಪಿಎಲ್ ನಲ್ಲಿ ಮುಖಾಮುಖಿ ಗೊಳ್ಳಲಿದೆ. ಈ ಬಾರಿಯ ಐಪಿಎಲ್ ಗೆ ಕಡಿಮೆ ಅಂದರೂ ಐದು ತಂಡಗಳಿಗೆ ನಾಯಕತ್ವದ ಅವಶ್ಯಕತೆ ಇದೆ. ಅದೇ ಕಾರಣಕ್ಕೆ ಶ್ರೇಯಸ್ ಐಯ್ಯರ್ ಹಾಗು ಕೆ ಎಲ್ ರಾಹುಲ್ ಅವರುಗಳನ್ನು ಖರೀದಿಸಲು ಜಟಾಪಟಿ ನಡೆಯುತ್ತಿದೆ. ಅಲ್ಲದೇ ಲಕ್ನೋ ಹಾಗು ಅಹಮದಾಬಾದ್ ತಂಡಗಳಿಗೆ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಕೂಡಾ ಇದೆ. ಅದೇ ಕಾರಣಕ್ಕೆ ಉತ್ತಮ ಆಟಗಾರರನ್ನು ತಮ್ಮ ಪಾಳಯಕ್ಕೆ ಕರೆ ತರಲು ಸಿದ್ದತೆ ನಡೆಸಿದೆ.
ಇದರ ನಡುವೆ ಅಹಮದಾಬಾದ್ ತಂಡಕ್ಕೆ ನಾಯಕನಾಗಿ ಶ್ರೇಯಸ್ ಐಯ್ಯರ್ ಆಯ್ಕೆ ಆಗುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶ್ರೇಯಸ್ ಹರಾಜು ಪ್ರಕ್ರಿಯೆ ಮೊದಲೇ ತಂಡವನ್ಮು ಸೇರಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೇಯಸ್ ಐಯ್ಯರ್ ಅವರನ್ನು ದಿಲ್ಲಿ ಕ್ಯಾಪಿಟಲ್ ತಂಡ ದಿಂದ ಬಿಟ್ಟ ನಂತರ ಹರಾಜಿಗೆ ಬರಲಿದೆ ಶ್ರೇಯಸ್ ಹೆಸರು.
ದಿಲ್ಲಿ ಕ್ಯಾಪಿಟಲ್ ಗೆ ನಾಯಕ ಆಗಬೇಕೆಂದಿದ್ದರು ಶ್ರೇಯಸ್ ಐಯ್ಯರ್. ಕೆಲ ಕಾಲ ಗಾಯಾಳು ಆಗಿ ಹೊರಗೆ ಉಳಿದಿದ್ದರಿಂದ ನಾಯಕ ಪಟ್ಟ ರಿಷಬ್ ಪಂತ್ ಗೆ ದೊರೆಯಿತು. ರಿಷಬ್ ಉತ್ತಮ ರೀತಿಯಲ್ಲಿ ನಾಯಕ ಸ್ಥಾನ ನಿಭಾಯಿಸಿದ್ದರಿಂದ ೧೫ ನೇ ಸರಣಿಗೆ ರಿಷಬ್ ಪಂತ್‌ರನ್ನು ದಿಲ್ಲಿ ಉಳಿಸಿಕೊಂಡಿದೆ. ಇತ್ತೀಚಿಗೆ ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿ ಮೊದಲ ಇನ್ನಿಂಗ್ಸ್ ಅಲ್ಲಿ ಶತಕ ಹಾಗು ಎರಡನೇ ಇನ್ನಿಂಗ್ಸ್ ಅಲ್ಲಿ ಅರ್ಧಶತಕ ದಾಖಲಿಸಿ ಪಂದ್ಯ ದಿಕ್ಕು ಬದಲಾಯಿಸುವಲ್ಲಿ ಮಹತ್ವದ ಪಾತ್ರವಹಿಸಿ ತಾನು ಉತ್ತಮ ಫಾರ್ಮ್ ಅಲ್ಲಿ ಇದ್ದೇನೆ ಎನ್ನುವ ಸಂದೇಶ ಕೊಟ್ಟಿದ್ದರು.